
ಬಂಟ್ವಾಳ:ಎಂ ಕೆ ಅನಂತರಾಜು ಕಾಲೇಜ್ ಆಫ್ ಪಿಸಿಕಲ್ ಎಜುಕೇಶನ್, ಮೂಡಬಿದ್ರೆ, ಇಲ್ಲಿ ನಡೆದ 22ನೇ ರಾಜ್ಯ ಮಟ್ಟದ ಕರಾಟೆ ಚಾಂಪಿಯನ್ ಶಿಫ್-2025, ರಲ್ಲಿ ಭಾಗವಹಿಸಿ 2ಚಿನ್ನ,1ಬೆಳ್ಳಿ ಹಾಗೂ 1ಕಂಚಿನ ಪದಕ ಗಳಿಸಿದ Barakah inter national school ಮತ್ತು ಕಾಲೇಜಿನಲ್ಲಿ ವ್ಯಾಸಾಂಗ ಮಾಡುತ್ತಿರುವ ನಮ್ಮ ಮಂಚಿ ಗ್ರಾಮದ ವಿದ್ಯಾರ್ಥಿಗಳಾದ ಮರಿಯಮ್ ಮಹಮ್ಮದ್ ಹನೀಫ್(ಚಿನ್ನದ ಪದಕ), ಮುಅದ್ ಮುಹಮ್ಮದ್ ಯೂಸುಫ್(ಚಿನ್ನದ ಪದಕ),ಸನಾ ಫಾತಿಮ(ಬೆಳ್ಳಿ ಪದಕ)ಮತ್ತು ಮೊಹಮ್ಮದ್ ಶಾಝಿಲ್ (ಕಂಚಿನ ಪದಕ)ಇವರನ್ನು ಈ ದಿನ ಮಂಚಿ ಗ್ರಾಮ ಪಂಚಾಯತ್ ನಲ್ಲಿ ಜರುಗಿದ 2025-26ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮ ಸಭೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.


