ಸಂಗೀತ ಮತ್ತು ಸಾಹಿತ್ಯವು ಸಂಸ್ಕಾರವನ್ನು ಬೆಳೆಸುತ್ತದೆ: ಎಕ್ಸಲೆಂಟ್ ಸಂಗೀತ ಸಂಜೆಯಲ್ಲಿ ಪದ್ಮಶ್ರೀ ಪಂಡಿತ್ ವೆಂಕಟೇಶ್ ಕುಮಾರ್

Date:

ಮೂಡುಬಿದಿರೆ : ಸಂಗೀತ ಮತ್ತು ಸಾಹಿತ್ಯ ಕಾಯ೯ಕ್ರಮಗಳು ನಮ್ಮ ಮನಸ್ಸನ್ನು ಮುದಗೊಳಿಸುವುದಲ್ಲದೆ ಸಂಸ್ಕಾರವನ್ನು ಬೆಳೆಸುತ್ತದೆ ಎಂದು ಪದ್ಮಶ್ರೀ ಪಂಡಿತ್ ವೆಂಕಟೇಶ ಕುಮಾರ್ ಹೇಳಿದರು.

ಅವರು ಮೂಡುಬಿದಿರೆ ಎಕ್ಸಲೆಂಟ್ ವಿದ್ಯಾ ಸಂಸ್ಥೆಯಲ್ಲಿ ಗುರುವಾರ ನಡೆದ ‘ತೊರೆದು ಜೀವಿಸಬಹುದೇ..’ ಎಕ್ಸಲೆಂಟ್ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದರು.

ಸಂಗೀತವು ಅಪೂರ್ವ ವಾಹನ ಕಲೆ ಅದು ಹೃದಯದ ಭಾಷೆ. ಗುರುಕುಲ ಮಾದರಿಯಲ್ಲಿ ನಡೆಯುತ್ತಿರುವ ಈ ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ಈ ರೀತಿಯ ಸಂಗೀತ ಸಮಾರಾಧನೆ ನಡೆಯುವುದು ಕಲೆಯ ಭಾಗ್ಯ ಎಂದ ಅವರು ವಿದ್ಯಾರ್ಥಿಗಳು ಶಾಸ್ತ್ರೀಯ ಸಂಗೀತವನ್ನು ಅಭ್ಯಾಸ ಮಾಡಿದರೆ ಉತ್ತಮ ಎಂದು ಸಲಹೆ ನೀಡಿದರು.

ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್ ಅಧ್ಯಕ್ಷತೆ ವಹಿಸಿ ಮಾತನಾಡಿ ಕಾಲೇಜು ಕೇವಲ ಪಠ್ಯಕ್ಕೆ ಸೀಮಿತವಾಗದೆ, ಸರ್ವಾಂಗೀಣ ವ್ಯಕ್ತಿತ್ವ ವಿಕಸನಕ್ಕೆ ವೇದಿಕೆಯಾಗಬೇಕು. ಈ ದೃಷ್ಟಿಯಿಂದ ಕಾಲೇಜುಗಳಲ್ಲಿ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸುವುದು ವಿದ್ಯಾರ್ಥಿಗಳಿಗೆ ಅನೇಕ ರೀತಿಯ ಲಾಭಗಳನ್ನು ನೀಡುತ್ತದೆ.


ಸಂಗೀತವು ಮನಸ್ಸಿಗೆ ಶಾಂತಿ ಮತ್ತು ಉಲ್ಲಾಸವನ್ನು ನೀಡುತ್ತದೆ. ನಿರಂತರ ಪಾಠ, ಪರೀಕ್ಷಾ ಒತ್ತಡ ಮತ್ತು ಸ್ಪರ್ಧಾತ್ಮಕ ವಾತಾವರಣದಲ್ಲಿರುವ ವಿದ್ಯಾರ್ಥಿಗಳಿಗೆ ಸಂಗೀತ ಕಾರ್ಯಕ್ರಮಗಳು ಮಾನಸಿಕ ಒತ್ತಡವನ್ನು ಕಡಿಮೆ ಮಾಡಿ ಆತ್ಮಸ್ಥೈರ್ಯವನ್ನು ಹೆಚ್ಚಿಸುತ್ತವೆ. ಶಾಸ್ತ್ರೀಯ, ಸುಗಮ, ಜನಪದ ಅಥವಾ ಭಾವಗೀತೆಗಳಂತಹ ವಿವಿಧ ಸಂಗೀತ ಶೈಲಿಗಳ ಪರಿಚಯದಿಂದ ವಿದ್ಯಾರ್ಥಿಗಳಲ್ಲಿ ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ಮೇಲಿನ ಗೌರವ ಹೆಚ್ಚುತ್ತದೆ ಎಂದರು.

ವೇದಿಕೆಯಲ್ಲಿ ಉದ್ಯಮಿ ಶ್ರೀಪತಿ ಭಟ್, ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್, ಎಕ್ಸಲೆಂಟ್ ಸಂಸ್ಥೆಯ ಆಡಳಿತ ನಿರ್ದೇಶಕ ಡಾ. ಸಂಪತ್ ಕುಮಾರ್, ಪ್ರಾಂಶುಪಾಲರಾದ ಪ್ರದೀಪ್ ಕುಮಾರ್ ಶೆಟ್ಟಿ ಮುಖ್ಯ ಶಿಕ್ಷಕ ಶಿವಪ್ರಸಾದ್ ಭಟ್, ಸಿಬಿಎಸ್‌ಸಿ ಪ್ರಾಂಶುಪಾಲರಾದ ಶ್ರೀ ಪ್ರಸಾದ್ ಉಪಸ್ಥಿತರಿದ್ದರು.

ಉಪನ್ಯಾಸಕ ಡಾ. ವಾದಿರಾಜ ಕಲ್ಲುರಾಯ ಕಾಯ೯ಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಎಸ್.ಡಿ.ಪಿ.ಐ ಉಡುಪಿ ಜಿಲ್ಲೆ ವತಿಯಿಂದ SIR ಕುರಿತು ಸಾರ್ವಜನಿಕ ಸಮಾಲೋಚನಾ ಸಭೆ

ಎಸ್.ಡಿ.ಪಿ.ಐ ಉಡುಪಿ ಜಿಲ್ಲೆ ವತಿಯಿಂದ SIR ಕುರಿತು ಸಾರ್ವಜನಿಕ ಸಮಾಲೋಚನಾ ಸಭೆ ಉಡುಪಿ:...

ಬಜ್ಪೆ ಪಟ್ಟಣ ಪಂಚಾಯತ್: ಖಾತೆ ತೆರೆದ ಎಸ್‌ಡಿಪಿಐ

ಮಂಗಳೂರು: ಬಜ್ಪೆ ಪಟ್ಟಣ ಪಂಚಾಯತ್ ಚುನಾವಣೆಯ ಮತ ಎಣಿಕೆ ಕಾರ್ಯ ನಡೆಯುತ್ತಿದ್ದು,...

ಅಮನಬೆಟ್ಟುವಿನಲ್ಲಿ ಉಚಿತ ಆರೋಗ್ಯ ಮತ್ತು ನೇತ್ರಾ ಚಿಕಿತ್ಸಾ ಶಿಬಿರ

ಮೂಡುಬಿದಿರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಮೂಡುಬಿದಿರೆ...

ಅಣಬೆ ಕೃಷಿ ಮತ್ತು ಸಾಬೂನು ತಯಾರಿಕೆಯ ಬಗ್ಗೆ ಮಾಹಿತಿ

ಮೂಡುಬಿದಿರೆ: ರೈತ ದಿನಾಚರಣೆ ಅಂಗವಾಗಿ ತೆಂಕ ಮಿಜಾರ್ ಗ್ರಾಮ ಪಂಚಾಯತ್ ಹಾಗೂ...