ಮುಡಿಪು: ಕೊಣಾಜೆ ಪೋಲಿಸ್ ಠಾಣೆ ಹಾಗೂ ಮುಡಿಪು ಸರಕಾರಿ ಪ್ರಥಮ ದರ್ಜೆ ಕಾಲೆಜೀನ ರಾಷ್ಟ್ರೀಯ ಸೇವಾ ಯೋಜನೆಯ ಸಹಯೋಗದೊಂದಿಗೆ ಸರ್ದಾರ್ ವಲ್ಲಭಭಾಯಿ ಪಟೇಲ್ ರವರ 150ನೇ ಜನ್ಮದಿನದ ಪ್ರಯುಕ್ತ ಏಕತಾ ರ್ಯಾಲಿ ನಡೆಯಿತು.ಸರ್ದಾರ್ ವಲ್ಲಭಭಾಯಿ ಪಟೇಲ್ ರವರ 150ನೇ ಜನ್ಮದಿನದ ಪ್ರಯುಕ್ತ ಮುಡಿಪು ಜಂಕ್ಷನ್ ನಿಂದ ಮುಡಿಪು ಕಾಲೇಜ್ ವರೆಗೆ ಏಕತಾ ರ್ಯಾಲಿ ಸಾಗಿಬಂತು.

ಕೊಣಾಜೆ ಪೋಲಿಸ್ ಠಾಣಾ ಉಪ ನಿರೀಕ್ಷಕ ನಾಗರಾಜ್ ಕಾರ್ಯಕ್ರಮ ಉದೇಶಿ ಮಾತನಾಡಿ ಸರ್ದಾರ್ ವಲ್ಲಭಭಾಯಿ ಪಟೇಲ್ ರವರ 150ನೇ ಜನ್ಮದಿನದ ಪ್ರಯುಕ್ತ ಎಲ್ಲಾ ಕಡೆ ಯುನಿಟ್ ರನ್ ಕಾರ್ಯಕ್ರಮ ಅಯೋಜಿಸಿದೆ. ಸರ್ದಾರ್ ವಲ್ಲಭಭಾಯಿ ಪಟೇಲ್ ನಮ್ಮ ದೇಶಾದ್ಯಂತ ಸ್ವಾತಂತ್ರ್ಯ ಪಡೆದ ಬಳಿಕ ಎಲ್ಲಾ ಪ್ರಾಂತ್ಯಗಳು ಒಗ್ಗೂಡಿಸಿದ್ದಾರೆ. ಇದರ ಸಂಕಲ್ಪ ವಾಗಿ ರಾಷ್ಟ್ರೀಯ ಏಕತಾ ದಿನಾಚರಣೆಯನ್ನು ಅಚರಿಸುತ್ತಿದೆವೆ ಎಂದು ಹೇಳಿದರು.

ಸಹಾಯಕ ಉಪ ನಿರೀಕ್ಷಕರಾದ ಪ್ರವಿಣ್ , ಚೇತನ್ ಕುಮಾರ್, ಮುಡಿಪು ಜನ ಶಿಕ್ಷಣ ಟ್ರಸ್ಟ್ ನ ರಾಮಕೃಷ್ಣ ಉಮಿಯ, ಕೃಷ್ಣ ಮೂಲ್ಯ, ಮಂಗಳೂರು ವಿಶ್ವವಿದ್ಯಾನಿಲಯದ ಎನ್.ಎಸ್ ಎಸ್ ಸಂಯೋಜಕ ಡಾ.ಸೇಸಪ್ಪ.ಕೆ, ಮುಡಿಪು ಸರಕಾರಿ ಪ್ರಥಮ ದರ್ಜೆ ಕಾಲೆಜೀನ ದೈಹಿಕ ಶಿಕ್ಷಣ ನಿರ್ದೇಶಕ ರಫೀಕ್.ಕೆ ಉಪಸ್ಥಿತರಿದ್ದರು.



