
ಕಲಾವಿದರ ಉದ್ದೇಶಿತ ಕಾರ್ಯಗಳು ಮುನ್ನಲೆಗೆ ಬರಲಿವೆ: ಡಾ| ಸುರೇಂದ್ರಕುಮಾರ್ ಹೆಗ್ಡೆ
ಮುಂಬಯಿ, ಸೆ.25: ಒಳ್ಳೆಯ ಕೆಲಸ ಮಾಡುವ ತುಡಿತ ಇದ್ದವರು ಎಲ್ಲೂ ಪದಾಧಿಕಾರಿಯೇ ಆಗಬೇಕೆಂದಿಲ್ಲ. ಸಾಮಾನ್ಯ ಸದಸ್ಯನಾಗಿಯೂ ನಿಸ್ವಾರ್ಥ ಸೇವೆ ಸಲ್ಲಿಸಲು ಸಾಧ್ಯ. ಪರಿಷತ್ತುನ ಸ್ವಂತಃ ಕಚೇರಿ ಹೊಂದಿ ನಮ್ಮ ಸಂಘಕ್ಕೆ ಒಂದು ನೆಲೆ ಸಿಕ್ಕಿದೆ. ಪರಿಷತ್ತುವಿನ ಬಹಳ ಮುಖ್ಯವಾದ ಕೆಲಸಗಳು ಈ ಅವಧಿಯಲ್ಲಿ ಪೂರ್ಣಗೊಂಡಿರುವುದರಿಂದ ಮುಂದಿನ ಅವಧಿಯಲ್ಲಿ ನಮ್ಮ ಉದ್ದೇಶಿತ ಕಾರ್ಯಗಳು ಮುನ್ನಲೆಗೆ ಬರಲಿವೆ ಎಂದು ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ ಅಧ್ಯಕ್ಷ ಡಾ| ಸುರೇಂದ್ರಕುಮಾರ್ ಹೆಗ್ಡೆ ತಿಳಿಸಿದರು.
ಇಂದಿಲ್ಲಿ ಮಂಗಳವಾರ ಸಾಂತಕ್ರೂಜ್ ಪೂರ್ವದ ಮಧ್ವ ಭವನದ (ಪೇಜಾವರ ಮಠ) ಶ್ರೀ ವಿಶ್ವೇಶ ತೀರ್ಥ ಸಭಾಗೃಹದಲ್ಲಿ ನಡೆಸಲಾದ ಪರಿಷತ್ತುವಿನ 17ನೇ ವಾರ್ಷಿಕ ಮಹಾಸಭೆಯ ಸಭಾಧ್ಯಕ್ಷತೆ ವಹಿಸಿ ಸುರೇಂದ್ರಕುಮಾರ್ ಮಾತನಾಡಿ ಷೋಡಶ ಸಂಭ್ರಮದಲ್ಲಿರುವ ಕನ್ನಡಿಗ ಕಲಾವಿದರ ಪರಿಷತ್ತು 18ರ ಹೊಸ್ತಿಲ ಪಯಣದಲ್ಲಿದೆ. ಎಲ್ಲಾ ಪ್ರಕಾರದ ಕಲಾಸಂಸ್ಥೆಗಳ ಮಾತೃಸಂಸ್ಥೆಯಾದ ನಮ್ಮ ಪರಿಷತ್ತು ಹಲವಾರು ವರುಷಗಳಿಂದ ಪ್ರಯಣತ್ನದ ಸ್ವಂತ ಕಚೇರಿ ಸದಸ್ಯರೆಲ್ಲ್ಲರ ಸಾಂಘಿಕ ಪ್ರಯತ್ನದ ಫಲಶ್ರುತಿ, ಕಲಾಮಾತೆಯ ಅನುಗ್ರಹ, ಬೃಹನ್ಮುಂಬಯಿಯಲ್ಲಿನ ಸಹೃದಯಿ ಕಲಾಪ್ರೇಮಿ ದಾನಿಗಳ ಸಹಕಾರದಿಂದ ಸದ್ಯ ಸಾಕಾರಗೊಂಡಿದೆ. ನಮ್ಮ ಬಹುದೊಡ್ದ ಯೋಜನೆಯಾದ ಕಲಾವಿದರ ಮಾಹಿತಿ ಗ್ರಂಥ ‘ಕಲಾವಿದರ ಕೈಪಿಡಿ’ ಕೂಡಾ ಈ ವರ್ಷ ಸದಸ್ಯರ ಕೈಸೇರಿದೆ ಎಂಬ ತೃಪ್ತಿ ನಮಗಿದೆ. ಪ್ರಸ್ತುತ ವರ್ಷದಲ್ಲಿ ಕಲಾವಿದರ ಶ್ರೇಯೋಭಿವೃದ್ಧಿಗಾಗಿನ ನಮ್ಮ ಕನಸಿನ ಬಹುದೊಡ್ಡ ಯೋಜನೆ ‘ಕ್ಷೇಮನಿಧಿ’ಗಾಗಿ ಬಹು ಮೊತ್ತವನ್ನೂ ಶೀಘ್ರವಾಗಿ ಸಂಗ್ರಹಿಸುವ ಭರವಸೆ ನಮಗಿದೆ. ಪರಿಷತ್ತ್‌ನ ಸಿದ್ಧಿ ಸಾಧನೆಗಳು ಮಹಾರಾಷ್ಟ್ರವಲ್ಲದೆ ಕರ್ನಾಟಕದಲ್ಲೂ ಪ್ರಸಿದ್ದಿಯಲ್ಲಿದೆ ಎಂಬ ಸಂತೋಷ ನಮ್ಮೆಲ್ಲರಿಗಿದೆ ಎಂದರು.

ಪರಿಷತ್ತ್‌ನ ಉಪಾಧ್ಯಕ್ಷರುಗಳಾದ ಕಮಲಾಕ್ಷ ಸರಾಫ್ ಮತ್ತು ಸಿಎ| ಶ್ರೀನಿವಾಸ ಪಿ.ಸಫಲ್ಯ, ಗೌರವ ಕಾರ್ಯದರ್ಶಿ ಚಂದ್ರಶೇಖರ ಭಟ್, ಗೌರವ ಖಜಾಂಚಿ ಪಿ.ಬಿ ಚಂದ್ರಹಾಸ್, ಜೊತೆ ಕಾರ್ಯದರ್ಶಿ ಚಂದ್ರಾವತಿ ದೇವಾಡಿಗ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ತಾರಾ ಆರ್.ಬಂಗೇರ, ಪ್ರಕಾಶ್ ಶೆಟ್ಟಿ ಪಯ್ಯಾರು, ಎನ್.ಟಿ ಪೂಜಾರಿ, ಕೊಲ್ಯಾರು ರಾಜು ಶೆಟ್ಟಿ, ಬಾಲಕೃಷ್ಣ ಡಿ.ಶೆಟ್ಟಿ ವೇದಿಕೆಯಲ್ಲಿದ್ದು ದೀಪ ಪ್ರಜ್ವಲಿಸಿ ಮಹಾಸಭೆಗೆ ಚಾಲನೆಯನ್ನಿತ್ತರು.
ಉಪಾಧ್ಯಕ್ಷ ಶ್ರೀನಿವಾಸ ಪಿ.ಸಫಲ್ಯ ಮಾತನಾಡಿ ನೆಲೆಯ ಮೇಲೆ ಕಲೆ ನಿಂತಾಗ ಆದು ಪ್ರಜ್ವಲಿಸುತ್ತದೆ. ಕಲಾವಿದರು, ಕ್ಷಣವಾದರೂ ಈ ಸಂಸ್ಥೆಗೆ ಸ್ಪಂದಿಸಬೇಕು. ಕೆಲವು ಸದಸ್ಯರು ತಮ್ಮ ಅಸಹಾಯಕ ಸ್ಥಿತಿಯಲ್ಲಿ ಸಂಸ್ಥೆಯ ಬಳಿ ಬಂದು ಮತ್ತೆ ದೂರ ನಿಲ್ಲುವಾಗ ಖೇದವಾಗುತ್ತದೆ ಎಂದು ವಿಷಾಧಿಸಿದರು.
ಚಂದ್ರಶೇಖರ ಭಟ್ ಗತವಾರ್ಷಿಕ ವಾರ್ಷಿಕ ಮಹಾಸಭೆಯ ವರದಿ ಮಂಡಿಸಿದರು. ಪಿ.ಬಿ ಚಂದ್ರಹಾಸ್ ಗತವಾರ್ಷಿಕ ಲೆಕ್ಕಪತ್ರಗಳನ್ನು ಮಂಡಿಸಿದರು. 2025-2028ನೇ ಸಾಲಿಗೆ ನೂತನ ಕಾರ್ಯಕಾರಿ ಸಮಿತಿ ರಚಿಸಲಾಯಿತು. ಆಂತರಿಕ ಲೆಕ್ಕಪರಿಶೋಧಕರನ್ನಾಗಿ ಮತ್ತೆ ಜಗದೀಶ್ ಡಿ.ರೈ ಅವರನ್ನೇ ಹಾಗೂ ಬಾಹ್ಯ ಲೆಕ್ಕಪರಿಶೋಧ ಕರನ್ನಾಗಿ ರಾವ್ ಎಂಡ್ ಅಶೋಕ್ ಚಾರ್ಟರ್ಡ್ ಅಕೌಂಟೆಂಟ್ಸ್ ಸಂಸ್ಥೆಯನ್ನೇ ಸಭೆಯು ಸರ್ವಾನುಮತದಿಂದ ಆಯ್ಕೆಗೊಳಿಸಿತು.

ಪರಿಷತ್ತುವಿನ ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಪದ್ಮನಾಭ ಸಸಿಹಿತ್ಲು, ಎನ್.ಪೃಥ್ವಿರಾಜ್ ಮುಂಡ್ಕೂರು, ಲ| ಮುರಳೀಧರ ಹೆಗಡೆ, ವಿಶೇಷ ಆಹ್ವಾನಿತ ಸದಸ್ಯರುಗಳಾದ ಡಿ.ಭಾಸ್ಕರ ಶೆಟ್ಟಿ, ಚಂದ್ರಕಾಂತ ಕೆ.ಸಾಲಿಯಾನ್, ಜೂಲಿಯೆಟ್ ಪಿರೇರಾ, ಸುಶೀಲಾ ಎಸ್.ದೇವಾಡಿಗ, ಮಹಿಳಾ ವಿಭಾಗದ ಸಂಚಾಲಕಿ ಕುಸುಮಾ ಸಿ.ಪೂಜಾರಿ, ಸದಸ್ಯೆಯರುಗಳಾದ ಅಮಿತ ಜತ್ತನ್, ಪ್ರತಿಮಾ ಬಿ.ಬಂಗೇರ, ಸುರೇಖಾ ಹೆಚ್.ದೇವಾಡಿಗ ಸೇರಿದಂತೆ ಸದಸ್ಯರನೇಕರು ಹಾಜರಿದ್ದು ಸಭೆಯಲ್ಲಿನ ಸಲಹೆಗಾರರಾದ ಕೆ.ಕೆ ಶೆಟ್ಟಿ, ಡಾ| ಭರತಕುಮಾರ್ ಪೊಲಿಪು, ಸದಸ್ಯೆ ಡಾ| ಜಿ.ಪಿ ಕುಸುಮಾ ಮಾತನಾಡಿ ಸಲಹೆ ಸೂಚನೆಗಳನ್ನೀಡಿ ಪರಿಷತ್ತುವಿಗೆ ಉಜ್ವಲ ಭವಿಷ್ಯ ಹಾರೈಸಿದರು.
ಹಿರಿಯ ರಂಗ ಕಲಾವಿದರಾಗಿದ್ದು ಪರಿಷತ್ತ್‌ನ ಸ್ಥಾಪಕಾಧ್ಯಕ್ಷರಾಗಿದ್ದು ಇತ್ತೀಚೆಗೆ ನಿಧನರಾದ ಎಸ್.ಟಿ ವಿಜಯಕುಮಾರ್ ತಿಂಗಳಾಯ ಮತ್ತು ಭೋಜ ಬಂಗೇರ ಅವರ ಆಗಲಿಕೆಗೆ ಸಂತಾಪ ಸೂಚಿಸಿ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಡಾ| ಸುರೇಂದ್ರಕುಮಾರ್ ಹೆಗ್ಡೆ, ಶ್ರೀನಿವಾಸ ಪಿ.ಸಫಲ್ಯ, ಡಾ| ಭರತಕುಮಾರ್ ಪೊಲಿಪು, ಬಾಲಕೃಷ್ಣ ಶೆಟ್ಟಿ ಅದ್ಯಪಾಡಿ, ಡಾ| ಸತೀಶ್ ಎನ್.ಬಂಗೇರ, ಶೈಲೇಶ್ ಪುತ್ರನ್, ವಾಸುದೇವ್ ಮಾರ್ನಾಡ್, ಜಗದೀಶ್ ಡಿ.ರೈ, ಓಂದಾಸ್ ಕಣ್ಣಂಗಾರ್, ಅಶೋಕ್ ಕುಕ್ಯಾನ್ ಸಸಿಹಿತ್ಲು, ತಾರಾ ಆರ್.ಬಂಗೇರ ನುಡಿ ನಮನ ಸಲ್ಲಿಸಿ ಸಂತಾಪ ಸೂಚಿಸಿದರು.
ಜಯಲಕ್ಷ್ಮೀ ದೇವಾಡಿಗ ಅವರ ಪ್ರಾರ್ಥನೆಯೊಂದಿಗೆ ಮಹಾಸಭೆ ಆರಂಭ ಗೊಂಡಿತು. ಬಾಲಕೃಷ್ಣ ಶೆಟ್ಟಿ ಅದ್ಯಪಾಡಿ ಸಭಾ ಕಲಾಪ ಆರಂಭಿಸಿದರು. ಪಿ.ಬಿ ಚಂದ್ರಹಾಸ್ ಉಪಕಾರ ಸ್ಮರಿಸಿದರು.



