
ಬಂಟ್ವಾಳ: ಪ್ರಾಥಮಿಕ ಆರೋಗ್ಯ ಕೇಂದ್ರ ಮಂಚಿ ವತಿಯಿಂದ ಆರೋಗ್ಯ ಸುರಕ್ಷಾಧಿಕಾರಿ ಹರಿಣಾಕ್ಷಿ ಅವರಿಗೆ ಬಿಳ್ಕೊಡುಗೆ ಸಮಾರಂಭ ನಡೆಯಿತು.ಮಂಚಿ,ಇರಾ,ಕೊಳ್ನಾಡು,ಸುರಿಬೈಲು ಈ ಗ್ರಾಮದ ಹಳ್ಳಿಗಳ ವ್ಯಾಪ್ತಿಯಲ್ಲಿ 11 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿ,ಜನಸ್ನೇಹಿಯಾಗಿ ಹೆರಿಗೆ ಸಂಧರ್ಭಗಳಲ್ಲಿ ತಾಯಿ ಮರಣ,ಶಿಶು ಮರಣ ಪ್ರಮಾಣ ತಡೆಗಟ್ಟುವಲ್ಲಿ ಹಾಗೂ ಸಾಂಕ್ರಾಮಿಕ ರೋಗಗಳು,ಕೊರೋನ ಸಂಧರ್ಭದಲ್ಲಿ ಆರೋಗ್ಯ ಸೇವೆ ತಡೆಗಟ್ಟುವ ಸಂಬಂಧಿಸಿದಂತೆ ಕರ್ತವ್ಯ ನಿರ್ವಹಿಸಿ ಜನರ ಮೆಚ್ಚುಗೆ ಗಳಿಸಿದ್ದರು.ಅಲ್ಲದೆ ಕೊರೋನ ಸಂಧರ್ಭದಲ್ಲಿ ಗ್ರಾಮದ ಹಳ್ಳಿಗಳಲ್ಲೆ ಗ್ರಾಮ ವಾಸ್ತವ್ಯ ಹೂಡಿ ಕಾರ್ಯನಿರ್ವಹಿಸಿದ್ದರು.ಇದೀಗ ಪುದು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವರ್ಗಾವಣೆಗೊಂಡಿದ್ದು ಅವರಿಗೆ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಗೆ ಬರುವ 3 ಗ್ರಾಮಗಳ ಜನಪ್ರತಿನಿಧಿಗಳು ಸಮ್ಮುಖದಲ್ಲಿ ಸನ್ಮಾನಿಸಿ ಬಿಳ್ಕೊಡುಗೆ ಮಾಡಲಾಯಿತು.

ಈ ಸಂಧರ್ಭದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಲಕ್ಷ್ಮಣ್.ಎಮ್,ಎಮ್, ಮಂಚಿ ಗ್ರಾ.ಪಂಚಾಯತ್ ಅದ್ಯಕ್ಷರಾದ ಇಬ್ರಾಹಿಂ ಜಿ.ಎಮ್, ಕೊಳ್ನಾಡು ಗ್ರಾ.ಪಂಚಾಯತ್ ಅದ್ಯಕ್ಷರಾದ ಅಶ್ರಪ್ ಕೆ.ಸಾಲೆತ್ತೂರು, ಇರಾ ಗ್ರಾ.ಪಂಚಾಯತ್ ಅದ್ಯಕ್ಷರಾದ ಉಮ್ಮರ್ ಎಂ.ಬಿ, ಕೊಳ್ನಾಡು ಗ್ರಾ.ಪಂಚಾಯತ್ ಉಪಾದ್ಯಕ್ಷರಾದ ಕೆ.ಎ.ಅಸ್ಮ ಹಸೈನಾರ್ ತಾಳಿತ್ತನೂಜಿ, ಮಂಚಿ ಉಪಾದ್ಯಕ್ಷರಾದ ಗೀತಾ ಸಾಲ್ಯನ್, ಕೊಳ್ನಾಡು ಗ್ರಾ.ಪಂಚಾಯತ್ ಮಾಜಿ ಅದ್ಯಕ್ಷರಾದ ಶ್ರೀ.ಕುಳಾಲು ಸುಭಾಶ್ಚಂದ್ರ ಶೆಟ್ಟಿ, ಇರಾ ಗ್ರಾ.ಪಂಚಾಯತ್ ಮಾಜಿ ಅದ್ಯಕ್ಷರಾದ ರಜಾಕ್ ಕುಕ್ಕಾಜೆ, ಜಯಂತಿ ಎಸ್.ಪೂಜಾರಿ, ಗ್ರಾ.ಪಂ ಸದಸ್ಯರಾದ ವಿಲ್ಮ ಪಾಯಸ್, ಸಮುದಾಯ ಆರೋಗ್ಯಧಿಕಾರಿ ಸತೀಶ್, ಸುರೇಶ್ ಕೊಳ್ನಾಡು, ವಿಲ್ಸನ್ ಕುಳಾಲು, ಧನ್ಯ ಸಾಲೆತ್ತೂರು, ಅಶ್ವಿನಿ ಇರಾ ನೂತನ ಪ್ರಾಥಮಿಕ ಆರೋಗ್ಯ ಸುರಕ್ಷಾದಿಕಾರಿ ಮಂಜುಳಾ ಮತ್ತು ಆಶಾ ಕಾರ್ಯಕರ್ತರು ಉಪಸ್ಥಿತರಿದ್ದರು.