ನ್ಯೂ ವೆಲ್ಫೇರ್ ಅಸೋಸಿಯೇಷನ್ ಮದೀನಾ ಮುನವ್ವರ ಸಮಿತಿಯ ಮಹಾಸಭೆ, ಕುಟುಂಬ ಸಮ್ಮಿಲನ

Date:

ಮದೀನಾ: ನ್ಯೂ ವೆಲ್ಫೇರ್ ಅಸೋಸಿಯೇಷನ್ ಮದೀನಾ ಮುನವ್ವರ ಇದರ ಮಹಾಸಭೆ ಮತ್ತು ಕುಟುಂಬ ಸಮ್ಮಿಲನ ಕಾರ್ಯಕ್ರಮವು ರಾಖಿಹ್ ಇಸ್ತಿರಾಅದಲ್ಲಿ ನಡೆಯಿತು.

ಅಬೂಬಕ್ಕರ್ ಉಸ್ತಾದ್ ಉದ್ದಬೆಟ್ಟು ದುವಾ ನೆರವೇರಿಸಿ ಮತ್ತು ಉದ್ಘಾಟಿಸಿ ಸಂಸ್ಥೆಯ ಮಾನವೀಯ ಸೇವೆಯನ್ನು ಶ್ಲಾಘಿಸಿದರು.
ಸಭಾಧ್ಯಕ್ಷತೆ ವಹಿಸಿದ್ದ ಸಮಿತಿ ಅಧ್ಯಕ್ಷರಾದ ಸರಫ್ರಾಝ್ ಕುಪ್ಪೆಪದವು ಮಾತನಾಡಿ ನ್ಯೂ ವೆಲ್ಫೇರ್ ಸಮಿತಿಯ ಕಾರ್ಯವೈಖರಿಯನ್ನು ವಿವರಿಸಿದರು. ಇನ್ನು ಮುಂದಕ್ಕೂ ಎಲ್ಲಾ ಸದಸ್ಯರ ಸಹಾಯ ಸಹಕಾರ ಅತ್ಯಗತ್ಯ ಎಂದು ಕೋರಿದರು. ಪ್ರ.ಕಾರ್ಯದರ್ಶಿ ನಾಸಿರ್ ಬಾಂಬಿಲ ಮಂಡಿಸಿದ ವರದಿ ಮತ್ತು ಲೆಕ್ಕಪತ್ರವನ್ನು ಸಭೆಯಲ್ಲಿ ಅನುಮೋದಿಸಿ ಅಂಗೀಕರಿಸಲಾಯಿತು.

ಹಳೆಯ ಸಮಿತಿಯನ್ನು ಬರ್ಖಾಸ್ತುಗೊಳಿಸಿ ನೂತನ ಸಮಿತಿಯನ್ನು ರಚಿಸಲಾಯಿತು. ಗೌರವಾಧ್ಯಕ್ಷರಾಗಿ ಖಾಲಿದ್ ವಾಮಂಜೂರು, ಅಧ್ಯಕ್ಷರಾಗಿ ಸರಫ್ರಾಝ್ ಕುಪ್ಪೆಪದವು, ಪ್ರಧಾನ ಕಾರ್ಯದರ್ಶಿಯಾಗಿ ನಾಸಿರ್ ಬಾಂಬಿಲ ಮತ್ತು ಕೋಶಾಧಿಕಾರಿಯಾಗಿ ಮುಬೀನ್ ಮುಲ್ಕಿ ಆಯ್ಕೆಯಾದರು.


ಉಪಾಧ್ಯಕ್ಷರಾಗಿ ಶಂಸುದ್ದೀನ್ ಉಜಿರೆ, ಇಬ್ರಾಹಿಂ ಮುಲ್ಕಿ ಜೊತೆ ಕಾರ್ಯದರ್ಶಿಗಳಾಗಿ ಶಮೀರ್ ಉಜಿರೆ, ಹಸೈನಾರ್ ಪರಂಗಿಪೇಟೆ, ಸಲಹೆಗಾರಾಗಿ ಆಸಿಫ್ ಕುಂಜತ್ ಬೈಲ್ ಇವರನ್ನು ಆಯ್ಕೆ ಮಾಡಲಾಯಿತು. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಝುಬೈರ್ ಸಾಲೆತ್ತೂರು, ಬದ್ರುದ್ದೀನ್ ಕಬಕ, ನವಾಝ್ ಬಾಂಬಿಲ, ಸಮೀಝ್ ಕುಪ್ಪೆಪದವು, ಆಸಿಫ್ ಸೋಫಾ, ಹಸನ್ ಕುಂಜತ್ತೂರು, ನಿಹಾಲ್ ಚಿಕ್ಕಮಗಳೂರು, ಸಾದಿಕ್ ಮೆಲ್ಕಾರ್, ಅಶ್ರಫ್ ಮರವೂರು ಮತ್ತು ಅಬ್ದುಲ್ ಅಝೀಝ್ ಸುರಿಬೈಲ್ ಇವರನ್ನು ಆರಿಸಲಾಯಿತು.

ಹಸೈನಾರ್ ಪರಂಗಿಪೇಟೆ ಸ್ವಾಗತಿಸಿದರು. ಅಝೀಝ್ ಸುರಿಬೈಲ್ ನಿರೂಪಿಸಿ, ಧನ್ಯವಾದವಿತ್ತರು, ಆಸಿಫ್ ಕುಂಜತ್ ಬೈಲ್ ಸಹಕರಿಸಿದರು. ಖಾಲಿದ್ ವಾಮಂಜೂರು, ಇಬ್ರಾಹಿಂ ಮುಲ್ಕಿ, ಶಂಸುದ್ದೀನ್ ಉಜಿರೆ ಮತ್ತು ಝುಬೈರ್ ಸಾಲೆತ್ತೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕೊನೆಯದಾಗಿ 3 ಸ್ವಲಾತ್ ನೊಂದಿಗೆ ಸಭೆಯು ಮುಕ್ತಾಯವಾಯಿತು.

ಪುರುಷರಿಗೆ ವಾಲಿಬಾಲ್ ಸ್ಪರ್ಧೆ ಏರ್ಪಡಿಸಲಾಗಿತ್ತು, ಮಹಿಳೆಯರಿಗೆ ಮತ್ತು ಮಕ್ಕಳಿಗೆ ಸಂಗೀತ ಕುರ್ಚಿ ಮತ್ತು ಇನ್ನಿತರ ಸ್ಪರ್ಧೆಗಳು ನಡೆದವು. ವಿವಿಧ ಬಗೆಯ ಸ್ಪರ್ಧೆಗಳು ಕುಟುಂಬ ಸಮ್ಮಿಲನದ ಆಕರ್ಷಣೆಯಾಗಿತ್ತು. ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಲೂಡೊ ಬೋರ್ಡ್ ಶಂಕು ಆಕಾರದ ಪ್ಲಾಸ್ಟಿಕ್ ಕಾಯ್ನ್ ನುಂಗಿದ ಎಂಟರ ಬಾಲಕಿ ಉಸಿರುಗಟ್ಟಿ ಸಾವು.

ತೊಕ್ಕೊಟ್ಟು ಸಮೀಪದ ಕೊಲ್ಯದಲ್ಲಿ ದಾರುಣ ಘಟನೆ. ಉಳ್ಳಾಲ:ಫೆ-21:ಸಹೋದರ ಸಹೋದರಿಯೊಂದಿಗೆ ಮನೆಯಲ್ಲಿ ಲೂಡ ಆಟದಲ್ಲಿ...

ಹಿರಿಯ ಪತ್ರಕರ್ತ ಸುಂದರ ಕಬಕ ನಿಧನ

ಮಂಗಳೂರು; ಕಬಕ ನಿವಾಸಿ ಹಲವು ರಾಜ್ಯ ಮಟ್ಟದ ಟೀವಿ ಚಾನಲುಗಳಲ್ಲಿ ಕಾರ್ಯ...

ಬಸ್ ದುರಂತದಲ್ಲಿ ಮೃತಪಟ್ಟ ಅಟೋ ಚಾಲಕನ ಕುಟುಂಬಕ್ಕೆ ನೆರವು

ಉಳ್ಳಾಲ: ಇತ್ತೀಚೆಗೆ ತಲಪಾಡಿ ಯಲ್ಲಿ ನಡೆದ ಬಸ್ ದುರಂತದಲ್ಲಿ ಮೃತಪಟ್ಟ ದ.ಕ....

ವಿದ್ಯಾರ್ಥಿಗಳಿಂದ ಬಸ್ ನಿರ್ವಾಹಕನ ಮೇಲೆ ಹಲ್ಲೆಗೆ ಖಂಡನೆ

ಉಳ್ಳಾಲ: ಫೆ.19ರಂದು ಗುರುವಾರ ಬೆಳಿಗ್ಗೆ ಬಿಸಿ ರೋಡ್‌ನಿಂದ ವಯಾ ಮಂಚಿ–ಮುಡಿಪು ಕಡೆ...