
ಮದೀನಾ ಮುನವ್ವರ:- ಡಿಕೆಯಸ್ಸಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಬಹುಮಾನ್ಯ ಖುದ್ವತುಸ್ಸಾದಾತ್ KS ಆಟಕ್ಕೋಯ ತಂಙಳ್ ಕುಂಬೋಲ್ ರವರು ಪವಿತ್ರ ಉಮ್ರಾ ಯಾತ್ರೆ ನಿಮಿತ್ತ ಸೌದಿ ಅರೇಬಿಯಾದ ಮದೀನಾ ಮುನವ್ವರದಲ್ಲಿದ್ದ ಸಂಧರ್ಭ ದಿನಾಂಕ 19/08/2025 ರ ಶುಕ್ರವಾರ ಜುಮ್ಅ ನಮಾಝಿನ ನಂತರ ನಗರದ ಹೋಟೆಲ್ ನಲ್ಲಿ ನಡೆದ ಸರಳ ಸಮಾರಂಭದಲ್ಲಿ ಕೇಂದ್ರ ಸಮಿತಿಯ ಪರವಾಗಿ ಆತ್ಮೀಯವಾಗಿ ಸನ್ಮಾನಿಸಲಾಯಿತು, ನಂತರ ಸಭೆಯನ್ನು ಉದ್ಗೇಶಿಸಿ ಮಾತನಾಡಿದ ತಂಙಳ್ ರವರು ಡಿಕೆಯಸ್ಸಿಯ ಕಾರ್ಯಕರ್ತರ ಒಗ್ಗಟ್ಟು ಮತ್ತು ನಿಷ್ಕಳಂಕ ಮನೋಭಾವ ದೊಂದಿಗೆ ನೇತ್ರತ್ವವನ್ನು ಅನುಸರಿಸಿ ಮುಂದುವರಿಯುವುದರ ಫಲವಾಗಿ 30 ವರ್ಷಗಳಿಂದ ಮಾದರೀ ಸಂಘಟನೆಯಾಗಿ ಮೂಡಿಬರಲು ಸಾಧ್ಯವಾಯಿತು ಮುಂದಕ್ಕೆ ಸಮುದಾಯಕ್ಕಾಗಿ ಹಲವಾರು ಯೋಜನೆಗಳೊಂದಿಗೆ ಇನ್ನೂ ಶಕ್ತಿ ಮೀರಿ ಪ್ರವರ್ತಿಸಲು ಕರೆ ನೀಡಿದರು.
ಈ ಸಂಧರ್ಭ ಮಕ್ಕತುಲ್ ಮುಕರ್ರಮ ಮತ್ತು ದಮ್ಮಾಮ್ ವಲಯದ ಆಧೀನದಲ್ಲಿ ನಡೆಯುವ ಫ್ಯಾಮಿಲಿ ಮುಲಾಖಾತ್ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ ಗೊಳಿಸಿ ಶುಭ ಹಾರೈಸಿದರು.

ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಕಣ್ಣಂಗಾರ್ ಸ್ವಾಗತಿಸಿದರು, ದಮ್ಮಾಮ್ , ಅಲ್ ಕೋಬಾರ್ , ಜುಬೈಲ್, ಅಲ್ ಹಸ್ಸಾ,ಬುರೈದಾ, ಜಿದ್ದಾ ನಗರಗಳಿಂದ ಕೇಂದ್ರ ಸಮಿತಿ ನಾಯಕರು ಮತ್ತು ಸದಸ್ಯರು ಆಗಮಿಸಿದ್ದರು ಡಿಕೆಯಸ್ಸಿ ಮಕ್ಕತುಲ್ ಮುಕರ್ರಮ ವಲಯ ಸಮಿತಿಯ ಹಿರಿಯ ನೇತಾರರೂ ಕುವೈಟ್ ರಾಷ್ರೀಯ ಸಮಿತಿ ಉಸ್ತುವಾರಿ ಜ॥ ಶರೀಫ್ ಮರವೂರು ರವರ ನೇತ್ರತ್ವದಲ್ಲಿ ಮದೀನಾ ಘಟಕವು ಎಲ್ಲಾ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ಮಾಡಿತ್ತು.

ಮಕ್ಕತುಲ್ ಮುಕರ್ರಮ ವಲಯ ಸಮಿತಿಯ ಅಧ್ಯಕ್ಷ ಅಝರ್ ಕ್ರಷ್ಣಾಪುರ , ಕೇಂದ್ರ ಸಮಿತಿ ಸದಸ್ಯರೂ ವಲಯ ಡೆವಲಪ್ಮೆಂಟ್ ಚಯರ್ಮೆನ್ ಬಹು॥ ಅಬ್ದುಲ್ರಹ್ಮಾನ್ ತಂಞಳ್ ಉಚ್ಚಿಲ,ಮುಖ್ಯ ಸಲಹಾಗಾರರಾದ ಬಹು॥ ಉಮರುಲ್ ಫಾರೂಕ್ ಸಅದಿ ಯಚ್ ಕಲ್ಲು ,ಮದೀನಾ ಮುನವ್ವರ ಅಲ್ ಹರಮ್ ಯುನಿಟ್ ಅಧ್ಯಕ್ಷ ಜ॥ ಮುಹಮ್ಮದ್ ಅಲಿ ಪಾಣೆಮಂಗಳೂರು ಮತ್ತು ವಲಯ ನಾಯಕರು ಉಪಸ್ಥಿತರಿದ್ದರು.



