ದೇರಳಕಟ್ಟೆ, ಆ.20: ಬ್ಯಾರಿ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿಯ ಬೆಳವಣಿಗೆಯ ನಿಟ್ಟಿನಲ್ಲಿ ಉಳ್ಳಾಲ ತಾಲೂಕು ಮಟ್ಟದಲ್ಲಿ ಕಳೆದ 10 ವರ್ಷದಿಂದ ಕಾರ್ಯಾಚರಿಸುತ್ತಿರುವ ಬ್ಯಾರಿ ಎಲ್ತ್‌ಕಾರ್ ಪಿನೆ ಕಲಾವಿದಮಾರೊ ಕೂಟ (ಮೇಲ್ತೆನೆ)ದ ದಶಮಾನೋತ್ಸವ ಕಾರ್ಯಕ್ರಮದ ಕಚೇರಿಯನ್ನು ಉದ್ಘಾಟಿಸಲಾಯಿತು.

ದೇರಳಕಟ್ಟೆಯ ದುಬೈ ಪ್ಲಾಝಾದಲ್ಲಿ ತೆರೆಯಲಾದ ಕಚೇರಿಯನ್ನು ಪ್ಲಾಝಾ ಬಿಲ್ಡಿಂಗ್ ಮತ್ತು ಗ್ಲಾಡ್ ಕಲೆಕ್ಷನ್‌ನ ಮಾಲಕ ಸಿದ್ದೀಕ್ ಗ್ಲಾಡ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಬ್ಯಾರಿ ಸಾಹಿತ್ಯ, ಭಾಷೆ ಹಾಗೂ ಪರಂಪರೆಯನ್ನು ಉಳಿಸಿಬೆಳೆಸುವ ನಿಟ್ಟಿನಲ್ಲಿ ಕಾರ್ಯಾಚರಿಸುತ್ತಿರುವ ಱಮೇಲ್ತೆನೆೞಯ ದಶಮಾನೋತ್ಸವ ಸಮಾರಂಭ ಯಶಸ್ವಿಯಾಗಲಿ ಎಂದು ಆಶಿಸಿದರು.
ಮೇಲ್ತೆನೆಯ ಅಧ್ಯಕ್ಷ ವಿ. ಇಬ್ರಾಹೀಂ ನಡುಪದವು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷ ಆಲಿಕುಂಞಿ ಪಾರೆ, ಕೋಶಾಧಿಕಾರಿ ಮನ್ಸೂರ್ ಅಹ್ಮದ್ ಸಾಮಣಿಗೆ, ಉಪಾಧ್ಯಕ್ಷ ಅಶ್ರಫ್ ಡಿ.ಎ., ಜೊತೆ ಕಾರ್ಯದರ್ಶಿ ಸಿದ್ದೀಕ್ ಎಸ್. ರಾಝ್ , ಸದಸ್ಯರಾದ ಟಿ. ಇಸ್ಮಾಯಿಲ್ ಮಾಸ್ಟರ್, ಮುಹಮ್ಮದ್ ಬಾಷಾ ನಾಟೆಕಲ್, ಅಬ್ದುಲ್ ಬಶೀರ್ ಕಲ್ಕಟ್ಟ, ಅಶೀರುದ್ದೀನ್ ಸಾರ್ತಬೈಲ್, ರಿಯಾಝ್ ಮಂಗಳೂರ , ಹೈದರ್ ಆಲಡ್ಕ, ಯೂಸುಫ್ ವಕ್ತಾರ್, ರಫೀಕ್ (ಇಬ್ರಾಹೀಂ) ಮುದುಂಗಾರುಕಟ್ಟೆ, ಶರೀಫ್ ಪಟ್ಟೋರಿ ಉಪಸ್ಥಿತರಿದ್ದರು. ಮೇಲ್ತೆನೆಯ ಪ್ರಧಾನ ಕಾರ್ಯದರ್ಶಿ ಹಂಝ ಮಲಾರ್ ಕಾರ್ಯಕ್ರಮ ನಿರೂಪಿಸಿದರು.