ಬಸವರಾಜ ಹೊರಟ್ಟಿ ಮೇಲ್ಮನೆ ಸದಸ್ಯರಾಗಿ 45 ವರ್ಷ! ಅಭಿನಂದನೆ ಸಲ್ಲಿಸಿದ ಶಾಸಕ ಮಂಜುನಾಥ ಭಂಡಾರಿ

Date:

ಬೆಂಗಳೂರು: ವಿಧಾನಮಂಡಲದಲ್ಲಿ ಅತ್ಯಂತ ಹಿರಿಯರಾಗಿ ಸಭಾಪತಿ ಪೀಠದಲ್ಲಿ ಕುಳಿತಿರುವ ಬಸವರಾಜ ಹೊರಟ್ಟಿ ಅವರು ಮೇಲ್ಮನೆ ಸದಸ್ಯರಾಗಿ 45 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಶಾಸಕ ಮಂಜುನಾಥ ಭಂಡಾರಿ ಅವರು ನಿವಾಸದಲ್ಲಿ ಭೇಟಿಯಾಗಿ ಶುಭಾಶಯಗಳನ್ನು ಸಲ್ಲಿಸಿದರು.

ಹೊರಟ್ಟಿಯವರು ಓರ್ವ ನಿಷ್ಠುರವಾದಿಯಾಗಿ ಸದನದಲ್ಲಿ ಜನರ ಪರವಾದ ಗಟ್ಟಿ ಧ್ವನಿಯಾಗಿ ಹೆಜ್ಜೆ ಗುರುತು ಮೂಡಿಸಿದ್ದಾರೆ. ಮೇಲ್ನೋಟಕ್ಕೆ ಬಸವರಾಜ ಹೊರಟ್ಟಿಯವರು ಒರಟು ಮನಷ್ಯರಾಗಿ ಕಂಡರೂ ಅವರ ಮಾತು ಬಹಳ ಖಡಕ್. ವಿಶೇಷವಾಗಿ ಹುಬ್ಬಳ್ಳಿ-ಧಾರವಾಡ ಭಾಗದಲ್ಲಿ ಬಸವರಾಜ ಹೊರಟ್ಟಿಯವರು ʻಹೊರಟ್ಟಿ ಮಾಸ್ತರರು’ ಎಂದೇ ಪ್ರಸಿದ್ದರು. 1980ರಲ್ಲಿ ಶಿಕ್ಷಕರ ಮತಕ್ಷೇತ್ರದಿಂದ ಆರಂಭವಾದ ಇವರ ಜರ್ನಿ ನಿರಂತರವಾಗಿ ಸಾಗಿ ಬಂದಿದೆ. ಹೀಗೆ ಸತತವಾಗಿ 8 ಬಾರಿ ಶಿಕ್ಷಕರ ಕ್ಷೇತ್ರದ ಪ್ರತಿನಿಧಿಯಾಗಿ ಮೇಲ್ಕನೆ ಪ್ರವೇಶಿಸಿದವರಲ್ಲಿ ಇವರೇ ಮೊದಲಿಗರು. 2025ರ ಜೂನ್ 30ರಂದು ಹೊರಟ್ಟಿಯವರು ಪರಿಷತ್ ಪ್ರವೇಶಿಸಿ ಭರ್ತಿ 45 ವರ್ಷವಾಗಿದೆ.
ಶಿಕ್ಷಣ ಕ್ಷೇತ್ರದ ವಿಷಯದಲ್ಲಿ ಯಾವತ್ತೂ ಧ್ವನಿ ಎತ್ತುತ್ತಾ ಬಂದಿರುವ ಬಸವರಾಜ ಹೊರಟ್ಟಿಯವರು ಮೇಲ್ಮನೆಯಲ್ಲೂ ಕಿರಿಯ ಸದಸ್ಯರಿಗೆ ಶಿಕ್ಷಕರಾಗಿಯೇ ಮಾರ್ಗದರ್ಶನ ಮಾಡುತ್ತ ಬರುತ್ತಿದ್ದಾರೆ. ಮೌಲ್ಯಾಧಾರಿತ ರಾಜಕಾರಣ
ಪರಿಷತ್ ಸದಸ್ಯರಾಗಿ ಆಡಳಿತ ಮತ್ತು ಪ್ರತಿಪಕ್ಷ ಎರಡರಲ್ಲೂ ಅನುಭವಿಯಾಗಿರುವ ಹೊರಟ್ಟಿಯವರು ತಮ್ಮ ಈ ದೀರ್ಘ ಇನ್ನಿಂಗ್ಸ್‌ನಲ್ಲಿ 17 ಮುಖ್ಯಮಂತ್ರಿಗಳಿಗೆ ಮುಖಾಮುಖಿಯಾಗಿದ್ದಾರೆ. ರಾಮಕೃಷ್ಣ ಹೆಗಡೆಯವರ ಅನುಯಾಯಿ ಆಗಿರುವ ಹೊರಟ್ಟಿ ಕೂಡ ಮೌಲ್ಯಾಧಾರಿತ ರಾಜಕಾರಣದಲ್ಲಿ ನಂಬಿಕೆಯಿಟ್ಟು ನಡೆದು ಬಂದವರು.


ಉತ್ತರ ಕರ್ನಾಟಕದ ಅಭಿವೃದ್ಧಿ ವಿಚಾರ ಬಂದಾಗಲೂ ಹೊರಟ್ಟಿ ಅವರದ್ದು ಗಟ್ಟಿ ಧ್ವನಿ. ಹೇಳಬೇಕಾದುದನ್ನು ಮುಖಕ್ಕೆ ಹೊಡೆದ ಹಾಗೆ ಹೇಳುವ ಹೊರಟ್ಟಿಯವರು ರಾಜಕೀಯ ರಂಗದಲ್ಲಿ ಯಾರೊಂದಿಗೂ ವೈರತ್ವ ಕಟ್ಟಿಕೊಂಡವರಲ್ಲ. ಹಾಲಿ ಮುಖ್ಯಮತ್ರಿ ಸಿದ್ದರಾಮಯ್ಯ ಅವರೂ ಹೊರಟ್ಟಿ ಅವರಿಗೆ ಆಪ್ತರು ಮತ್ತು ಜನತಾ ಪರಿವಾರದ ಕಾಲದ ಗೆಳೆಯ.
ವರ್ತಮಾನದ ಕಲುಷಿತ ರಾಜಕಾರಣ ಮತ್ತುಸದನದಲ್ಲಿ ನಡೆಯುವ ವ್ಯರ್ಥಾಲಾಪದ ಕಾರಣ ಹೊರಟ್ಟಿಯವರು ಅನೇಕ ಬಾರಿ ಸಿಡಿಮಿಡಿಗೊಂಡಿದ್ದಿದೆ. ಸಂಸದೀಯ ವ್ಯವಸ್ಥೆ ಈ ಮಾರ್ಗ ತುಳಿಯುತ್ತಿರುವುದಕ್ಕೆ ಅವರು ವಿಷಾದವನ್ನೂ ವ್ಯಕ್ತಪಡಿಸುತ್ತಾರೆ. ಒಟ್ಟಿನಲ್ಲಿ ಪರಿಷತ್ ಸದಸ್ಯರಾಗಿ, ಸಚಿವರಾಗಿ, ಸಭಾಪತಿಯಾಗಿ ಹೊರಟ್ಟಿಯವರು ನಡೆದು ಬಂದಿರುವ ದಾರಿ ಕರ್ನಾಟಕ ವಿಧಾನಮಂಡಲದ ಮೈಲುಗಲ್ಲುಗಳಲ್ಲಿ ಒಂದಾಗಿದೆ. ಇಂಥ ಹಿರಿಯರ ಸಾಧನಾ ಪಥದ ಅವಲೋಕನವೂ ಔಚಿತ್ಯಪೂರ್ಣ ಎಂದು ಮಂಜುನಾಥ ಭಂಡಾರಿ ಅವರು ಬಸವರಾಜ ಹೊರಟ್ಟಿ ಅವರ ಕಾರ್ಯವೈಖರಿಯನ್ನು ಶ್ಲಾಘಿಸಿದ್ದಾರೆ.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಪಿ.ಎ.ಇಂಜಿನಿಯರಿಂಗ್ ಕಾಲೇಜು: ಬಿ.ಇ.(ಹಾನರ್ಸ್) ಪದವೀಧರರಿಗೆ ಅಭಿನಂದನಾ ಸಮಾರಂಭ

ಕೊಣಾಜೆ: ಪದವಿ, ಶಿಕ್ಷಣದೊಂದಿಗೆ ನಾವು ಪಡೆದುಕೊಳ್ಳುವ ಕೌಶಲಗಳು ನಮ್ಮ ಬದುಕಿಗೆ ಸ್ಪೂರ್ತಿಯಾಗುತ್ತವೆ....

ಮಂಗಳೂರು ವಿವಿ 46 ನೇ ಸಂಸ್ಥಾಪನಾ ದಿನಾಚರಣೆ

ಕೋಣಾಜೆ: ಪ್ರಸ್ತುತ ಕಾಲಘಟ್ಟದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವು ಸ್ವಲ್ಪ ಆತಂಕದ ಸ್ಥಿತಿಯನ್ನು ಎದುರಿಸಿದರೂ...

ಪ್ರಾಥಮಿಕ ಆರೋಗ್ಯ ಕೇಂದ್ರ ಮಂಚಿ ವತಿಯಿಂದ ಆರೋಗ್ಯ ಸುರಕ್ಷಾಧಿಕಾರಿ ಹರಿಣಾಕ್ಷಿ ಅವರಿಗೆ ಬಿಳ್ಕೊಡುಗೆ

ಬಂಟ್ವಾಳ: ಪ್ರಾಥಮಿಕ ಆರೋಗ್ಯ ಕೇಂದ್ರ ಮಂಚಿ ವತಿಯಿಂದ ಆರೋಗ್ಯ ಸುರಕ್ಷಾಧಿಕಾರಿ ಹರಿಣಾಕ್ಷಿ...

ಸೆ. 14 ರಂದು ಸುರಿಬೈಲ್ ಮದರಸ ವಿದ್ಯಾರ್ಥಿಗಳ ಮೀಲಾದ್ ಫೆಸ್ಟ್

ಕಲ್ಲಡ್ಕ: ಬದ್ರಿಯಾ ಜುಮ್ಮಾ ಮಸೀದಿ ಸುರಿಬೈಲ್ ಇದರ ಅಧೀನದಲ್ಲಿರುವ ನುಸ್ರತುಲ್ ಉಲೂಂ...