ಕಾಪು ಶ್ರೀ ಹಳೇ ಮಾರಿಯಮ್ಮ ದೇವಸ್ಥಾನದಲ್ಲಿನ ಶ್ರೀ ದೇವಿ ಸನ್ನಿಧಿಯಲ್ಲಿ ಧರ್ಮಪಾಲ ದೇವಾಡಿಗ ಪರಿವಾರ ಪೂರೈಸಿದ ಹರಕೆ ಮಾರಿಪೂಜೆ

Date:

ಮುಂಬಯಿ, ಅ 31: ದೇವಾಡಿಗ ಮಹಾಮಂಡಲ ಇದರ ಅಧ್ಯಕ್ಷ ಹಾಗೂ ದೇವಾಡಿಗ ಸಂಘ ಮುಂಬಯಿ ಇದರ ಮಾಜಿ ಅಧ್ಯಕ್ಷ ಧರ್ಮಪಾಲ ಯು.ದೇವಾಡಿಗ ಪರಿವಾರವು ಇಂದಿಲ್ಲಿ ಸ್ವಸ್ತಿ ಶ್ರೀ ವಿಶ್ವಾವಸು ನಾಮ ಸಂರದ ತುಲಾ ಮಾಸ ಮಂಗಳವಾರ ದಿನ ಉಡುಪಿ ಉಚ್ಚಿಲ ಇಲ್ಲಿನ ಶ್ರೀ ಹಳೇ ಮಾರಿಯಮ್ಮ ದೇವಸ್ಥಾನ ಕಾಪು ಶ್ರೀ ದೇವಿ ಸನ್ನಿಧಿಯಲ್ಲಿ ಹರಕೆ ಮಾರಿಪೂಜೆ ಸೇವೆ ಆರಂಭಗೊಂಡಿತು.

ಧರ್ಮಪಾಲ ದೇವಾಡಿಗ ಮತ್ತು ಸುಜಾತಾ ಧರ್ಮಪಾಲ್ ಪರಿವಾರ ಕುಲದೇವರು ಶ್ರೀ ಏಕನಾಥೇಶ್ವರೀ ದೇವರಿಗೆ ದೀಪ ಬೆಳಗಿಸಿ ಹರಕೆ ಕಾರ್ಯಕ್ರಮಕ್ಕೆ ಚಾಲನೆಯನ್ನಿತ್ತರು. ಕಾಪು ಅಲ್ಲಿನ ಶ್ರೀಸತ್ಯ ನಿವಾಸದ ಸ್ವರ್ಗೀಯ ಮಾತಪಿತರಾದ ಅಪ್ಪಿ ಯು.ದೇವಾಡಿಗ ಮತ್ತು ಉಮ್ಮಣ್ಣ ದೇವಾಡಿಗ ಅವರನ್ನು ದೇವಾಡಿಗ ಕುಟುಂಬಸ್ಥರು ಸ್ಮರಿಸಿ ಸಾಂಪ್ರದಾಯಿಕವಾಗಿ ಪೂಜಾಧಿಗಳಿಗೆ ತೊಡಗಿಸಿ ಕೊಂಡರು.ರಾತ್ರಿ ಶ್ರೀ ವೆಂಕಟರಮಣ ದೇವಸ್ಥಾನ ಕಾಪು ಇಲ್ಲಿ ಹೂವಿನ ಪೂಜೆ ಪೂರೈಸಿ ಮೆರವಣಿಗೆ ಮೂಲಕ ದೇವಾಡಿಗ ಪರಿವಾರವು ಶ್ರೀ ದೇವಿ ಸನ್ನಿಧಿಗೆ ಚಿತ್ತೈಸಿ ಮಾರಿಪೂಜೆ ಪೂರೈಸಿತು.

ಪ್ರಧಾನ ಆರ್ಚಕ ಕೆ.ಕಮಲಾಕ್ಷ ಶೆಣೈ ಪೂಜಾ ಕೈಂಕರ್ಯಗಳನ್ನು ನೆರವೇರಿಸಿ ನೆರೆದ ಸದ್ಭಕ್ತರನ್ನು ಹರಸಿದರು. ನಾರಾಯಣ ಪಾತ್ರಿ, ದಯಾನಂದ ಪಾತ್ರಿ ಅವರು ಸಹಕರಿಸಿದರು.ಬುಧವಾರ ವಿವಿಧ ಪೂಜಾಧಿಗಳನ್ನು ಜರಗಿಸಿದ ನಂತರ ಸ್ಥಾನೀಯ ಹೋಟೆಲ್ ಕೆಒನ್ ಸಭಾಭವನದಲ್ಲಿ ಪ್ರಸಾದಾರ್ಥ ಕೂಟ ನಡೆಸಲಾಗಿ ಹರಕೆ ಮಾರಿಪೂಜೆ ಸಂಪನ್ನ ಗೊಳಿಸಲ್ಪಟ್ಟಿತು.

ಕಾರ್ಯಕ್ರಮದಲ್ಲಿ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಚಿತ್ರ ಶೇರಿಗಾರ್, ಡಾ| ರಾಹುಲ್ ಶೇರಿಗಾರ್, ಡಾ| ಪೂನಂ ಆರ್.ಶೇರಿಗಾರ್, ಪವನ್ ಡಿ.ದೇವಾಡಿಗ, ನಿಮ್ಮಿ ಪವನ್, ದೇವಸ್ಥಾನದ ಆಢಳಿತ ಮೊಕ್ತೇಸರ ಪ್ರಸಾದ್ ಗೋಪಾಲದಾಸ್ ಶೆಣೈ, ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದ ಆಡಳಿತ ಮುಕ್ತೇಸg ಚಂದ್ರಶೇಖರ ಆರ್.ಬೆಳ್ಚಡ, ದೇವಾಡಿಗ ಸಂಘ ಮುಂಬಯಿ ಅಧ್ಯಕ್ಷ ರವಿ.ಎಸ್.ದೇವಾಡಿಗ, ಗಣೇಶ್ ದೇವಾಡಿಗ ಅಂಬಲಪಾಡಿ, ಸುರೇಂದ್ರ ಮೆಂಡನ್ ಉಡುಪಿ, ಸುರೇಂದ್ರ ಶೆಟ್ಟಿ (ಸಿಯಾರಾಮ್), ಪಿ.ವಿ.ಮೋಹನ್, ಸುದೇಶ್ ದೇವಾಡಿಗ ಕರಾಡ್, ಸೇರಿದಂತೆ ನೂರಾರು ಗಣ್ಯರು, ಭಕ್ತರನೇಕರು ಭಾಗವಹಿಸಿ ಶ್ರೀಮುಡಿ ಗಂಧ ಪ್ರಸಾದವನ್ನು ಸ್ವೀಕರಿಸಿ ಶ್ರೀ ದೇವಿಯ ಕೃಪೆಗೆ ಪಾತ್ರರಾದರು.

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಲೂಡೊ ಬೋರ್ಡ್ ಶಂಕು ಆಕಾರದ ಪ್ಲಾಸ್ಟಿಕ್ ಕಾಯ್ನ್ ನುಂಗಿದ ಎಂಟರ ಬಾಲಕಿ ಉಸಿರುಗಟ್ಟಿ ಸಾವು.

ತೊಕ್ಕೊಟ್ಟು ಸಮೀಪದ ಕೊಲ್ಯದಲ್ಲಿ ದಾರುಣ ಘಟನೆ. ಉಳ್ಳಾಲ:ಫೆ-21:ಸಹೋದರ ಸಹೋದರಿಯೊಂದಿಗೆ ಮನೆಯಲ್ಲಿ ಲೂಡ ಆಟದಲ್ಲಿ...

ಹಿರಿಯ ಪತ್ರಕರ್ತ ಸುಂದರ ಕಬಕ ನಿಧನ

ಮಂಗಳೂರು; ಕಬಕ ನಿವಾಸಿ ಹಲವು ರಾಜ್ಯ ಮಟ್ಟದ ಟೀವಿ ಚಾನಲುಗಳಲ್ಲಿ ಕಾರ್ಯ...

ಬಸ್ ದುರಂತದಲ್ಲಿ ಮೃತಪಟ್ಟ ಅಟೋ ಚಾಲಕನ ಕುಟುಂಬಕ್ಕೆ ನೆರವು

ಉಳ್ಳಾಲ: ಇತ್ತೀಚೆಗೆ ತಲಪಾಡಿ ಯಲ್ಲಿ ನಡೆದ ಬಸ್ ದುರಂತದಲ್ಲಿ ಮೃತಪಟ್ಟ ದ.ಕ....

ವಿದ್ಯಾರ್ಥಿಗಳಿಂದ ಬಸ್ ನಿರ್ವಾಹಕನ ಮೇಲೆ ಹಲ್ಲೆಗೆ ಖಂಡನೆ

ಉಳ್ಳಾಲ: ಫೆ.19ರಂದು ಗುರುವಾರ ಬೆಳಿಗ್ಗೆ ಬಿಸಿ ರೋಡ್‌ನಿಂದ ವಯಾ ಮಂಚಿ–ಮುಡಿಪು ಕಡೆ...