ಸೆ.20: ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರಿನ ತಿಂಗಳ ನಾಟಕ ಸಂಭ್ರಮದಡಿಯಲ್ಲಿ ನಾಟಕ ಪ್ರದರ್ಶನ

Date:

ಕನ್ನಡ ಕಲಾ ಕೇಂದ್ರ ಮುಂಬಯಿ ಚೌಕಟ್ಟಿನಾಚೆಯ ಚಿತ್ರ ನಾಟಕ ಪ್ರದರ್ಶನ 

ಮುಂಬಯಿ, ಸೆ.15: ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು ಇದರ ತಿಂಗಳ ನಾಟಕ ಸಂಭ್ರಮದಡಿಯಲ್ಲಿ  ಬೆಂಗಳೂರುನ ಮಲ್ಲತ್ತಹಳ್ಳಿಯಲ್ಲಿ ಅಲ್ಲಿನ ಕಲಾಗ್ರಾಮ ಸಮುಚ್ಛಯ ಭವನದಲ್ಲಿ ಇದೇ ಬರುವ ಶನಿವಾರ (ಸೆ.20) ಸಂಜೆ 6:00 ಗಂಟೆಗೆ ‘ಚೌಕಟ್ಟಿನಾಚೆಯ ಚಿತ್ರ’ ನಾಟಕವನ್ನು ಪ್ರಸ್ತುತ ಪಡಿಸಲಿದ್ದಾರೆ. ತೃತೀಯ ಲಿಂಗಿಗಳ ಬದುಕಿನ ಕಥೆವ್ಯಥೆಯುಳ್ಳ ನಾಟಕವನ್ನು ಮುಂಬಯಿಯಲ್ಲಿನ ಹೆಸರಾಂತ ರಂಗಕರ್ಮಿ ಸಾ.ದಯಾ  (ದಯಾನಂದ್)  ರಚನೆ ಮತ್ತು  ನಿರ್ದೇಶನದಲ್ಲಿ ಪ್ರದರ್ಶನ ಕಾಣಲಿದೆ. ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಡಾ| ಕೆ.ವಿ ನಾಗರಾಜಮೂರ್ತಿ ಅಧ್ಯಕ್ಷತೆಯಲ್ಲಿ ಅಂದು ಜರಗುವ ಕಾರ್ಯಕ್ರಮದಲ್ಲಿ ತಿಂಗಳ ಅತಿಥಿಯಾಗಿ ರಂಗ ಸಂಘಟಕ ವಿ.ಎಂ ನಾಗೇಶ್ (ಚಡ್ಡಿ ನಾಗೇಶ್) ಆಗಮಿಸಲಿರುವರು.

ಕನ್ನಡ ಕಲಾ ಕೇಂದ್ರ ಮುಂಬಯಿ ಇದರ ಅಧ್ಯಕ್ಷ ಮಧುಸೂದನ ಟಿ.ಆರ್  ಈ ನಾಟಕವನ್ನು ನಿರ್ವಹಿಸಲಿದ್ದು ಸಾ.ದಯಾ ಅವರದ್ದೇ  ಬೆಳಕು  ಸಂಯೋಜನೆ, ನಯನಾ ಸಾಲ್ಯಾನ್ ಮತ್ತು ಗೀತಾ ದೇವಾಡಿಗ ವಸ್ತ್ರ ವಿನ್ಯಾಸ, ಗಣೇಶ್ ಕುಮಾರ್ ಅವರ ಕಲೆ ಮತ್ತು ರಂಗ ಪರಿಕರದೊಂದಿಗೆ ದಿವಾಕರ್ ಕಟೀಲ್ ಅವರ ಸಂಗೀತ, ವಿದ್ದು ಉಚ್ಚಿಲ್ ಅವರ ರಂಗ ವಿನ್ಯಾಸ, ಮನೋಹರ್ ಶೆಟ್ಟಿ ನಂದಳಿಕೆ ಮತ್ತು ಪೂರ್ಣಿಮಾ ಮಧುಸೂದನ ಟಿ. ಆರ್ ಅವರ ರಂಗ ನಿರ್ವಹಣೆ, ರಾಮಾನುಗ್ರಹ ಕ್ಯಾಟರರ್ಸ್‌ನ ಸಹಕಾರ, ಶಶಿ ಕಿರಣ್, ಸುಷ್ಮಾ ಆಚಾರ್ಯ ಅವರ ಸಾಂಗತ್ಯದಲ್ಲಿ ನಾಟಕ ಪ್ರದರ್ಶನಗೊಳ್ಳಲಿದೆ. ಮಂಜುನಾಥ್ ಶೆಟ್ಟಿಗಾರ್ ಪ್ರಸಾಧನಗೈಯಲಿದ್ದಾರೆ.

ಮಧುಸೂದನ ಟಿ.ಆರ್ ಸೇರಿ ಒಟ್ಟು 20 ಹಿರಿಕಿರಿಯ ಕಲಾವಿದರು, 32 ಭಿನ್ನಭಿನ್ನ ಪಾತ್ರಗಳನ್ನು ನಿರ್ವಹಿಸಲಿದ್ದಾರೆ. ವೇದಿಕೆ ಮೇಲೆ ಮತ್ತು ವೇದಿಕೆ ಹಿಂದುಗಡೆ ಒಟ್ಟು 27 ಮಂದಿ ಕಲಾವಿದರು ತೊಡಗಿಸಿ ಕೊಂಡಿರುವರು. ರಂಗಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ತಂಡವನ್ನು ಪ್ರೋತ್ಸಾಹಿಸಬೇಕೆಂದು ಕನ್ನಡ ಕಲಾ ಕೇಂದ್ರ ಮುಂಬಯಿ ವಿನಂತಿದೆ.

ಈ ಹೊತ್ತಿಗೆ ಬೆಂಗಳೂರು ಸಂಚಾಲಕರಾದ ಜಯಲಕ್ಷ್ಮಿ ಪಾಟೀಲ್, ಕರ್ನಾಟಕ ನಾಟಕ ಅಕಾಡೆಮಿ ಇದರ ಕಾರ್ಯಕ್ರಮ ಸಂಚಾಲಕರಾದ ಜಿಪಿಓ ಚಂದ್ರು,  ಜಗದೀಶ್ ಜಾಲ, ಅಕಾಡೆಮಿ ರಿಜಿಸ್ಟ್ರಾರ್ (ಪ್ರ) ಎನ್.ನಮ್ರತ ಮತ್ತು ಸರ್ವ ಸದಸ್ಯರು  ನಾಟಕ ಕಲಾವಿದರಿಗೆ ಆತ್ಮೀಯ ಸ್ವಾಗತ ಕೋರಿದ್ದಾರೆ.

ಮುಂಬಯಿ ಮಹಾನಗರದಲ್ಲಿ ಕನ್ನಡ ಕಲಾ ಕೇಂದ್ರವು ಎಪ್ಪತ್ತು ವರುಷಗಳಿಂದ ನಾಟಕೋತ್ಸವ, ರಂಗಶಿಬಿರ, ಪ್ರಶಸ್ತಿ ಗೌರವ, ವಿವಿಧ ಕಲೆ, ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು  ಹಮ್ಮಿಕೊಂಡು ಬಂದಂತಹ ಪ್ರತಿಷ್ಠಿತ ಸಂಸ್ಥೆ. ಈಗಾಗಲೇ 550ಕ್ಕೂ  ಹೆಚ್ಚು ನಾಟಕ ರಂಗ ಪ್ರಯೋಗ , 75ಕ್ಕೂ  ಹೆಚ್ಚು  ಯಕ್ಷಗಾನ  ಪ್ರದರ್ಶನ, ಹಲವು  ನೃತ್ಯ, ಸಂಗೀತ, 10ಕ್ಕೂ  ಹೆಚ್ಚು  ನಾಟಕ  ತರಬೇತಿ  ಶಿಬಿರ  ಏರ್ಪಡಿಸಿದ  ಹೆಗ್ಗಳಿಕೆಗೆ ಪಾತ್ರವಾಗಿದೆ. ಕಳೆದ ಫೆಬ್ರುವರಿ ತಿಂಗಳಲ್ಲಿ ಕಲಾ ಕೇಂದ್ರದ ಮೂಲಕ ಸಾಗರದ ನಾಟಕೋತ್ಸವದಲ್ಲಿ ‘ಬಿಸಿಲು ಬೆಳದಿಂಗಳು’ ನಾಟಕ ಪ್ರದರ್ಶನದ ಅದ್ಧೂರಿ ಯಶಸ್ಸಿನ ಬೆನ್ನಲ್ಲಿ ಈಗ ಸಂಸ್ಥೆಯ ಕಿರೀಟಕ್ಕೆ ಮತ್ತೊಂದು ಗರಿ.

ಅದೇ ದಿನ ಸಂಜೆ ‘ಚೌಕಟ್ಟಿನಾಚೆಯ ಚಿತ್ರ ನಾಟಕದ ಕಲಾವಿದರೊಂದಿಗೆ ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ಹೋರಾಟಗಾರ್ತಿ ಹಾಗೂ ಒಂದೆಡೆ ಸಂಸ್ಥೆಯ ಸಂಸ್ಥಾಪಕಿಅಕ್ಕೆ  ಪದ್ಮಶಾಲಿ ಸಂವಾದ ನಡೆಸಲಿದ್ದಾರೆ ಎಂದು ತಂಡದ ಮುಖ್ಯಸ್ಥರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಲೂಡೊ ಬೋರ್ಡ್ ಶಂಕು ಆಕಾರದ ಪ್ಲಾಸ್ಟಿಕ್ ಕಾಯ್ನ್ ನುಂಗಿದ ಎಂಟರ ಬಾಲಕಿ ಉಸಿರುಗಟ್ಟಿ ಸಾವು.

ತೊಕ್ಕೊಟ್ಟು ಸಮೀಪದ ಕೊಲ್ಯದಲ್ಲಿ ದಾರುಣ ಘಟನೆ. ಉಳ್ಳಾಲ:ಫೆ-21:ಸಹೋದರ ಸಹೋದರಿಯೊಂದಿಗೆ ಮನೆಯಲ್ಲಿ ಲೂಡ ಆಟದಲ್ಲಿ...

ಹಿರಿಯ ಪತ್ರಕರ್ತ ಸುಂದರ ಕಬಕ ನಿಧನ

ಮಂಗಳೂರು; ಕಬಕ ನಿವಾಸಿ ಹಲವು ರಾಜ್ಯ ಮಟ್ಟದ ಟೀವಿ ಚಾನಲುಗಳಲ್ಲಿ ಕಾರ್ಯ...

ಬಸ್ ದುರಂತದಲ್ಲಿ ಮೃತಪಟ್ಟ ಅಟೋ ಚಾಲಕನ ಕುಟುಂಬಕ್ಕೆ ನೆರವು

ಉಳ್ಳಾಲ: ಇತ್ತೀಚೆಗೆ ತಲಪಾಡಿ ಯಲ್ಲಿ ನಡೆದ ಬಸ್ ದುರಂತದಲ್ಲಿ ಮೃತಪಟ್ಟ ದ.ಕ....

ವಿದ್ಯಾರ್ಥಿಗಳಿಂದ ಬಸ್ ನಿರ್ವಾಹಕನ ಮೇಲೆ ಹಲ್ಲೆಗೆ ಖಂಡನೆ

ಉಳ್ಳಾಲ: ಫೆ.19ರಂದು ಗುರುವಾರ ಬೆಳಿಗ್ಗೆ ಬಿಸಿ ರೋಡ್‌ನಿಂದ ವಯಾ ಮಂಚಿ–ಮುಡಿಪು ಕಡೆ...