ಪಿ.ಎ.ಇಂಜಿನಿಯರಿಂಗ್ ಕಾಲೇಜು: ಬಿ.ಇ.(ಹಾನರ್ಸ್) ಪದವೀಧರರಿಗೆ ಅಭಿನಂದನಾ ಸಮಾರಂಭ

Date:

ಕೊಣಾಜೆ: ಪದವಿ, ಶಿಕ್ಷಣದೊಂದಿಗೆ ನಾವು ಪಡೆದುಕೊಳ್ಳುವ ಕೌಶಲಗಳು ನಮ್ಮ ಬದುಕಿಗೆ ಸ್ಪೂರ್ತಿಯಾಗುತ್ತವೆ. ನಮಗೆ ಎದುರಾಗುವ ಸವಾಲುಗಳನ್ನು ಅವಕಾಶಗಳನ್ನಾಗಿ ಪರಿವರ್ತಿಸುವ ಚಾಕಚಕ್ಯತೆ ನಮ್ಮದಾಗಬೇಕು ಎಂದು ಟೆಕ್ ಮಹಿಂದ್ರಾ ಸಂಸ್ಥೆಯ ಕ್ಯಾಂಪಸ್ ನೇಮಕಾತಿ ವಿಭಾಗದ ಮ್ಯಾನೇಜರ್ ಕೀರ್ತಿ ಸಾಗರ್ ನಾಯಕ್ ಅವರು ಹೇಳಿದರು.
ಅವರು ಮಂಗಳವಾರ ಪಿ.ಎ.ಇಂಜಿನಿಯರಿಂಗ್ ಕಾಲೇಜಿನ ಸೆಮಿನಾರ್ ಸಭಾಂಗಣದಲ್ಲಿ ನಡೆದ ಪಿ.ಎ.ಇಂಜಿನಿಯರಿಂಗ್ ಕಾಲೇಜಿನ ಬಿ.ಇ.(ಹಾನರ್ಸ್) ಪದವೀಧರರಿಗೆ ಅಭಿನಂದನೆಯನ್ನು ನೆರವೇರಿಸಿ ಮಾತನಾಡಿದರು.
ಇಂದಿನ ಸ್ಪರ್ಧಾತ್ಮಕ ಕಾಲಘಟ್ಟದಲ್ಲಿ ನಾವು ಬೆಳೆಸಿಕೊಳ್ಳುವ ಸಂಪರ್ಕ ಮತ್ತು ಸಂವಹನ ನಮ್ಮ ಜೀವನದ ಯಶಸ್ಸಿನಲ್ಲಿ ಬಹುಮುಖ್ಯ ಪಾತ್ರವಹಿಸುತ್ತದೆ. ಇದರಿಂದ ಪರಿಪೂರ್ಣತೆಯನ್ನು ಗಳಿಸಿಕೊಳ್ಳಲು ಸಾಧ್ಯ. ನಾವು ಗಳಿಸುವ ಮೌಲ್ಯಗಳು, ಸೃಜನಶೀಲತೆ ನಮ್ಮ ಜೀವನದ ಅವಕಾಶಗಳನ್ನು ಸೃಷ್ಟಿಸುತ್ತದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಪಿ.ಎ.ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ.ರಮೀಝ್ ಎಂಕೆ ಅವರು, ಇಂತಹ ಕಾರ್ಯಕ್ರಮಗಳು ಕಿರಿಯ ವಿದ್ಯಾರ್ಥಿಗಳ ಜೀವನಕ್ಕೆ ಸ್ಪೂರ್ತಿಯಾಗಿದೆ. ಉತ್ತಮ ಶಿಕ್ಷಣವು ಉದ್ದೇಶಿತ ಗುರಿಯನ್ನು ಈಡೇರಿಸಬಲ್ಲುದು. ಪಿ.ಎ.ವಿದ್ಯಾಸಂಸ್ಥೆಯು ಕೌಶಲಾಧಾರಿತ ಶಿಕ್ಷಣದೊಂದಿಗೆ ಮುನ್ನಡೆಯುತ್ತಿದೆ ಎಂದರು.
ಪಿ.ಎ.ಎಜ್ಯುಕೇಶನ್ ಟ್ರಸ್ಟ್ ನ ಎಜಿಎಂ ಸರ್ಪುದ್ದೀನ್, ಡೀನ್ ಡಾ.ಸಯ್ಯದ್ ಅಮೀನ್ ಅಹಮ್ಮದ್, ಫಿಸಿಯೋಥೆರಪಿ ವಿಭಾಗದ ಪ್ರಾಂಶುಪಾಲೆ ಡಾ.ಅಫೀಫ ಸಲೀಂ,
ಪಿಎಪಿಟಿಯ ಪ್ರಾಂಶುಪಾಲ ಪ್ರೊ.ಇಸ್ಮಾಯಿಲ್ ಖಾನ್,
ಇಂಜಿನಿಯರಿಂಗ್ ಕಾಲೇಜು ಉಪಪ್ರಾಂಶುಪಾಲೆ ಡಾ.ಶರ್ಮಿಳಾ ಕುಮಾರಿ ಮೊದಲಾದವರು ಉಪಸ್ಥಿತರಿದ್ದರು.
ಸಹ ಸಂಯೋಜಕರಾದ ಪ್ರೊ.ವಿಠಲ್ ಭಟ್ ಅಭಿನಂದನಾ ಪುರಸ್ಕೃತ ವಿದ್ಯಾರ್ಥಿಗಳ ಹೆಸರು ವಾಚಿಸಿದರು.
ಕಾರ್ಯಕ್ರಮ ಸಂಯೋಜಕರಾದ ಪ್ರೊ.ಇಸ್ಮಾಯಿಲ್ ಶಾಫಿ ಎ.ಎಂ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಫಾದಿಲ್ ಮಹಮ್ಮದ್ ಪ್ರಾರ್ಥಿಸಿದರು. ಮೆಕಾನಿಕಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ.ಪ್ರಶಾಂತ್ ಪೈ ಅವರು ವಂದಿಸಿದರು. ಸಹಾಯಕ ಪ್ರಾಧ್ಯಾಪಕರಾದ ಪ್ರೊ.ಶಬೀಬ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಮಂಗಳೂರು ವಿವಿ 46 ನೇ ಸಂಸ್ಥಾಪನಾ ದಿನಾಚರಣೆ

ಕೋಣಾಜೆ: ಪ್ರಸ್ತುತ ಕಾಲಘಟ್ಟದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವು ಸ್ವಲ್ಪ ಆತಂಕದ ಸ್ಥಿತಿಯನ್ನು ಎದುರಿಸಿದರೂ...

ಪ್ರಾಥಮಿಕ ಆರೋಗ್ಯ ಕೇಂದ್ರ ಮಂಚಿ ವತಿಯಿಂದ ಆರೋಗ್ಯ ಸುರಕ್ಷಾಧಿಕಾರಿ ಹರಿಣಾಕ್ಷಿ ಅವರಿಗೆ ಬಿಳ್ಕೊಡುಗೆ

ಬಂಟ್ವಾಳ: ಪ್ರಾಥಮಿಕ ಆರೋಗ್ಯ ಕೇಂದ್ರ ಮಂಚಿ ವತಿಯಿಂದ ಆರೋಗ್ಯ ಸುರಕ್ಷಾಧಿಕಾರಿ ಹರಿಣಾಕ್ಷಿ...

ಸೆ. 14 ರಂದು ಸುರಿಬೈಲ್ ಮದರಸ ವಿದ್ಯಾರ್ಥಿಗಳ ಮೀಲಾದ್ ಫೆಸ್ಟ್

ಕಲ್ಲಡ್ಕ: ಬದ್ರಿಯಾ ಜುಮ್ಮಾ ಮಸೀದಿ ಸುರಿಬೈಲ್ ಇದರ ಅಧೀನದಲ್ಲಿರುವ ನುಸ್ರತುಲ್ ಉಲೂಂ...

ರೋಹನ್ ಕಾರ್ಪೊರೇಷನ್ ವತಿಯಿಂದ ಮಂಗಳೂರಿನಲ್ಲಿ “ರೋಹನ್ ಮರೀನಾ ಒನ್”

ಮಂಗಳೂರು: ಮೂರು ದಶಕಗಳ ಅನುಭವ ಹೊಂದಿರುವ ಭಾರತದ ಅತ್ಯಂತ ವಿಶ್ವಾಸಾರ್ಹ ರಿಯಲ್...