ಮೀಂಜ: ಸ್ಥಳೀಯಾಡಳಿತ ಚುನಾವಣೆಯಲ್ಲಿ ಮೀಂಜ ಪಂಚಾಯತ್ನ ಚಿಗುರುಪಾದೆ, ಮಜೀರ್ಪಲ್ಲ, ಗಾಂಧಿ ನಗರ, ಕಡಂಬಾರು ಮತ್ತು ಮಜಿಬೈಲ್ ಎಂಬೀ ಐದು ವಾರ್ಡ್ಗಳಲ್ಲಿ ಎಸ್ಡಿಪಿಐ ಸ್ಪರ್ಧಿಸಲಿದೆ ಎಂದು ಮೂಲಗಳು ದೃಢಪಡಿಸಿವೆ.
“ಹಕ್ಕುಗಳು ಅರ್ಹರ ಪಾಲಿಗೆ, ಭ್ರಷ್ಟಾಚಾರ ಮುಕ್ತ ಅಭಿವೃದ್ಧಿಗಾಗಿ” ಎಂಬ ಘೋಷಣೆಯಲ್ಲಿ ರಾಜ್ಯಾದ್ಯಂತ 5000 ವಾರ್ಡ್ಗಳಲ್ಲಿ ಎಸ್ಡಿಪಿಐ ಸ್ಪರ್ಧಿಸಲಿದೆ ಎಂದು ರಾಜ್ಯ ನಾಯಕರು ಈ ಹಿಂದೆ ಹೇಳಿದ್ದರು.

ಕಳೆದ ಪಂಚಾಯತ್ ಚುನಾವಣೆಯಲ್ಲಿ ಎಸ್ಡಿಪಿಐ ಮಂಜೇಶ್ವರ ಕ್ಷೇತ್ರದ ವಿವಿಧ ಪಂಚಾಯತ್ಗಳಲ್ಲಿ ಜಯಭೇರಿಗಳಿಸಿದ್ದು ಈ ಬಾರಿ ಎಸ್ಡಿಪಿಐ ನಿರ್ಣಾಯಕವಾಗುವ ಸಾಧ್ಯತೆಯಿದೆ.


