ಉಳ್ಳಾಲ, ನ.29: ಕೋಟೆಕಾರ್ ಪಟ್ಟಣ ಪಂಚಾಯತ್ನ ಸಾಮಾನ್ಯ ಸಭೆಯು ಅಧ್ಯಕ್ಷೆ ದಿವ್ಯಾ ಸತೀಶ್ ಅಧ್ಯಕ್ಷತೆಯಲ್ಲಿ ಶನಿವಾರ ನಡೆಯಿತು.
ಸಭೆಯಲ್ಲಿ ಮಾತನಾಡಿದ13ನೇ ವಾರ್ಡಿನ ಎಸ್ಡಿಪಿಐ ಪಕ್ಷ ಬೆಂಬಲಿತ ಕೌನ್ಸಿಲರ್ ಹಾಗೂ ಆಡಳಿತ ಪಕ್ಷದ 14ನೇ ವಾರ್ಡಿನ ಕೌನ್ಸಿಲರ್ ಜಗದೀಶ್ ಬನತ್ತಡಿಯಲ್ಲಿರುವ ಸರಕಾರಿ ಜಾಗದಲ್ಲಿ ಎಫ್ಎಸ್ಟಿಪಿ ತ್ಯಾಜ್ಯ ನಿರ್ವಹಣೆ ಘಟಕ ನಿರ್ಮಾಣಕ್ಕೆ ಜಾಗ ಮೀಸಲಿಡುವುದು ಬೇಡ. ವಾರ್ಡಿನಲ್ಲಿ ಹಲವಾರು ಮಂದಿ ಮೂಲಭೂತ ಹಕ್ಕಾದ ವಸತಿ ಇಲ್ಲದವರಿದ್ದಾರೆ. ಆದುದರಿಂದ ವಸತಿ ನಿವೇಶನಕ್ಕೆ ಆ ಜಾಗವನ್ನು ಮೀಸಲಿಡಬೇಕೆಂದು ಕೇಳಿಕೊಂಡರು.

ಈ ವೇಳೆ ಇತರ ಸದಸ್ಯರು ಮಾತನಾಡಿ ವ್ಯಾಪಕ ಚರ್ಚೆ ನಡೆದು ಆಕ್ಷೇಪಕ್ಕೆ ಸಹಮತ ವ್ಯಕ್ತಪಡಿಸಿದರು.ಈ ವೇಳೆ ಮಾತನಾಡಿದ ಅಧ್ಯಕ್ಷೆ, ಬನತ್ತಡಿಯಲ್ಲಿ ಗುರುತಿಸಿದ ಜಾಗದಲ್ಲಿ ಎಫ್ಎಸ್ಟಿಪಿ ನಿರ್ಮಾಣಕ್ಕೆ ಸ್ಥಳೀಯ ಸದಸ್ಯರ ವಿರೋಧ ಇದೆ.ಇತರ ವಾರ್ಡ್ ಗಳಲ್ಲಿ ಮಾಡುವುದಕ್ಕೆ ಉಳಿದ ಸದಸ್ಯರುಗಳ ವಿರೋಧವಿದೆ. ಆದ್ದರಿಂದ ಕೋಟೆಗಾರು ಪ.ಪಂ ಹೊರಗಡೆ ಘಟಕ ನಿರ್ಮಾಣಕ್ಕೆ ಅವಕಾಶ ಮಾಡಿಕೊಡುವಂತೆ ತಹಶೀಲ್ದಾರರಿಗೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.
ಪಶು ಸಂಗೋಪನ ಇಲಾಖೆಯ ರಚನಾ ಮಾತನಾಡಿ, ಬೀದಿ ನಾಯಿಗಳ ಹಾವಳಿ ತಡೆಯಲು ಸಂತಾನ ಹರಣ ಚಿಕಿತ್ಸೆ ನೀಡಲಾಗುತ್ತದೆ. ಸಾಕು ನಾಯಿಗಳನ್ನು ತಂದಲ್ಲಿ ಸಂತಾನಹರಣ ಚಿಕಿತ್ಸೆ ನೀಡಲಾಗುವುದು ಎಂದು ಮಾಹಿತಿ ನೀಡಿದರು. ಶಿಶುಕಲ್ಯಾಣ ಇಲಾಖೆ ಮೇಲ್ವಿಚಾರಕಿ ಶಂಕರಿ ಮಾತನಾಡಿ, ತಲಪಾಡಿ ಪಟ್ನ ಬಳಿ ಒಂದು ಅಂಗನವಾಡಿ ಯಲ್ಲಿ ಎಲ್.ಕೆ.ಜಿ, ಯು.ಕೆ.ಜಿ ಪ್ರಾರಂಭಿಸಲಾಗಿದೆ. ಮುಂದಿನ ಹಂತದಲ್ಲಿ ಉಳಿದ ಅಂಗನವಾಡಿಗಳಲ್ಲೂ ಹಂತ ಹಂತವಾಗಿ ಇದು ಪ್ರಾರಂಭಗೊಳ್ಳಲಿದೆ ಎಂದರು.ಅಂಗನವಾಡಿ ತಾಲೂಕಿನ ಎಲ್ಲಾ ಕಡೆ ಶೀಘ್ರ ಪ್ರಾರಂಭಿಸಲು ಕ್ರಮ ಕೈಗೊಳ್ಳುವಂತೆ ಸದಸ್ಯರು ಆಗಮಿಸಿದರು.
ಪಟ್ಟಣ ಪಂಚಾಯತಿ ಪ್ರತಿ ವಾರ್ಡ್ಗಳಿಗೆ ತಲಾ 15 ದಾರಿ ದೀಪಗಳನ್ನು ನೀಡಲಾಗುವುದು ಒಟ್ಟು 280 ದಾರಿ ದೀಪಗಳನ್ನು ಖರೀದಿ ಮಾಡಲಾಗುವುದು ಎಂದು ಅಧ್ಯಕ್ಷ ದಿವ್ಯ ಸತೀಶ್ ಸಭೆಗೆ ಮಾಹಿತಿ ನೀಡಿದರು.ಅಗತ್ಯ ಸ್ಥಳಗಳಲ್ಲಿ ದಾರಿದೀಪಗಳನ್ನು ಅಳವಡಿಸಬೇಕಾಗಿರುವುದರಿಂದ 20 ದಾರಿ ದೀಪಗಳನ್ನು ನೀಡಬೇಕೆಂದು ಕೌನ್ಸಿಲರ್ ಸುಜಿತ್ ಮಾಡೂರ್ ಒತ್ತಾಯಿಸಿದರು. ದಾರಿದೀಪದ ಟೆಂಡರ್ ಸನ್ ಲೈಟ್ ಸಂಸ್ಥೆಗೆ ನೀಡುವುದು ಬೇಡ ಬೇರೊಬ್ಬರಿಗೆ ನೀಡಿ ಒಬ್ಬರು ನಿರ್ವಹಣೆ ಮಾಡಲಿ ಎಂದು ಕೌನ್ಸಿಲರ್ ಧೀರಜ್ ಆಗ್ರಹಿಸಿದರು.
ಪನೀರ್ ಕಾನ್ವೆಂಟ್ ಬಳಿ ಇರುವ ಸರಕಾರಿ ಸ್ಥಳದಲ್ಲಿ ಅಮೃತ್ 2.0 ಬಹು ಗ್ರಾಮ ಕುಡಿಯುವ ನೀರು ಯೋಜನೆ 10 ಲಕ್ಷ ಲೀಟರ್ ಸಾಮರ್ಥ್ಯದ ಓವರ್ ಹೆಡ್ ಟ್ಯಾಂಕ್ ನಿರ್ಮಿಸುವ ಚಿಂತನೆ ಇದೆ ಎಂದು ಅಧ್ಯಕ್ಷ ತಿಳಿಸಿದರು.ಈಗಿರುವ 65 ಕಳುವೆ ಬಾವಿಗಳ ಪೈಕಿ ಕೆಲವು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಹೋಗಲ್ಲ ದೃಷ್ಟಿಗೆ ಕ್ರಮ ಕೈಗೊಳ್ಳಬೇಕು ಎಂದು ಕೌನ್ಸಿಲರ್ ಸುಜಿತ್ ಮಾಡೂರ್ ಒತ್ತಾಯಿಸಿದರು.
ಪ್ರತಿ ವಾರ್ಡುಗಳ ಅಭಿವೃದ್ಧಿ ಕಾಮಗಾರಿಗಳಿಗೆ ತಲ 5 ಲಕ್ಷ ರೂ ಮೀಸಲಿ ಆಗಿದೆ ಆದರೆ ದೇಶವಾಡಿಗೆ ಮಾತ್ರ 15 ಲಕ್ಷ ರೂ ಇಡಲಾಗಿದೆ ಅದನ್ನು ಅಧ್ಯಕ್ಷರನ್ನಾಗಿ ಮಾತ್ರ ಸೀಮಿತವಾಗಿ ಬಳಸಬಾರದು ಪ್ರತಿ ವಾರ್ಡುಗಳ ಅಭಿವೃದ್ಧಿ ಕಾಮಗಾರಿಗಳಿಗೆ ತಲಾ 5 ಲಕ್ಷ ರೂ ಮೀಸಲಿಡಲಾಗಿದೆ ಆದರೆ ಅಧ್ಯಕ್ಷರ ವಾರ್ಡಿಗೆ ಮಾತ್ರ 15 ಲಕ್ಷ ರೂ ಇಡಲಾಗಿದೆ.ಅದನ್ನು ಅಧ್ಯಕ್ಷರ ವಾರ್ಡ್ ಗೆ ಮಾತ್ರ ಸೀಮಿತವಾಗಿ ಬಳಸಬಾರದು. ಇದರಲ್ಲಿ ತಾರತಮ್ಯ ನೀತಿ ಬೇಡ ಎಂದು ಕೌನ್ಸಿಲರ್ ಅಹಮದ್ ಅಜ್ಜಿನಡ್ಕ ಆಕ್ಷೇಪಿಸಿದರು.
16 ವಾರ್ಡುಗಳಿಗೂ ತುರ್ತು ಕಾಮಗಾರಿಗೆ ಹಣ ಮಂಜೂರು ಮಾಡಲಾಗಿದೆ ಆದರೆ ತನ್ನ ವಾರ್ಡ್ ಗೆ ತುರ್ತು ಕಾಮಗಾರಿಗೆ ಅನುದಾನ ನೀಡಲಾಗದೆ ತಾರತಮ್ಯ ಮಾಡಲಾಗಿದೆ.ಇದೇ ರೀತಿ ಮುಂದುವರಿದರೆ ವಾರ್ಡಿನ ನಾಗರೀಕರೊಂದಿಗೆ ಪಟ್ಟಣ ಪಂಚಾಯಿತಿ ಮುಂಭಾಗದಲ್ಲಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು 13ನೇ ವಾರ್ಡಿನ ಕೌನ್ಸಿಲರ್ ಸೆಲಿಮಾಬಿ.ಎಂ.ಆಕ್ರೋಶ ವ್ಯಕ್ತಪಡಿಸಿದರು.
ಸಭೆಯಲ್ಲಿ ಮುಖ್ಯ ಅಧಿಕಾರಿ ಮಾಲಿನಿ,ಉಪಾಧ್ಯಕ್ಷ ಪ್ರವೀಣ್ ಸ್ಥಾಯಿ ಸಮಿತಿ ಅಧ್ಯಕ್ಷ ಉದಯ್ ಕುಮಾರ್ ಉಪಸ್ಥಿತರಿದ್ದರು.


