ಮಂಗಳೂರು: ಟೀಮ್ ಮಂಗಳೂರು ಮಂಗಳೂರಿನ ತಣ್ಣೀರುಬಾವಿ ಬೀಚ್ ನಲ್ಲಿ ಆಯೋಜಿಸಿದ ಅಂತರಾಷ್ಟ್ರೀಯ ಗಾಳಿಪಟ ಉತ್ಸವ ದಲ್ಲಿ ರಂಗ ಸ್ವರೂಪ(ರಿ) ಮಂಗಳೂರು ಆಶ್ರಯ ದಲ್ಲಿ ಗಾಳಿಪಟ ಕ್ಕೆ ಬಣ್ಣ ಹಚ್ಚೋಣ ಬನ್ನಿ ಕಾರ್ಯಕ್ರಮ ನಡೆಯಿತು.

ಕಲಾವಿದ ಝುಬೆeರ್ ಖಾನ್ ಕುಡ್ಲ ರ ನಿರ್ದೇಶನ ದಲ್ಲಿ ನಡೆದ ಈ ಕಾರ್ಯಕ್ರಮ ದಲ್ಲಿ ಪುಟಾಣಿ ಗಳು ಕ್ಯಾನ್ವಾಸ್ ನಲ್ಲಿ ಗಾಳಿಪಟದ ಚಿತ್ರ ಗಳನ್ನು ಬಿಡಿಸಿ ಚಿತ್ರ ಗಳಿಗೆ ಬಣ್ಣತುಂಬಿ ಸಂಭ್ರಮಿಸಿದರು. ಕಾರ್ಯಕ್ರಮ ದಲ್ಲಿ ಟೀಮ್ ಮಂಗಳೂರು ತಂಡದ ಸದಸ್ಯ ರಾದ ಖ್ಯಾತ ಕಲಾವಿದ ದಿನೇಶ್ ಹೊಳ್ಳ,ಶಿಕ್ಷಣ ತಜ್ಞ ಗೋಪಾಡ್ಕರ್, ಕಲಾವಿದೆ ಸಪ್ನಾ ನೋರನ್ಹ, ರಂಗ ಸ್ವರೂಪ ದ ಅಧ್ಯಕ್ಷರಾದ ರೆಹಮಾನ್ ಖಾನ್ ಕುಂಜತ್ತಬೈಲ್, ಸದಸ್ಯರಾದ ರೈಹಾನ್ ಉಪಸ್ಥಿತರಿದ್ದರು


