
ಉಳ್ಳಾಲ: ಹಿಂದೆ ಯಾವುದೇ ಶುಲ್ಕ ಪಡೆಯದೆ ಜನರನ್ನು ಸುಶಿಕ್ಷಿತಗೊಳಿಸಲು ಶಿಕ್ಷಕರು ಜೀವನ ಮುಡಿಪಾಗಿಟ್ಟಿದ್ದರು. ಪನೀರ್ ಚರ್ಚ್ ವ್ಯಾಪ್ತಿಯಲ್ಲಿ ಅತ್ಯಧಿಕ ಶಿಕ್ಷಕರು ಇರುವುದು ಹೆಮ್ಮೆಯ ವಿಚಾರ ಎಂದು ಚರ್ಚ್ ಧರ್ಮಗುರು ಫಾದರ್ ವಿಕ್ಟರ್ ಡಿಮೆಲ್ಲೋ ಅಭಿಪ್ರಾಯಪಟ್ಟರು.
ಪಾನೀರ್ ದಯಾಮಾತೆ ದೇವಾಲಯ ಮತ್ತು ಮಂಗಳೂರು ಪ್ರದೇಶ ಕಥೋಲಿಕ್ ಸಭಾ ಪಾನೀರ್ ಘಟಕದ ಆಶ್ರಯದಲ್ಲಿ ಭಾನುವಾರ ಪನೀರ್ ಚರ್ಚ್ ಸಭಾಂಗಣದಲ್ಲಿ ನಡೆದ ಶಿಕ್ಷಕರ ದಿನ ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿ ಮಾತನಾಡಿದರು.
ಶಿಕ್ಷಕ ಎನ್ನುವುದು ವೃತ್ತಿಯಲ್ಲ, ಇದೊಂದು ಸೇವೆ.
ಓರ್ವ ವ್ಯಕ್ತಿಯ ಭವಿಷ್ಯ ರೂಪಿಸುವ ಶಿಕ್ಷಕರು ಯಾವ ರೀತಿಯಲ್ಲಿ ನೋಡಿದರೂ ಅತ್ಯಂತ ಶ್ರೇಷ್ಠರು ಎಂದು ತಿಳಿಸಿದರು.
ಈ ಸಂದರ್ಭ 65 ಶಿಕ್ಷಕರನ್ನು ಗೌರವಿಸಲಾಯಿತು.
ಮಂಗಳೂರು ಪ್ರದೇಶ ಕಥೋಲಿಕ್ ಸಭಾ ಅಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್, 21 ಆಯೋಗದ ಸಂಯೋಜಕ ರೋನಾಲ್ದ್ ಡಿಸೋಜ, ಆಸಿಸಿ ಸೆಂಟ್ರಲ್ ಸ್ಕೂಲ್ ಪ್ರಾಂಶುಪಾಲೆ ಶಾಂತಿ ವಿಲ್ಮಾ ಅಲ್ಮೇಡ, ಪ್ರದೇಶ ಕಥೋಲಿಕ್ ಸಭಾ ಮಾಜಿ ಅಧ್ಯಕ್ಷ ಫ್ರಾಂಕಿ ಫ್ರಾನ್ಸಿಸ್ ಡಿಸೋಜ, ಕಾರ್ಯಕ್ರಮ ಪ್ರಯೋಜಕರು ರೆಮ್ಮಿ ಲೋಬೋ, ಅಶ್ವಿನ್ ಮೊಂತೆರೋ, ಕಾರ್ಯಕ್ರಮ ಸಂಚಾಲಕರಾ ಫೆಲಿಕ್ಸ್ ಡಿಸೋಜ ಉಪಸ್ಥಿತರಿದ್ದರು.
ಕಥೊಲಿಕ್ ಸಭಾ ಘಟಕಧ್ಯಕ್ಷ ಐವನ್ ಮೊಂತೆರೋ ಸ್ವಾಗತಿಸಿದರು. ವೈಲೆಟ್ ಡಿಸೋಜ ವಂದಿಸಿದರು. ರೇಷ್ಮಾ ಸಂತನೆಸ್ ಕಾರ್ಯಕ್ರಮ ನಿರ್ವಹಿಸಿದರು.