ಮೂಡುಬಿದಿರೆ : ತಾಲೂಕಿನ ನಿಡ್ಡೋಡಿಯ ಮನೆಯೊಂದರಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯರಿಬ್ಬರನ್ನು ಸಾಮೂಹಿಕ ಅತ್ಯಾಚಾರವೆಸಗಲು ತಯಾರಿ ನಡೆಸುತ್ತಿದ್ದ ನಾಲ್ವರು ದುಷ್ಕರ್ಮಿಗಳನ್ನು ಸಮಯ ಪ್ರಜ್ಞೆಯನ್ನು ಉಪಯೋಗಿಸಿ ಬಂಧಿಸಿದ ಮೂಡುಬಿದಿರೆ ಪೋಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ ಮತ್ತು ಪೋಲೀಸ್ ಸಿಬ್ಬಂದಿಗಳನ್ನು ಜನವಾದಿ ಮಹಿಳಾ ಸಂಘಟನೆ ಮೂಡುಬಿದಿರೆ ತಾಲೂಕು ಸಮಿತಿಯು ಅಭಿನಂದನೆ ಸಲ್ಲಿಸಿ ಮನವಿ ನೀಡಿತು.
ವಿಷಯ ತಿಳಿದ ಕೂಡಲೇ ಸಂಘಟನೆಯ ಉನ್ನತ ಮಟ್ಟದ ನಿಯೋಗವು ಮನವಿಯನ್ನು ಪೋಲೀಸ್ ನಿರೀಕ್ಷಕರಿಗೆ ನೀಡಿ ಆರೋಪಿತ ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆಗೊಳಪಡಿಸಬೇಕೆಂದು ಒತ್ತಾಯಿಸಲಾಯಿತು.
ನಿಯೋಗದಲ್ಲಿ ಜನವಾದಿ ಮಹಿಳಾ ಸಂಘಟನೆ ತಾಲೂಕು ಕಾರ್ಯದರ್ಶಿ ಲಕ್ಷೀ, ತಾಲೂಕು ಸಮಿತಿಯ ಸದಸ್ಯೆಯರಾದ ಗಿರಿಜ, ರಕ್ಷಾ ಹಾಗೂ ಸಿಪಿಐ ಪಕ್ಷದ ದ.ಕ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ವಸಂತ ಆಚಾರಿ ನಿಯೋಗದೊಂದಿಗೆ ಉಪಸ್ಥಿತರಿದ್ದರು.



