ನಿಟ್ಟೆ ವಿವಿಯಲ್ಲಿ ಕಾರ್ಯಾಗಾರ ಉದ್ಘಾಟನೆ
ಆಧುನಿಕ ಶಸ್ತ್ರಚಿಕಿತ್ಸೆಯ ಸುಧಾರಿತ ಭವಿಷ್ಯಕ್ಕೆ ಅನಸ್ಥೇಶಿಯಾ ಪೂರಕ – ಡಾ. ಕೆ. ಶಾಂತಾರಾಮ ಶೆಟ್ಟಿ
ದೇರಳಕಟ್ಟೆ: “ಯಾವುದೇ ಶಸ್ತ್ರಚಿಕಿತ್ಸೆಯು ಅನಸ್ಥೇಶಿಯಾ ಸಹಕಾರವಿಲ್ಲದೆ ಸಾಧ್ಯವಿಲ್ಲ. ಶಸ್ತ್ರಚಿಕಿತ್ಸಕರಿಗೆ ಈ ಕ್ಷೇತ್ರದ ಬಗ್ಗೆ ಗೌರವವಿರಬೇಕು.ಆಧುನಿಕ ಶಸ್ತ್ರಚಿಕಿತ್ಸೆಯ ಸುಧಾರಿತ ಭವಿಷ್ಯಕ್ಕೆ ಅನಸ್ಥೇಶಿಯಾ ಪೂರಕವಾಗಿದೆ ಎಂದು ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯದ ಸಹ ಕುಲಾಧಿಪತಿ ಪ್ರೊ.ಶಾಂತರಾಮ ಶೆಟ್ಟಿ ಅವರು ಹೇಳಿದರು.
ಅವರು ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯದ ಅನಸ್ಥೇಶಿಯಾಲಜಿ ಹಾಗೂ ಕ್ರಿಟಿಕಲ್ ಕೇರ್ ವಿಭಾಗದ ವತಿಯಿಂದ ಇಂಡಿಯನ್ ಸೊಸೈಟಿ ಆಫ್ ಅನಸ್ಥೇಶೀಯಾಲಜಿಸ್ಟ್ಸ್ ಇದರ ಸಹಯೋಗದೊಂದಿಗೆ ಗುರುವಾರ ದೇರಳಕಟ್ಟೆಯಲ್ಲಿ ನಡೆದ ‘ಇಸಕಾನ್ ಕರ್ನಾಟಕ 2025 ‘ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗಿಲ್ಬರ್ಟ್ ಎಂಬ ರೋಗಿಗೆ ಕುತ್ತಿಗೆಯಲ್ಲಿದ್ದ ರಕ್ತನಾಳದ ಟ್ಯೂಮರ್ಗೆ ಸರ್ಜನ್ ಡಾ. ಜಾನ್ ಕೊಲಿನ್ ಅವರು ಶಸ್ತ್ರಚಿಕಿತ್ಸೆ ಮಾಡಿದ ವೇಳೆ ಅನಸ್ಥೇಶಿಯಾ ನೀಡಲಾಗಿತ್ತು. ಇಂದಿಗೂ ಅದು ವೈದ್ಯಕೀಯ ಇತಿಹಾಸದಲ್ಲಿ ಸ್ಮರಣೀಯ ಘಟನೆಯಾಗಿ ಉಳಿದಿದೆ. ಅನಸ್ಥೇಶಿಯಾ ವಿಭಾಗದ ಅಥವಾ ಕ್ಷೇತ್ರದಲ್ಲಿ ಸೇವೆ ಮಾಡುವವರ ಸಂಯಮ, ಜವಾಬ್ದಾರಿ ಮತ್ತು ಮಹತ್ವವನ್ನು ನಾನು ನೇರವಾಗಿ ಕಂಡುಬಂದಿದ್ದೇನೆ ಎಂದರು.
ಕೆ.ಎಸ್ ಹೆಗ್ಡೆ ಮೆಡಿಕಲ್ ಅಕಾಡೆಮಿಯ ಡೀನ್ ಡಾ.ಸಂದೀಪ್ ರೈ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಾಗಾರದ ಸಂಘಟನಾ ಮುಖ್ಯಸ್ಥರಾದ ಡಾ.ಆನಂದ ಬಂಗೇರ, ಕಾರ್ಯದರ್ಶಿ ಶ್ರೀಪಾದ ಜಿ ಮೆಹಂದಲೆ, ಅನಸ್ಥೇಶಿಯಾಲಜಿ ವಿಭಾಗದ ಮುಖ್ಯಸ್ಥರಾದ ಡಾ.ಅವಿನಾಶ್ ಭಂಡಾರಿ ಹಾಗೂ ವಿವಿಧ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು.
ಕಾರ್ಯಾಗಾರದ ನಿರ್ದೆಶಕಿ ಡಾ.ಸುಮಲತಾ ಅವರು ಸ್ವಾಗತಿಸಿದರು.ಸಮ್ಮೇಳನದ ಸಹ ಸಂಯೋಜಕ ಡಾ.ಗೋವಿಂದ್ ರಾಜ್ ಭಟ್ ವಂದಿಸಿದರು. ಡಾ.ಸ್ನೇಹಗಂಗಾ ಕಾರ್ಯಕ್ರಮ ನಿರೂಪಿಸಿದರು.