ಬಂಟ್ವಾಳ: ಕಲ್ಲಡ್ಕ ನಿವಾಸಿ ಅಬೂಬಕ್ಕರ್ ಯಾನೆ ಹೋಟೆಲ್ ಅಬ್ಬುವಾಕ (70 ವರ್ಷ) ಹೃದಯಾಘಾತದಿಂದ ನಿಧನರಾದರು.
ಕಲ್ಲಡ್ಕ ಮಸೀದಿ ಕಟ್ಟಡದಲ್ಲಿ ಹಲವಾರು ವರ್ಷಗಳಿಂದ ಹೋಟೆಲ್ ಉದ್ಯಮ ನಡೆಸುತ್ತಿದ ಅವರು ಹೋಟೆಲ್ ಅಬ್ಬುವಾಕ ಎಂದೇ ಚಿರಪರಿಚಿತರಾಗಿದ್ದರು.

ಮೃತರು ಪತ್ನಿ, ಇಬ್ಬರು ಪುತ್ರರು, ಐವರು ಪುತ್ರಿಯರ ಸಹಿತ ಅಪಾರ ಸಂಖ್ಯೆಯ ಬಂಧು ಬಳಗವನ್ನು ಅಗಲಿದ್ದಾರೆ. ಗುರುವಾರ ಬೆಳಿಗ್ಗೆ 10 ಗಂಟೆಯ ವೇಳೆಗೆ ಮೃತರು ಅಂತಿಮ ಕಾರ್ಯ ಕಲ್ಲಡ್ಕ ಮಸೀದಿಯಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.


