‘ಮೇಲ್ತೆನೆ’ ಪ್ರಶಸ್ತಿಗೆ ಗಾಯಕ ರಹೀಂ ಬಿ.ಸಿ.ರೋಡ್ ಆಯ್ಕೆ 

Date:

ದೇರಳಕಟ್ಟೆ, ಸೆ.20: ಬ್ಯಾರಿ ಎಲ್ತ್‌ಕಾರ್-ಕಲಾವಿದಮಾರೊ ಕೂಟ (ಮೇಲ್ತೆನೆ) ದೇರಳಕಟ್ಟೆ ಇದರ ದಶಮಾನೋತ್ಸವದ ಪ್ರಯುಕ್ತ ನೀಡಲಾಗುವ ಮೇಲ್ತೆನೆ ಪ್ರಶಸ್ತಿಗೆ ಹಿರಿಯ ಗಾಯಕ, ಕಲಾವಿದ ರಹೀಂ ಬಿ.ಸಿ.ರೋಡ್ ಆಯ್ಕೆಯಾಗಿದ್ದಾರೆ. ಸೆಪ್ಟಂಬರ್ 30ರಂದು ದೇರಳಕಟ್ಟೆಯ ಕಣಚೂರು ಪಬ್ಲಿಕ್ ಸ್ಕೂಲ್ ಕ್ಯಾಂಪಸ್‌ನಲ್ಲಿ ನಡೆಯುವ ಮೇಲ್ತೆನೆ ಪತ್ತನೆ ವರ್ಸತ್ತೆ ಜಲ್ಸ್-ಲೇಸ್ 2025 ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪರಿಚಯ: ಉಳ್ಳಾಲ ತಾಲೂಕಿನ ಪಾವೂರು ಗ್ರಾಮದ ಇನೋಳಿಯಲ್ಲಿ ಬೋಳಿಯಾರು ಅಬ್ದುಲ್ ಖಾದರ್-ಫರಂಗಿಪೇಟೆಯ ಉಮ್ಮಾತುಮ್ಮ ದಂಪತಿಯ ಪುತ್ರನಾಗಿ 1957ರಲ್ಲಿ ಜನಿಸಿದ ಅಬ್ದುಲ್ ರಹೀಂ ಯಾನೆ ಅದ್ದಾಮ ಇನೋಳಿಯ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ 6ನೆ ಮತ್ತು ಮಡಿಕೇರಿಯ ಸರಕಾರಿ ಶಾಲೆಯಲ್ಲಿ 10ನೆ ತರಗತಿವರೆಗೆ ಕಲಿತರು. ಎಳೆಯ ಪ್ರಾಯದಲ್ಲೇ ಹಾಡುವ ಅಭಿರುಚಿ ಹೊಂದಿದ್ದ ರಹೀಂ ಬಳಿಕ ಗಾಯನವನ್ನೇ ಬದುಕನ್ನಾಗಿಸಿಕೊಂಡರು. ಮದುವೆ, ಮುಂಜಿ ಸಹಿತ ಬೀಡಿ ಉದ್ಯಮದ ಪ್ರಚಾರಕ್ಕೆ ಸಂಬಂಧಿಸಿ ಬ್ಯಾರಿ, ತುಳು, ಕನ್ನಡದಲ್ಲಿ ಗೀತೆ ರಚಿಸಿದ್ದ ರಹೀಂ ಬಿ.ಸಿ.ರೋಡ್ ಸುಮಾರು 1 ಸಾವಿರಕ್ಕೂ ಅಧಿಕ ವೇದಿಕೆಗಳಲ್ಲಿ ಹಾಡಿದ್ದಾರೆ. ಕವಿಗೋಷ್ಠಿಯಲ್ಲಿ ಕವನ ವಾಚಿಸಿದ್ದಾರೆ. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ 2010ನೆ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿ ಸಹಿತ ಅನೇಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ನೂರಾರು ಸಂಘ ಸಂಸ್ಥೆಗಳಿಂದ ಸನ್ಮಾನಿತರಾಗಿದ್ದಾರೆ ಎಂದು ಮೇಲ್ತೆನೆಯ ಅಧ್ಯಕ್ಷ ವಿ. ಇಬ್ರಾಹೀಂ ನಡುಪದವು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಲೂಡೊ ಬೋರ್ಡ್ ಶಂಕು ಆಕಾರದ ಪ್ಲಾಸ್ಟಿಕ್ ಕಾಯ್ನ್ ನುಂಗಿದ ಎಂಟರ ಬಾಲಕಿ ಉಸಿರುಗಟ್ಟಿ ಸಾವು.

ತೊಕ್ಕೊಟ್ಟು ಸಮೀಪದ ಕೊಲ್ಯದಲ್ಲಿ ದಾರುಣ ಘಟನೆ. ಉಳ್ಳಾಲ:ಫೆ-21:ಸಹೋದರ ಸಹೋದರಿಯೊಂದಿಗೆ ಮನೆಯಲ್ಲಿ ಲೂಡ ಆಟದಲ್ಲಿ...

ಹಿರಿಯ ಪತ್ರಕರ್ತ ಸುಂದರ ಕಬಕ ನಿಧನ

ಮಂಗಳೂರು; ಕಬಕ ನಿವಾಸಿ ಹಲವು ರಾಜ್ಯ ಮಟ್ಟದ ಟೀವಿ ಚಾನಲುಗಳಲ್ಲಿ ಕಾರ್ಯ...

ಬಸ್ ದುರಂತದಲ್ಲಿ ಮೃತಪಟ್ಟ ಅಟೋ ಚಾಲಕನ ಕುಟುಂಬಕ್ಕೆ ನೆರವು

ಉಳ್ಳಾಲ: ಇತ್ತೀಚೆಗೆ ತಲಪಾಡಿ ಯಲ್ಲಿ ನಡೆದ ಬಸ್ ದುರಂತದಲ್ಲಿ ಮೃತಪಟ್ಟ ದ.ಕ....

ವಿದ್ಯಾರ್ಥಿಗಳಿಂದ ಬಸ್ ನಿರ್ವಾಹಕನ ಮೇಲೆ ಹಲ್ಲೆಗೆ ಖಂಡನೆ

ಉಳ್ಳಾಲ: ಫೆ.19ರಂದು ಗುರುವಾರ ಬೆಳಿಗ್ಗೆ ಬಿಸಿ ರೋಡ್‌ನಿಂದ ವಯಾ ಮಂಚಿ–ಮುಡಿಪು ಕಡೆ...