ಶಾರ್ಜಾ: ಕರ್ನಾಟಕ ಸಂಘ ಶಾರ್ಜಾ ಇದರ 23ನೇ ವಾರ್ಷಿಕೋತ್ಸವದ ಪ್ರಯುಕ್ತ ‘ನಮ್ಮ ಕನ್ನಡ ಹಬ್ಬ’ ಕರ್ನಾಟಕ ರಾಜ್ಯೋತ್ಸವ ಆಚರಣೆ ಮತ್ತು ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ನವೆಂಬರ್ 16 ರಂದು ಶಾರ್ಜಾದಲ್ಲಿ ನಡೆಯಲಿದೆ.

ಸಂಸ್ಕೃತಿ ಮತ್ತು ಸಾಮಾಜ ಸೇವೆ ಸಲ್ಲಿಸುತ್ತಿರುವ ಶ್ರೀ ರೋನಾಲ್ಡ್ ಮಾರ್ಟಿಸ್ ಅವರಿಗೆ ಮಯೂರ ವಿಶ್ವಮಾನ್ಯ ಕನ್ನಡಿಗ ಅಂತರರಾಷ್ಟ್ರೀಯ ಪ್ರಶಸ್ತಿ, ಶ್ರೀ ಅಬ್ದುಲ್ ಲತೀಫ್ ಮುಲ್ಕಿ ಅವರು ಸಮುದಾಯ ಮತ್ತು ಮಾನವೀಯ ಸಾಮಾಜಿಕ ಸೇವೆಗಳಲ್ಲಿ ನೀಡಿದ ಅಸಾಧಾರಣ ಕೊಡುಗೆಗಾಗಿ ವಿಶೇಷ ಪ್ರಶಸ್ತಿಗೆ ಭಾಜನರಾಗಿದ್ದಾರೆ, ಮತ್ತು ರಂಗಭೂಮಿ ಕ್ಷೇತ್ರದ ವಾಸು ಶೆಟ್ಟಿ ಅವರಿಗೆ ವಿಶೇಷ ಸಾಧಕ ಪ್ರಶಸ್ತಿ ವಿತರಣೆ ನಡೆಯಲಿದೆ.


ಅನಿವಾಸಿ ಕರ್ನಾಟಕದ ಮಕ್ಕಳಿಗೆ ‘ಚಿಣ್ಣರ ಚಿಲಿಪಿಲಿ’ ಛದ್ಮವೇಷ ಸ್ಪರ್ಧೆ ಹಾಗೂ ಬಾನ ದಾರಿಯಲ್ಲಿ ಪ್ರತಿಭಾ ಕಾರಂಜಿ ಈ ಬಾರಿಯ ವಿಶೇಷ ಕಾರ್ಯಕ್ರಮ ನಡೆಯಲಿದೆ.




