
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕುಳೂರು ಬ್ಲಾಕ್ ಸಮಿತಿ ವತಿಯಿಂದ ಕೂಳೂರು ಜಂಕ್ಷನ್ ನಲ್ಲಿ ರಾಷ್ಟ್ರೀಯ ಹೆದ್ದಾರಿ 66 ರ ಅವೈಜ್ಞಾನಿಕ ಕಾಮಗಾರಿ ಮತ್ತು ಅಲ್ಲಲ್ಲಿ ಉಂಟಾಗಿರುವ ಮರಣ ಗುಂಡಿಯಿಂದ ನಿರಂತರವಾಗಿ ನಡೆಯುತ್ತಿರುವ ಅಪಘಾತವನ್ನು ತಡೆಯುವ ಸಲುವಾಗಿ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.
ಮಂಗಳೂರು: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕುಳೂರು ಬ್ಲಾಕ್ ಸಮಿತಿ ವತಿಯಿಂದ ಕೂಳೂರು ಜಂಕ್ಷನ್ ನಲ್ಲಿ ರಾಷ್ಟ್ರೀಯ ಹೆದ್ದಾರಿ 66 ರ ಅವೈಜ್ಞಾನಿಕ ಕಾಮಗಾರಿ ಮತ್ತು ಅಲ್ಲಲ್ಲಿ ಉಂಟಾಗಿರುವ ಮರಣ ಗುಂಡಿಯಿಂದ ನಿರಂತರವಾಗಿ ನಡೆಯುತ್ತಿರುವ ಅಪಘಾತವನ್ನು ತಡೆಯುವ ಸಲುವಾಗಿ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.
ಪ್ರತಿಭಟನೆಯಲ್ಲಿ SDPI ಜಿಲ್ಲಾ ಸಮಿತಿ ಸದಸ್ಯರು ಅಡ್ಯಾರ್ ಗ್ರಾಮ ಪಂಚಾಯತ್ ಅಧ್ಯಕ್ಷರು ಆದ ಯಾಸಿನ್ ಅರ್ಕುಳ ರವರು ಮಾತನಾಡಿ ಇಂದು ಈ ದುರಂತದಿಂದ ಮರಣ ಹೊಂದಿದ ಮಹಿಳೆಯ ಕುಟುಂಬಕ್ಕೆ ಜೀವವನ್ನು ಹಿಂತಿರುಗಿಸುವವರು ಯಾರು.? ಅವರ ಕುಟುಂಬದ ಹೊಣೆಯನ್ನು ಹೊರುವವವರು ಯಾರು? ಆ ಮಹಿಳೆಯ ದಾರುಣ ಅಂತ್ಯಕ್ಕೆ ನೇರ ಹೊಣೆ ಇಲ್ಲಿಯ ಜನ ಪ್ರತಿನಿಧಿಗಳು. ಈ ಅವೈಜ್ಞಾನಿಕ ರಸ್ತೆಯಿಂದಾಗಿ ಸಾವಿಗೀಡಾದ ಮಾಧವಿ ಮತ್ತು ಅಶ್ರಫ್ ಸಾವಿನ ಹೊಣೆ ಹೊತ್ತು ಅವರ ಕುಟುಂಬಕ್ಕೆ ಗರಿಷ್ಠ ಮೊತ್ತದ ಪರಿಹಾರ ನೀಡಬೇಕು ಎಂದು ಹೇಳಿದರು. ಪ್ರತಿಭಟನೆಯ ನೇತೃತ್ವ ವಹಿಸಿದ Sdpi ಕುಳೂರು ಬ್ಲಾಕ್ ಅಧ್ಯಕ್ಷ ನೌಶಾದ್ ಕಾವೂರು ಮಾತನಾಡಿ
ಇಲ್ಲಿ ಒಂದು ಹೊಂಡ ಮುಚ್ಚಬೇಕೆಂದರೆ ಒಂದಾ ರಸ್ತೆ ಅಪಘಾತದಿಂದ ಒಂದು ಜೀವ ಹೋಗಬೇಕು ಇಲ್ಲ ಅಂದರೆ ಗಣ್ಯಾಥಿ ಗಣ್ಯ ನಾಯಕರು ಜೆಲ್ಲೆಗೆ ಆಗಮಿಸಬೇಕಾದ ಪರಿಸ್ಥಿತಿ ಈ ದಕ್ಷಿಣ ಕನ್ನಡ ಜಿಲ್ಲೆಗೆ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬ್ಲಾಕ್ ಕಾರ್ಯದರ್ಶಿ ಹರ್ಷದ್ ಅಯ್ಯುಬ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
