ಮಂಗಳೂರು:ರಂಗ ಸ್ವರೂಪ(ರಿ)ಕುಂಜತ್ತಬೈಲ್ ಸಂಸ್ಥೆಗೆ 2025ನೇ ಸಾಲಿನ ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ದೊರೆತ ಪ್ರಯುಕ್ತ “ರಂಗಾಂತರಂಗ” ಸ್ನೇಹ ಸಮ್ಮಿಲನ ಕಾರ್ಯಕ್ರಮ ಕುಂಜತ್ತಬೈಲ್ ಆಸರೆ ಮನೆಯಲ್ಲಿ ನಡೆಯಿತು.ಖ್ಯಾತ ತಂಬೂರಿ ಗಾಯಕ ನಾದ ಮಣಿ ನಾಲ್ಕೂರು ಇವರಿಂದ ದೀಪ ಹಚ್ಚಿ ಕತ್ತಲೆಯ ಹಾಡು, ವಿನೂತನ ತತ್ವ ಭಾವ ಗಾನಯಾನ ನಡೆಯಿತು.


ಈ ಸಂದರ್ಭದಲ್ಲಿ ರಂಗಸ್ವರೂಪದ ಮಾರ್ಗದರ್ಶಕ, ಸ್ವರೂಪ ಅಧ್ಯಯನ ಸಮೂಹ ಮಂಗಳೂರು ಇದರ ನಿರ್ದೇಶಕ ಗೋಪಾಡ್ಕರ್ ರವರನ್ನು ಸನ್ಮಾನಿಸಲಾಯಿತು.ಸನ್ಮಾನ ಸ್ವೀಕರಿಸಿ ಮಾತನಾಡಿದ ಗೋಪಾಡ್ಕರ್, ಪ್ರಶಸ್ತಿಗಳು ಬಂದಾಗ ಹೊಟೇಲ್ ಬಾರ್ ಗಳಲ್ಲಿ ಸಂಭ್ರಮಾಚರಣೆ ಮಾಡುವ ಕಾಲದಲ್ಲಿ ಪ್ರಶಸ್ತಿ ಗೆ ಕಾರಣರಾದ ಎಲ್ಲರನ್ನೂ ಜೊತೆಗೂಡಿಸಿ ಅವರೊಂದಿಗೆ ಸಂಭ್ರಮಾಚರಣೆ ಮಾಡುವುದು ಅಪರೂಪದ ಸನ್ನಿವೇಶ ಎಂದು ಹೇಳಿದರು.

ರಂಗ ಸ್ವರೂಪ ತಂಡದ ಅಧ್ಯಕ್ಷ ರೆಹಮಾನ್ ಖಾನ್ ಕುಂಜತ್ತಬೈಲ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಸಾಹಿತಿ ಡಾ.ವಸಂತ್ ಕುಮಾರ್ ಪೆರ್ಲ ಅತಿಥಿಯಾಗಿ ಭಾಗವಹಿಸಿ ಮಾತನಾಡಿಯಾವುದೆ ಸಂಘಟನೆಯು ನಮ್ಮನ್ನು ಬೌದ್ಧಿಕವಾಗಿ ಬೆಳೆಸಬೇಕು. ಬೌದ್ಧಿಕ ವಾಗಿ ಬೆಳೆಸಲು ಸಾಧ್ಯವಾಗದಿದ್ದರೆ ಆ ಸಂಸ್ಥೆ ಯಿಂದ ದೊಡ್ಡ ಫಲಿತಾಂಶವನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ರಂಗ ಸ್ವರೂಪ ಸಂಸ್ಥೆಗೆ ರಾಜ್ಯೋತ್ಸವ ಪ್ರಶಸ್ತಿ ನೀಡುವ ಮೂಲಕ ಅಡಳಿತದ ಮನ್ನಣೆ ನೀಡಿದೆ ಎಂದು ಹೇಳಿದರು.

ಕಲಾವಿದ ದಿನೇಶ್ ಹೊಳ್ಳ, ಅಂತರಾಷ್ಟ್ರೀಯ ತರಬೇತುದಾರ ಮೊಹಮ್ಮದ್ ರಫೀಕ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.ಸಾಹಿತಿ ಬದ್ರುದ್ದೀನ್ ಕೂಳೂರು, ಸುಮನಾ ರೆಬೆಲ್ಲೊ, ಸ್ತ್ರೀ ಜಾಗೃತಿ ಸಮಿತಿ ಮಂಗಳೂರು ಸಂಚಾಲಕಿ ಡಾ.ಸಂಸದ್, ಅರವಿಂದ ಕುಡ್ಲ, ಆದಂ ಖಾನ್, ರಂಗ ಸ್ವರೂಪ ತಂಡದ ಪ್ರಮುಖರಾದ ಹುಸೈನ್ ರಿಯಾಝ್, ಜ್ಯೋತಿ ಸುಬ್ರಹ್ಮಣ್ಯ, ತಸ್ಲೀಮಾ ಬಾನು, ಹನೀಷಾ, ರೈಹಾನ್, ವೈಷ್ಣವಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಸುಬ್ರಹ್ಮಣ್ಯ ಕಾಸರಗೋಡು ಸ್ವಾಗತಿಸಿದರು, ಕಲಾವಿದ ಝುಬೇರ್ ಖಾನ್ ಕುಡ್ಲ ವಂದಿಸಿದರು, ಶಿಕ್ಷಕ ಪ್ರೇಂನಾಥ್ ಮರ್ಣೆ ಕಾರ್ಯಕ್ರಮ ನಿರೂಪಿಸಿದರು.



