ಮಂಗಳೂರು ವಿವಿಯಲ್ಲಿ ‘ಕಲಾದರ್ಪಣ’ಚಿತ್ರಕಲಾ ಶಿಬಿರ ಉದ್ಘಾಟನೆ

Date:

ಕೊಣಾಜೆ; ಕಂಪ್ಯೂಟರ್ ಗ್ರಾಫಿಕ್ಸ್, ಕೃತಕ ಬುದ್ಧಿಮತ್ತೆಯಂತಹ ನೂತನ ತಂತ್ರಜ್ಞಾನಗಳಿಂದ ನಾವು ವಾಸ್ತವತೆಯನ್ನು ಮರೆಯದೆ ನೈಜತೆಯ ಭಾವವನ್ನು ಬೆಳೆಸಿಕೊಂಡರೆ ಜೀವನೋತ್ಸಾಹ ಮೂಡಲು ಸಾಧ್ಯವಾಗುತ್ತದೆ. ತಂತ್ರಜ್ಞಾನದ ಹೊರತಾದ ಭಾವಜ್ಞಾನದ ಪ್ರಪಂಚಕ್ಕೊಂದು ರಂಗಿದೆ. ಇಂತಹ ಚಿತ್ರಕಲಾ ಶಿಬಿರಗಳ ಮೂಲಕ ಸಾಂಸ್ಕೃತಿಕ ಪರಂಪರೆಯನ್ನು ಕಲಾ ಮಾಧ್ಯಮದ ಮೂಲಕ ಅರ್ಥೈಸಿಕೊಂಡು,‌ ಅನುಭವಿಸಿಕೊಂಡು ಮುನ್ಮಡೆಯಬೇಕು ಎಂದು ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್ .ಧರ್ಮ ಅವರು ಹೇಳಿದರು.

ಮಂಗಳೂರು ವಿಶ್ವವಿದ್ಯಾನಿಲಯದ ಎನ್. ಜಿ. ಪಾವಂಜೆ ಲಲಿತಕಲಾ ಪೀಠ ಇದರ ವತಿಯಿಂದ ‌ಕರಾವಳಿ ಚಿತ್ರಕಲಾ ಚಾವಡಿ (ರಿ) ಮಂಗಳೂರು ಇವರ ಸಹಕಾರದೊಂದಿಗೆ ಎರಡು ದಿನಗಳ ಕಾಲ ನಡೆಯುವ “ಕಲಾ‌ದರ್ಪಣ” ಭಾವಚಿತ್ರ ರಚನೆ ಮತ್ತು ಸೃಜನಾತ್ಮಕ ಚಿತ್ರಕಲಾ ಶಿಬಿರಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು. ಶಿಕ್ಷಕರು ಚಿತ್ರಕಲಾವಿದರಾದರೆ ಬೋಧನೆಯೂ ಪರಿಣಾಮಕಾರಿಯಾಗಿ ವಿದ್ಯಾರ್ಥಿಗಳನ್ನು ಬೆಳೆಸುವಲ್ಲಿ ಸಹಕಾರಿಯಾಗುತ್ತದೆ‌. ಆದ್ದರಿಂದ ಪ್ರತಿಯೊಬ್ಬ ಶಿಕ್ಷಕರು ಕಲಾನೈಪುಣ್ಯತೆಯನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಉದ್ಯಮಿ ಪ್ರಶಾಂತ್ ಶೇಟ್ ಅವರು, ಒತ್ತಡದಿಂದ ಹೊರಬರಲು ಕಲಾ‌ಮಾಧ್ಯಮವೇ ಆಸರೆಯಾಗಿದೆ. ಕಲಾವಿದನಲ್ಲಿ ಸೃಜನಶೀಲತೆ ಬೆಳೆಯಬೇಕು ಎಂದರು.ಮಂಗಳೂರು ವಿವಿ ಕುಲಸಚಿವ ಕೆ.ರಾಜುಮೊಗವೀರ ಅವರು ಭಾಗವಹಿಸಿ ಮಾತನಾಡಿ,‌ ಯಾವುದೇ ತಂತ್ರಜ್ಞಾನಗಳು ಬಂದರೂ ಸೃಜನಶೀಲತೆಯನ್ನು ಮೀರಿ‌ನಿಲ್ಲಲು ಸಾಧ್ಯವಿಲ್ಲ. ಆದರೆ ಅದಕ್ಕೆ ಪೂರಕವಾಗಿ ನಾವು ಬೆಳೆಯಬೇಕು ಎಂದರು. ಕರಾವಳಿ ಚಿತ್ರಕಲಾ‌ಚಾವಡಿಯ ಅಧ್ಯಕ್ಷರಾದ ಕೋಟಿ ಪ್ರಸಾದ್ ಆಳ್ವ‌ ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.ಎನ್ ಜಿ ಪಾವಂಜೆ ಪೀಠದ ಸಂಯೋಜಕರಾದ ಡಾ.ಧನಂಜಯ ಕುಂಬ್ಳೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕರಾವಳಿ ಚಿತ್ರಕಲಾ ಚಾವಡಿಯ ಶರತ್ ಹೊಳ್ಳ ಅವರು ವಂದಿಸಿದರು. ಕರಾವಳಿ ಚಿತ್ರಕಲಾ ಚಾವಡಿಯ ಕಾರ್ಯದರ್ಶಿ ಡಾ.ಎಸ್.ಎಂ.ಶಿವಪ್ರಕಾಶ್ ನಿರೂಪಿಸಿದರು.ಕಾರ್ಯಕ್ರಮದಲ್ಲಿ ರಮೇಶ್ ರಾವ್ ಉಡುಪಿ, ಬಾಬುರಾವ್ ನಾಡೋಣಿ, ಸೈಯ್ಯದ್ ಆಸೀಫ್ ಆಲಿ, ಸಕು ಪಾಂಗಳ ಅವರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಕರಾವಳಿ ಚಿತ್ರಕಲಾ ಚಾವಡಿ (ರಿ) ಮಂಗಳೂರು ಇದರ ಕಲಾವಿದರಾದ ಶರತ್ ಹೊಳ್ಳ, ಗಿಲಿಯಾಳ ಜಯರಾಮ ಭಟ್, ಗಣೇಶ್ ಸೋಮಯಾಜಿ, ಅನಂತ ಪದ್ಮನಾಭ ರಾವ್, ಈರಣ್ಣ ತಿಪ್ಪಣ್ಣ ನವರ್, ಮನೋರಂಜಿನಿ, ಸಪ್ನ ನೊರೋನ್ಹ, ಜಯಶ್ರೀ ಶರ್ಮ, ಖುರ್ಷಿದ್ ಯಾಕೂಬ್, ಡಾ.ಎಸ್.ಎಂ ಶಿವಪ್ರಕಾಶ್, ಡಾ.ಸುಜೋತ ಧರ್ಮ, ರೂಪಾ ವಸುಂದರ ಆಚಾರ್ಯ, ನವೀನ್ ಚಂದ್ರ ಬಂಗೇರ, ಡಾ.ಜಯಪ್ರಕಾಶ್ ಮೊದಲಾದವರು ಉಪಸ್ಥಿತರಿದ್ದರು.

ಮಂಗಳೂರು ವಿವಿಯ ವಿಜ್ಞಾನ ಸಂಕೀರ್ಣದ ಮುಂಭಾಗದಲ್ಲಿ ಮರಗಿಡಗಳ ನಡುವೆ ಪ್ರಕೃತಿಯ ಸೊಬಗಿನಲ್ಲಿ ಆಯೋಜಿಸಲಾದ ಚಿತ್ರಕಲಾ ಶಿಬಿರ‌ವು ಕಲಾವಿದರ ಗಮನಸೆಳೆಯುವಲ್ಲಿ ಯಶಸ್ವಿಯಾಯಿತು. ಹೊರಾಂಗಣದ ಮರಗಳ ನೆರಳಲ್ಲಿ ಪ್ರಸಿದ್ದ ಕಲಾವಿದರು ಕಲಾನೈಪುಣ್ಯತೆಯ ಮೂಲಕ ವಿಸ್ಮಯ ಮೂಡಿಸಿದರು.‌

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಲೂಡೊ ಬೋರ್ಡ್ ಶಂಕು ಆಕಾರದ ಪ್ಲಾಸ್ಟಿಕ್ ಕಾಯ್ನ್ ನುಂಗಿದ ಎಂಟರ ಬಾಲಕಿ ಉಸಿರುಗಟ್ಟಿ ಸಾವು.

ತೊಕ್ಕೊಟ್ಟು ಸಮೀಪದ ಕೊಲ್ಯದಲ್ಲಿ ದಾರುಣ ಘಟನೆ. ಉಳ್ಳಾಲ:ಫೆ-21:ಸಹೋದರ ಸಹೋದರಿಯೊಂದಿಗೆ ಮನೆಯಲ್ಲಿ ಲೂಡ ಆಟದಲ್ಲಿ...

ಹಿರಿಯ ಪತ್ರಕರ್ತ ಸುಂದರ ಕಬಕ ನಿಧನ

ಮಂಗಳೂರು; ಕಬಕ ನಿವಾಸಿ ಹಲವು ರಾಜ್ಯ ಮಟ್ಟದ ಟೀವಿ ಚಾನಲುಗಳಲ್ಲಿ ಕಾರ್ಯ...

ಬಸ್ ದುರಂತದಲ್ಲಿ ಮೃತಪಟ್ಟ ಅಟೋ ಚಾಲಕನ ಕುಟುಂಬಕ್ಕೆ ನೆರವು

ಉಳ್ಳಾಲ: ಇತ್ತೀಚೆಗೆ ತಲಪಾಡಿ ಯಲ್ಲಿ ನಡೆದ ಬಸ್ ದುರಂತದಲ್ಲಿ ಮೃತಪಟ್ಟ ದ.ಕ....

ವಿದ್ಯಾರ್ಥಿಗಳಿಂದ ಬಸ್ ನಿರ್ವಾಹಕನ ಮೇಲೆ ಹಲ್ಲೆಗೆ ಖಂಡನೆ

ಉಳ್ಳಾಲ: ಫೆ.19ರಂದು ಗುರುವಾರ ಬೆಳಿಗ್ಗೆ ಬಿಸಿ ರೋಡ್‌ನಿಂದ ವಯಾ ಮಂಚಿ–ಮುಡಿಪು ಕಡೆ...