ಸ್ಪೀಕರ್ ಯು. ಟಿ. ಖಾದರ್ ಅವರ ಕನಸಿನ ಯೋಜನೆಯಾ ಗಿರುವ ಮಂಗಳೂರು ವಿಧಾನ ಸಭಾಕ್ಷೇತ್ರ ವ್ಯಾಪ್ತಿಯಲ್ಲಿ ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿಯಲ್ಲಿ ದಿನದ 24ಗಂಟೆ ಕುಡಿಯುವ ನೀರು ಸರಬರಾಜಿಗೆ ಮನೆ ಮನೆಗೆ ನಲ್ಲಿ ಸಂಪರ್ಕ ಈಗಾಗಲೇ ಆಗಿದ್ದು ಈ ಕಾಮಗಾರಿಯಿಂದ ಜನರಿಗೆ ಬಹು ದೊಡ್ಡ ಉಪಯೋಗವಾಗಲಿದೆ ಎಂದು ನರಿಂಗಾನ ಗ್ರಾಮ ಪಂಚಾಯಿತಿ ಅಧ್ಯಕ್ಷ ನವಾಜ್ ನರಿಂಗಾನ ಹೇಳಿದರು.

ಬಹು ಗ್ರಾಮ ಕುಡಿಯುವ ನೀರು ಯೋಜನೆಯಡಿಯಲ್ಲಿ ನರಿಂಗಾನ ಗ್ರಾಮದಲ್ಲಿ ನಿರ್ಮಾಣ ಆಗಲಿರುವ ಓವರ್ ಹೆಡ್ ಟ್ಯಾಂಕ್ ಗೆ ತೌಡುಗೋಳಿಯ ಯುವಕ ಮಂಡಲದ ವಠಾರದಲ್ಲಿ ಶನಿವಾರ ಶಂಕು ಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಜಲಜೀವನ್ ಮಿಷನ್ ಗೆ ಸಂಬಂಧಿಸಿದಂತೆ ಗ್ರಾಮದಲ್ಲಿ ಈಗಾಗಲೇ ಬಹಳಷ್ಟು ಕಾಮಗಾರಿ ನಡೆದಿದೆ. ಹಾಗೆಯೇ ಗ್ರಾಮದ ಎತ್ತರದ ಪ್ರದೇಶದಲ್ಲಿ ಬೃಹತ್ ಟ್ಯಾಂಕ್ ನಿರ್ಮಾಣ ಆಗಲಿದೆ ಎಂದರು.
ನರಿಂಗಾನ ಗ್ರಾಮ ಪಂಚಾಯಿತಿ ಹಿರಿಯ ಸದಸ್ಯ ಶೇಖಬ್ಬ ನಿಡ್ಮಾಡ್, ಸದಸ್ಯರಾದ ಮುರಲೀಧರ ಶೆಟ್ಟಿ ಮೋರ್ಲ , ಸುಂದರ ಪೂಜಾರಿ ಕೋಡಿ ಮಜಲು, ಯುವಕ ಮಂಡಲದ ಮಾಜಿ ಗೌರವಾಧ್ಯಕ್ಷ ಉದಯ ಶಂಕರ್ ಶೆಟ್ಟಿ ಬಲೆತ್ತೋಡು, ಸ್ಥಳೀಯರಾದ ಬಾವುಚ್ಚ, ಫಾರೂಕ್ ಪಾಲ್ಗೊಂಡಿದ್ದರು.