
ಉಳ್ಳಾಲ: ಇತ್ತೀಚಿನ ದಿನಗಳಲ್ಲಿ ಯಾವುದೇ ಅಡ್ಡ ಪರಿಣಾಮ ಇಲ್ಲದ ಹೋಮಿಯೋಪಥಿ ವೈದ್ಯಕೀಯ ಪದ್ದತಿ ಅತ್ಯಂತ ಶೀಘ್ರವಾಗಿ ಬೆಳೆಯುತ್ತಿದ್ದು ಈ ಕ್ಷೇತ್ರದಲ್ಲಿ ಪದವಿ ಪಡೆದ ಯುವವೈದ್ಯರನ್ನು ಪ್ರೋತ್ಸಾಹಿಸುವುದು ಶ್ಲಾಘನೀಯ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅಭಿಪ್ರಾಯಪಟ್ಟರು.
ಕುಂಪಲ ಹೋಮಿಯೋ ಎಂಪೋರಿಯಂ ವತಿಯಿಂದ ಮುಖಂಡ ಸಿರಾಜ್ ಮುಡಿಪು ನೇತೃತ್ವದಲ್ಲಿ ಭಾನುವಾರ ದೇರಳಕಟ್ಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಯುವವೈದ್ಯರನ್ನು ಸನ್ಮಾನಿಸಿ ಮಾತನಾಡಿದರು.
ಮುಂದಿನ ಪೀಳಿಗೆಯ ಆರೋಗ್ಯ ಕಾಪಾಡುವ ಜವಾದ್ದಾರಿ ಯುವ ವೈದ್ಯರ ಮೇಲಿದೆ. ಅಲೋಪಥಿ, ಆಯುರ್ವೇದ ಮಾತ್ರವಲ್ಲದೆ ಹೋಮಿಯೋಪಥಿ ವೈದ್ಯರಿಗೂ ಭವಿಷ್ಯ ಇದೆ ಎಂದು ತಿಳಿಸಿದರು.
ಈ ಸಂದರ್ಭ ಯೇನೆಪೊಯ ಹೋಮಿಯೋಪಥಿ ಕಾಲೇಜಿನ ಪ್ರಥಮ ಬ್ಯಾಚ್ ಯುವವೈದ್ಯರಾದ ಡಾ.ರಝಿಯಾ, ಡಾ.ಇಬ್ರಾಹಿಂ ಸಂಶೀರ್, ಡಾ.ವಸೀಫ್ ಚೌದ್ರಿ, ಡಾ.ಚಾರು ನಯನ, ಡಾ.ಎಸ್.ಎಚ್.ಭೂಮಿಕ, ಡಾ.ಸಿನಲ್ಡಾ ಕರ್ಡುಸೋ, ಡಾ.ಯಶ್ವಿತಾ ಎ.ಕೆಂಬಾರ್, ಡಾ.ನೇಹಾ, ಡಾ.ರಿನ್ಶಾ ರಫೀಕ್, ಡಾ.ಆಯಿಶಾ ರಿಫ್ತಾ ಇವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ಹೃದ್ರೋಗ ತಜ್ಞ ಡಾ.ಮುಕುಂದ್, ಕೋಟೆಕಾರ್ ಪಟ್ಟಿಣ ಪಂಚಾಯಿತಿಯ ಮಾಜಿ ಉಪಾಧ್ಯಕ್ಷ ಅನಿಲ್ ಬಗಂಬಿಲ, ಮಂಗಳೂರು ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಕೊಳಂಗೆರೆ, ಕುತ್ತಾರ್ ಹಿಂದೂ ಮುಕ್ತಿಧಾಮ ಸಮಿತಿಯ ಟ್ರಸ್ಟೀ ಪ್ರದೀಪ್ ಶೆಟ್ಟಿ ಕುತ್ತಾರ್ ಬರಿಕೆ, ಬಿಜೆಪಿ ಮಂಡಲ ಅಧ್ಯಕ್ಷ ಜಗದೀಶ್ ಆಳ್ವ ಕೂವೆತ್ತಬೈಲ್, ಪ್ರಧಾನ ಕಾರ್ಯದರ್ಶಿ ದಯಾನಂದ ತೊಕ್ಕೊಟ್ಟು, ಹೇಮಂತ್ ಶೆಟ್ಟಿ ದೇರಳಕಟ್ಟೆ, ನ್ಯಾಯವಾದಿ ಅಸ್ಗರ್ ಸಾಂಬಾರತೋಟ, ನವೀನ್, ಸಿರಾಜ್, ಗಣೇಶ್ ಮೊದಲಾದವರು ಉಪಸ್ಥಿತರಿದ್ದರು.
ಮಂಗಳೂರು ಹೋಮಿಯೋಪತಿ ಔಷಧೀಯ ಸಂಸ್ಥೆಯ ಆಡಳಿತ ನಿರ್ದೇಶಕ ಪ್ರಹ್ಲಾದ್ ಕುಮಾರ್ ಇಂದಾಜೆ ಕಾರ್ಯಕ್ರಮ ನಿರೂಪಿಸಿದರು.


