ಮಾಂಟ್ರಾಡಿಯಲ್ಲಿ ಟ್ರ್ಯಾಕ್ಟರ್ ಸಹಿತ ಯುವಕ ಬಾವಿಗೆ ಬಿದ್ದು ಸಾವು

Date:

ಮೂಡುಬಿದಿರೆ : ಪಕ್ಕದ ಮನೆಯವರ ಟ್ರ್ಯಾಕ್ಟರ್ ನ್ನು ರಿವಸ್ ೯ ತೆಗೆಯಲು ಹೋಗಿ ಯುವಕನೊಬ್ಬ ವಾಹನ ಸಹಿತ ಬಾವಿಗೆ ಬಿದ್ದು ಸಾವನ್ನಪ್ಪಿದ ದುಘ೯ಟನೆ ನೆಲ್ಲಿಕಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾಂಟ್ರಾಡಿ ಕೊಂಬೆಟ್ಟುವಿನಲ್ಲಿ ಮಂಗಳವಾರ ಬೆಳಿಗ್ಗೆ ನಡೆದಿದೆ. ಕೊಂಬೆಟ್ಟು ನಿವಾಸಿ ರಾಜೇಶ್ (38)ಮೃತ ದುರ್ದೈವಿ.​ ರಾಜೇಶ್ ಅವರು ತಮ್ಮ ಮನೆಯ ಪಕ್ಕದಲ್ಲಿರುವ ಸಂಬಂಧಿಕರ ವಾಹನವನ್ನು (ಗಾಡಿಯನ್ನು) ಬಾವಿಯ ಸಮೀಪ ತೊಳೆಯುತ್ತಿದ್ದರು. ಈ ಸಂದರ್ಭದಲ್ಲಿ ವಾಹನವು ರೋಲ್ ಆಗಿ ಬಾವಿಯ ಕಡೆಗೆ ಚಲಿಸಲಾರಂಭಿಸಿತು. ವಾಹನವನ್ನು ಹಿಡಿದು ನಿಲ್ಲಿಸಲು ಹೋಗಿ, ಅವರು ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ.​ರಾಜೇಶ್ ಅವರು ಪತ್ನಿ ಮತ್ತು ಇಬ್ಬರು ಪುಟ್ಟ ಪುತ್ರಿಯರನ್ನು ಅಗಲಿದ್ದಾರೆ. ಈ ಅಕಾಲಿಕ ಸಾವಿಗೆ ಸ್ಥಳೀಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಸಹಕಾರ ಸಪ್ತಾಹ ಸಂಭ್ರಮಕ್ಕೆ ಚಾಲನೆ: ಎಂ.ಜಾರ್ಜ್ ಮೋನಿಸ್ ಅವರಿಗೆ `ಸಹಕಾರ ಕಲ್ಪವೃಕ್ಷ ಪ್ರಶಸ್ತಿ’ ಪ್ರದಾನ

ಮೂಡುಬಿದಿರೆ : ಮೂಡುಬಿದಿರೆ ಕೋ-ಆಪರೇಟಿವ್ ಸರ್ವೀಸ್ ಸೊಸೈಟಿ ಲಿಮಿಟೆಡ್ ವತಿಯಿಂದ ನಡೆಯಲಿರುವ...

ಬೆಳುವಾಯಿ ಸ್ಪೂತಿ೯ ವಿಶೇಷ ಮಕ್ಕಳ ಶಾಲೆಯಲ್ಲಿ ಮಕ್ಕಳ ದಿನ ಆಚರಣೆ: ಮಕ್ಕಳಿಂದ ಛದ್ಮವೇಷ, ನೃತ್ಯ ಸ್ಪಧೆ೯

ಮೂಡುಬಿದಿರೆ : ಮಕ್ಕಳ ದಿನಾಚರಣೆಯ ಪ್ರಯುಕ್ತ ಬೆಳುವಾಯಿಯಲ್ಲಿರುವ ಸ್ಪೂತಿ೯ ಭಿನ್ನ ಸಾಮಥ್ಯ೯ದ...

ಬಿಹಾರದಲ್ಲಿ ಬಿಜೆಪಿ ಜಯಭೇರಿ: ಮೂಡುಬಿದಿರೆ ಮಂಡಲದಿಂದ ವಿಜಯೋತ್ಸವ

ಮೂಡುಬಿದಿರೆ : ಬಿಹಾರದಲ್ಲಿ ಬಿಜೆಪಿಯು ಜಯಭೇರಿ ಸಾಧಿಸಿದ ಹಿನ್ನೆಲೆಯಲ್ಲಿ ಭಾರತೀಯ ಜನತಾ...

ನ.16: ಪವರ್ ಫ್ರೆಂಡ್ಸ್ ನಿಂದ ಅಂಚೆ ಜನ ಸಂಪಕ೯ ಅಭಿಯಾನ, ಬೃಹತ್ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಶಿಬಿರ

ಮೂಡುಬಿದಿರೆ: ಪವರ್ ಫ್ರೆಂಡ್ಸ್ ಬೆದ್ರ ಮತ್ತು ದ.ಕ ಜಿಲ್ಲಾ ಶಾಮಿಯಾನ ಮಾಲಕರ...