ಕೊಳ್ನಾಡು: ಶ್ರಿಂಗೇರಿ ಕೊಪ್ಪದಲ್ಲಿ ಮೇಸ್ಟ್ರಿ ಕೆಲಸ ಮಾಡುವ ಸಂಧರ್ಭದಲ್ಲಿ ಮೇಲಿನಿಂದ ಕೆಳಗೆ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಸಂಭವಿಸಿದೆ.

ಮೃತಪಟ್ಟ ವ್ಯಕ್ತಿ ಕೊಳ್ನಾಡು ಗ್ರಾಮ ವ್ಯಾಪ್ತಿಯ ಸೆರ್ಕಳ ಹಮೀದ್ ಎಂದು ತಿಳಿದು ಬಂದಿದೆ. ಇವರು ಕುಡ್ತಮುಗೇರು ಸಮೀಪದ ಸೆರ್ಕಳ ಮಸೀದಿ ಬಳಿ ನಿವಾಸಿಯಾಗಿರುವ ಕುಂಞಪ್ಪ (ಕುಂಞಚ್ಚ )ರವರ ಮಗ ಹಾಗೂ ಆಶ್ರಫ್ ಮತ್ತು ಬಹುಃ ಇಸಾಕ್ ಮುಸ್ಲಿಯಾರ್ ರವರ ಸಹೋದರರಾಗಿದ್ದಾರೆ.


