ಮಕ್ಕಾ: ಡಿಕೆಎಸ್ಸಿ ಮಕ್ಕಾ ಅಲ್ ಮುಕ್ಕರ್ರಮ ವಲಯ ಸಮಿತಿ ಅದೀನದಲ್ಲಿ ನವೆಂಬರ್ 29, 2025 ರ ಶನಿವಾರ ರಾತ್ರಿ 9 ಗಂಟೆಗೆ ಡಿಕೆಎಸ್ಸಿ ಮಕ್ಕಾ ಘಟಕದ ಅಧ್ಯಕ್ಷ ಮೂಸಾ ಹಾಜಿ ಕಿನ್ಯಯವರ ಅಧ್ಯಕ್ಷತೆಯಲ್ಲಿ ಅಬ್ದುಲ್ ಮಜೀದ್ ಬಜಾಲ್ ರವರ ನಿವಾಸದಲ್ಲಿ ನಡೆದ ಸಭೆಯನ್ನು ಕೇಂದ್ರ ಸಮಿತಿ ಆರ್ಗನೈಝರ್ ಅಬ್ದುರ್ ರಶೀದ್ ಸಅದಿ ಪೂಂಗೊಡು ಉದ್ಘಾಟಿಸಿದರು. ನಂತರ ನೂತನವಾಗಿ ಝಾಯಿದಿ ಯುನಿಟ್ ರಚಿಸಲಾಯಿತು.

ಅಧ್ಯಕ್ಷರಾಗಿ ಅಬ್ದುಲ್ ಮಜೀದ್ ಬಜಾಲ್, ಪ್ರಧಾನ ಕಾರ್ಯದರ್ಶಿ ಯಾಗಿ ಅಬ್ದುಲ್ಲಾ ಬಿ.ಸಿ. ರೋಡ್, ಹಣಕಾಸು ಕಾರ್ಯದರ್ಶಿ ಯಾಗಿ ನಾಸರ್ ಮಂಜೇಶ್ವರ ಹಾಗೂ ಉಪಾಧ್ಯಕ್ಷರಾಗಿ ಇರ್ಫಾನ್ ಅಡೂರು, ಕಾರ್ಯದರ್ಶಿಯಾಗಿ ಮುಸ್ತಫಾ ಮಡಿಕೇರಿ ಹಾಗೂ ಅಶ್ರಫ್ ಫಾರೂಖಿ ಗಂಜಿಮಠ ,ಗೌಸ್ ಗಂಜಿಮಠ ,ಮುದಸ್ಸಿರ್ ಗಂಜಿಮಠ, ಆಸಿಫ್ ಗಂಜಿಮಠ, ಶಾಹಿದ್ ಗಂಜಿಮಠ , ಶಾಕಿರ್ ಕೇರಳ , ಹಕೀಂ ಕೇರಳ ರವರುಗಳನ್ನು ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಆಯ್ಕೆ ಮಾಡಲಾಯಿತು. ಮಕ್ಕಾ ಘಟಕದ ನಾಯಕರಾದ ಅಬ್ದುಲ್ ಖಾದರ್ ಉಪಸ್ಥಿತರಿದ್ದರು. ಅಬ್ದುಲ್ ಮಜೀದ್ ಬಜಾಲ್ ಸ್ವಾಗತಿಸಿ ವಂದಿಸಿದರು.


