ಮಲಾರ್ ಮಸೀದಿ ಕಾಂಕ್ರೀಟ್ ರಸ್ತೆ ಉದ್ಘಾಟನೆ

Date:


ಉಳ್ಳಾಲ: ಹರೇಕಳ ಗ್ರಾಮದಲ್ಲಿ ಹಿಂದೆ ಮಣ್ಣಿನ ರಸ್ತೆಯಾಗಿದ್ದ ಮಾರ್ಗಗಳೆಲ್ಲವೂ ಈಗ ಕಾಂಕ್ರೀಟ್ ರಸ್ತೆಯಾಗಿ ಮಾಡಲಾಗಿದೆ. ಗ್ರಾಮ ಪಂಚಾಯಿತಿ ಪ್ರತಿನಿಧಿಗಳು ಒತ್ತಡ ಹಾಕಿದ್ದರಿಂದ ಹೆಚ್ಚುವರಿ ಅನುದಾನ ಮೀಸಲಿಟ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ ಎಂದು ವಿದಾನಸಭಾಧ್ಯಕ್ಷ ಯು.ಟಿ. ಖಾದರ್ ತಿಳಿಸಿದರು.


ಹರೇಕಳ ಗ್ರಾಮದ ಮಲಾರ್ ಮುಹಿಯುದ್ದೀನ್ ಜುಮಾ ಮಸೀದಿ ಸಂಪರ್ಕ ಕಾಂಕ್ರೀಟ್ ರಸ್ತೆಯ ಶನಿವಾರ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಲಾರ್ ಮತ್ತು ಕೋಡಿ ಭಾಗದ ಎಲ್ಲಾ ರಸ್ತೆಗಳು ಗ್ರಾಮ ಪಂಚಾಯಿತಿಗೆ ನೇರ ಸಂಪರ್ಕ ಹೊಂದುವಂತೆ ಅಭಿವೃದ್ಧಿಪಡಿಸಲಾಗಿದೆ. ವಿದ್ಯುತ್ ಹಾಗೂ ನೀರಿನ ಸಮಸ್ಯೆ ಬಾರದಂತೆ ಸುದೀರ್ಘ ಕಾಲದ ಯೋಜನೆ ರೂಪಿಸಿ ಮೂಲ ಸೌಕರ್ಯಗಳಿಗೆ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು.


ಹಿರಿಯರಾದ ಮಹಮ್ಮದ್ ಮಲಾರ್ ರಸ್ತೆ ಉದ್ಘಾಟಿಸಿದರು. ಮಸೀದಿಯ ಖತೀಬ್ ಸಿರಾಜುದ್ದೀನ್ ದಾರಿಮಿ ಉಸ್ತಾದ್ ದುವಾ ನೆರವೇರಿಸಿದರು.

ಮುಅದ್ದೀನ್ ಶರೀಫ್ ಉಮೈದಿ, ಅಧ್ಯಕ್ಷ ಎಸ್.ಎಂ. ಆಸಿಫ್ ಇಕ್ಬಾಲ್, ಪ್ರಧಾನ ಕಾರ್ಯದರ್ಶಿ ರಹ್ಮತುಲ್ಲಾ, ಕೋಶಾಧಿಕಾರಿ ಇಸ್ಮಾಯಿಲ್ ಕೋಡಿ, ಸದಸ್ಯರಾದ ರಿಯಾಝ್ ಅಹ್ಮದ್, ಸಂಶುದ್ದೀನ್, ಹರೇಕಳ ಗ್ರಾಮ ಪಂಚಾಯಿತಿ ನಿಕಟಪೂರ್ವ ಅಧ್ಯಕ್ಷ ಬದ್ರುದ್ದೀನ್ ಫರೀದ್ ನಗರ, ಸದಸ್ಯರಾದ ಸತ್ತಾರ್ ನ್ಯೂಪಡ್ಪು, ಅಬೂಬಕ್ಕರ್ ಸಿದ್ದೀಕ್, ಎಸ್.ಎಂ. ಬಶೀರ್, ಮಾಜಿ ಸದಸ್ಯ ಬಶೀರ್ ಉಂಬುದ, ಪ್ರಮುಖರಾದ ಎಚ್.ಎಂ. ಮಹಮ್ಮದ್, ಇಸ್ಮಾಯಿಲ್ ಮಾಸ್ಟರ್, ಝಕರಿಯಾ ಮಲಾರ್, ಝಾಯಿದ್ ಮಲಾರ್, ಅಶ್ರಫ್ ಮದೀನಾ, ಹಸನ್ ಕುಂಞಿ ಮಲಾರ್, ಇಬ್ರಾಹಿಂಮೋನು, ಹಾರಿಸ್ ಮಲಾರ್, ಮುನೀರ್ ಆಲಡ್ಕ, ಹಮೀದ್ ಕಂಡಿಲ, ಅಬ್ದುಲ್ ರಹ್ಮಾನ್, ಹಮೀದ್ ಎಂ.ಬಿ, ಮೊದಲಾದವರು ಉಪಸ್ಥಿತರಿದ್ದರು.


ಮಂಗಳೂರು ತಾ.ಪಂ. ಮಾಜಿ ಸದಸ್ಯ ಮುಸ್ತಫಾ ಹರೇಕಳ ಪ್ರಾಸ್ತಾವಿಕವಾಗಿ ಮಾತನಾಡಿದರು.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಕುಣಿತ ಭಜನೆ ವೇಳೆ ಕುಸಿದು ಬಿದ್ದು ಮಹಿಳೆ ಮೃತ್ಯು

ಸುಳ್ಯ: ದೇವಸ್ಥಾನದ ಜಾತ್ರೋತ್ಸವದ ವೇಳೆ ಕುಣಿತ ಭಜನೆ ಮಾಡುತ್ತಿದ್ದ ಮಹಿಳೆಯೊಬ್ಬರು ಕುಸಿದು...

ಕೆ.ಎಂ.ಕೆ ಮಂಜನಾಡಿಯವರಿಗೆ ಸಂಘಟನಾ ಸ್ಪೂರ್ತಿ ಪ್ರಶಸ್ತಿ

ಉಳ್ಳಾಲ: ಸೈಯದ್ ಮದನಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಹಳೆಕೋಟೆಯಲ್ಲಿ ನಡೆಸಲ್ಪಡುತ್ತಿರು ಸೈಯದ್...