ಉಳ್ಳಾಲ ಮೊಗವೀರ ಸಂಘದ ಸಹಕಾರದೊಂದಿಗೆ ಉಳ್ಳಾಲ ಮೊಗವೀರಪಟ್ಣದ ಶ್ರೀ ವಿಠೋಭ ರುಖುಮಾಯಿ ಭಜನಾ ಮಂದಿರದ ೯೨ನೇ ವರ್ಷದ ಸಮುದ್ರ ಪೂಜೆಯು ಶನಿವಾರ ಉಳ್ಳಾಲ ಮೊಗವೀರಪಟ್ಣದ ಸಮುದ್ರ ತೀರದಲ್ಲಿ ನಡೆಯಿತು.
ಸಮುದ್ರ ಪೂಜೆಯ ಪೂರ್ವಭಾವಿಯಾಗಿ ಶ್ರೀ ವಿಠೋಭ ರುಖುಮಾಯಿ ಭಜನಾ ಮಂದಿರದಲ್ಲಿ ಬೆಳಗಿನ ಜಾವ ಭಜನಾ ಮಂದಿರದಲ್ಲಿ ದೇವರಿಗೆ ಹಾಲನ್ನಿಟ್ಟು ನಿರಂತರ ಭಜನೆಯೊಂದಿಗೆ ಸಂಜೆ ಹೂ,ಹಾಲು,ಫಲ
ವಸ್ತುಗಳನ್ನು ಮೊಗವೀರಪಟ್ಣದ ಸಮುದ್ರ ತೀರದಲ್ಲಿ ವಿಶೇಷ ಪೂಜೆಯ ಬಳಿಕ ಗಂಗಾದೇವಿಗೆ ಸಮರ್ಪಿಸುವದರೊಂದಿಗೆ ೯೨ನೇ ವರ್ಷದ ಸಮುದ್ರ ಪೂಜೆಯು ಸಂಪನ್ನಗೊAಡಿತು.
ಈ ಸಂದರ್ಭದಲ್ಲಿ ಉಳ್ಳಾಲ ಮೊಗವೀರ ಸಂಘದ ಅಧ್ಯಕ್ಷ ಯಶವಂತ ಪಿ ಅಮೀನ್, ಪ್ರ. ಕಾರ್ಯದರ್ಶಿ ದಯಾನಂದ ಬಂಗೇರ, ಮಾಜಿ ಅಧ್ಯಕ್ಷರು ಸದಾನಂದ ಬಂಗೇರ, ಶ್ರೀ ವ್ಯಾಘ್ರ ಚಾಮುಂಡೇಶ್ವರಿ ದೇವಸ್ಥಾನದ ಮಧ್ಯಸ್ಥರು,ಅರ್ಚಕರು,ಗುರಿಕಾರ ವೃಂದ ,ಹಾಗೆ ವಿಠೋಭ ಭಜನಾ ಮಂದಿರದ ಅರ್ಚಕರಾದ ಯಾದವ ಬಂಗೇರ, ತಾರಾನಾಥ್ ಸುವರ್ಣ,ಅಧ್ಯಕ್ಷ ಪ್ರಶಾಂತ್ . ಬಿ.ಉಳ್ಳಾಲ್,ಕಾರ್ಯದರ್ಶಿ ಸುಽÃರ್ ಬಂಗೇರ,ಕೋಶಾಽಕಾರಿ ವಿನೋದ್ ಬಂಗೇರ,ಸರ್ವ ಸದಸ್ಯರು ಹಾಗೂ ಶ್ರೀ ರಾಮ ಭಜನಾ ಮಂದಿರದ ಅಧ್ಯಕ್ಷ ರೋಹಿನಾಥ್ ಕೋಟ್ಯಾನ್, ಹಾಗೂ ಸರ್ವ ಸದಸ್ಯರು, ಭಕ್ತಾಽಗಳು, ಎಲ್ಲಾ ಸಂಘ ಸಂಸ್ಥೆಗಳ ಸದಸ್ಯರು ಉಪಸ್ಥಿತರಿದ್ದರು