ಮಂಗಳೂರಿನ ಪ್ರಸಿದ್ಧ ಪೂಂಜಾ ಇಂಟರ್ ನ್ಯಾಷನಲ್ ಹೊಟೇಲ್ ಮಾಲಕ ಖ್ಯಾತ ಉದ್ಯಮಿ ಪ್ರಭಾಕರ ಪೂಂಜಾ ನಿಧನ

Date:

ಮಂಗಳೂರು : ಮಂಗಳೂರು ಎಂದರೆ ಒಂದು ಕಾಲದಲ್ಲಿ ರೌಡಿಸಂ ,ಹೋಟೆಲ್ ಉದ್ಯಮ ಹಾಗೂ ಇನ್ನಿತರ ಚಟುವಟಿಕೆಗಳಿಗೆ ಪ್ರಸಿದ್ಧ. ಅದರಂತೆಯೆ ಮಂಗಳೂರನ್ನು ಅದೆಷ್ಟೋ ಜನ ಆಳೆದು ಹೋಗಿದ್ದಾರೆ ಅಂತಹದರಲ್ಲಿ ಬಂಟ್ವಾಳ ಮೂಲದ ಪ್ರಭಾಕರ ಪೂಂಜಾ ಕೂಡ ಒಬ್ಬರು.
ಒಂದು ಕಾಲದಲ್ಲಿ ಮಂಗಳೂರಿನ ಹೆಸರಾಂತ ಹೊಟೇಲ್ ಪೂಂಜಾ ಇಂಟರ್ನ್ಯಾಶನಲ್ ಇದರ ಮಾಲಕ, ಬಂಟ್ವಾಳ ಮೂಲದ ಪ್ರಭಾಕರ ಪೂಂಜಾ(72) ಅಲ್ಪಕಾಲದ ಅಸೌಖ್ಯದಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಮುಂಬೈ ಭೂಗತ ಲೋಕಕ್ಕೆ ಮಂಗಳೂರು ಸನಿಹ ಇತ್ತು ಅದರಂತೆಯೇ 40 ವರ್ಷಗಳ ಹಿಂದೆ ಮುಂಬೈನಲ್ಲಿ ಭೂಗತ ಜಗತ್ತಿನ ಸಂಪರ್ಕದಲ್ಲಿದ್ದ ಪ್ರಭಾಕರ ಪೂಂಜಾ ಅಲ್ಲಿನ ಒಬ್ಬ ಡಾನ್ ಗೆ ಕಾರು ಚಾಲಕನಾಗಿದ್ದರು.ಬಳಿಕ ಮಂಗಳೂರಿಗೆ ಬಂದು 1986ರಲ್ಲಿ ಮಂಗಳೂರಿಗೆ ಬಂದು ಪೂಂಜಾ ಇಂಟರ್ನ್ಯಾಶನಲ್ ಹೊಟೇಲ್ ನಿರ್ಮಾಣ ಮಾಡಿದ್ದರು.ಆ ಸಮಯದಲ್ಲಿ ಐಷಾರಾಮಿ ಹೋಟೆಲ್ ಅಂದರೆ ಮೋತಿಮಹಲ್ ಬಿಟ್ಟರೆ ಪೂಂಜಾ ಇಂಟರ್ ನ್ಯಾಷನಲ್ ಆಗಿತ್ತು. ಭೂಗತ ಜಗತ್ತಿನಲ್ಲಿ ಡಾನ್ ಆಗಿದ್ದ ಶರದ್ ಶೆಟ್ಟಿ ಇವರ ಖಾಸಾ ಭಾವನಾಗಿದ್ದು, ಅದೇ ನಂಟಿನಲ್ಲಿ ಮಂಗಳೂರಿನಲ್ಲಿ ಹೊಟೇಲ್ ವ್ಯವಹಾರ ಆರಂಭಿಸಿದ್ದರು. ಮಂಗಳೂರಿಗೆ ಬಂದ ಬಳಿಕವೇ ಅವರಿಗೆ ಮದುವೆಯಾಗಿತ್ತು ಎಂದು ಅವರ ಬಗ್ಗೆ ತಿಳಿದವರು ಹೇಳುತ್ತಾರೆ. ಅವರ ಮಕ್ಕಳು ಈಗ ಹೊಟೇಲ್ ನೋಡಿಕೊಳ್ಳುತ್ತಿದ್ದರು ಇದೀಗ ಕಾಲಕ್ಕೆ ತಕ್ಕಂತೆ ಮಂಗಳೂರಿನಲ್ಲಿ ಭೂಗತ ಜಗತ್ತಿನ ಅಂತ್ಯಕಂಡಿದೆ.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಲೂಡೊ ಬೋರ್ಡ್ ಶಂಕು ಆಕಾರದ ಪ್ಲಾಸ್ಟಿಕ್ ಕಾಯ್ನ್ ನುಂಗಿದ ಎಂಟರ ಬಾಲಕಿ ಉಸಿರುಗಟ್ಟಿ ಸಾವು.

ತೊಕ್ಕೊಟ್ಟು ಸಮೀಪದ ಕೊಲ್ಯದಲ್ಲಿ ದಾರುಣ ಘಟನೆ. ಉಳ್ಳಾಲ:ಫೆ-21:ಸಹೋದರ ಸಹೋದರಿಯೊಂದಿಗೆ ಮನೆಯಲ್ಲಿ ಲೂಡ ಆಟದಲ್ಲಿ...

ಹಿರಿಯ ಪತ್ರಕರ್ತ ಸುಂದರ ಕಬಕ ನಿಧನ

ಮಂಗಳೂರು; ಕಬಕ ನಿವಾಸಿ ಹಲವು ರಾಜ್ಯ ಮಟ್ಟದ ಟೀವಿ ಚಾನಲುಗಳಲ್ಲಿ ಕಾರ್ಯ...

ಬಸ್ ದುರಂತದಲ್ಲಿ ಮೃತಪಟ್ಟ ಅಟೋ ಚಾಲಕನ ಕುಟುಂಬಕ್ಕೆ ನೆರವು

ಉಳ್ಳಾಲ: ಇತ್ತೀಚೆಗೆ ತಲಪಾಡಿ ಯಲ್ಲಿ ನಡೆದ ಬಸ್ ದುರಂತದಲ್ಲಿ ಮೃತಪಟ್ಟ ದ.ಕ....

ವಿದ್ಯಾರ್ಥಿಗಳಿಂದ ಬಸ್ ನಿರ್ವಾಹಕನ ಮೇಲೆ ಹಲ್ಲೆಗೆ ಖಂಡನೆ

ಉಳ್ಳಾಲ: ಫೆ.19ರಂದು ಗುರುವಾರ ಬೆಳಿಗ್ಗೆ ಬಿಸಿ ರೋಡ್‌ನಿಂದ ವಯಾ ಮಂಚಿ–ಮುಡಿಪು ಕಡೆ...