ಉಳ್ಳಾಲ: ಮೆರ್ಸಿಯಮ್ಮ ಇಗರ್ಜಿ ವತಿಯಿಂದ ಕಥೊಲಿಕ್ ಸಭಾ ಪಾನೀರ್ ಘಟಕದ ಪರಿಸರ ವಿಭಾಗ ಹಾಗೂ ಕೃಷಿ ಸಮಿತಿ ವತಿಯಿಂದ “ಲಾವ್ದಾತೊ ಸಿ” ಪರಿಸರ ದಿನಾಚರಣೆ ಕಾರ್ಯಕ್ರಮ ಪನೀರ್ ಚಚ್೯ ವಠಾರದಲ್ಲಿ ನಡೆಯಿತು.

ಪಾನೀರ್ ಮೆರ್ಸಿಯಮ್ಮ ಇಗರ್ಜಿಯ ಧರ್ಮಗುರು ಫಾ.ವಿಕ್ಟರ್ ಡಿಮೆಲ್ಲೋ
ಪನೀರ್ ಚಚ್೯ ವಠಾರದಲ್ಲಿ ಗಿಡ ನೆಡುವುವ ಮೂಲಕ ಕಾರ್ಯಕ್ರಮ ಕ್ಕೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು ಪರಸರ ದಿನದಂದು ಗಿಡಗಳನ್ನು ನೆಡುವುದು ಮುಖ್ಯವಲ್ಲ ಅದರ ಹಾರೈಕೆ ಮುಖ್ಯವಾಗಿರುತ್ತದೆ. ಆ ನಿಟ್ಟಿನಲ್ಲಿ ಆರು ಗುಂಪುಗಳನ್ನು ಮಾಡಿ ಗಿಡ ನೆಟ್ಟು ಅದರ ಹಾರೈಕೆಯ ಜವಾಬ್ದಾರಿಯನ್ನು ಅವರೆ ನೋಡಿಕೊಳ್ಳುವ ಮೂಲಕ ಅರ್ಥ ಪೂರ್ಣ ಪರಿಸರ ದಿನವನ್ನು ಅಚರಿಸುತ್ತಿದೆವೆ ಎಂದು ಹೇಳಿದರು.

ಕ್ರೈಸ್ತ ಒಕ್ಕೂಟ ರಾಜ್ಯಾಧ್ಯಕ್ಷ ಆಲ್ವಿನ್ ಡಿಸೋಜ ಪನೀರ್ ಪರಿಸರದ ಕುರಿತು ಮಾಹಿತಿ ನೀಡಿದರು. ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷೆ ಸರಿಟಾ ಡಿಸೋಜ, ಚರ್ಚ್ ಪಾಲನಾ ಮಂಡಳಿ ಕಾರ್ಯದರ್ಶಿ ಗ್ರೆಟ್ಟಾ ಡಿಕುನ್ಹಾ, ಎಸ್ ವಿಪಿ ಅಧ್ಯಕ್ಷ ಫ್ರಾಂಕಿ ಫ್ರಾನ್ಸಿಸ್ ಕುಟಿನ್ಹ,
ಕಥೊಲಿಕ್ ಸಭಾ ಪಾನೀರ್ ಘಟಕ ಅಧ್ಯಕ್ಷ ಇಯಾನ್ ಮೊಂತೆರೋ , ಕಾರ್ಯದರ್ಶಿ ವೈಲೆಟ್ ಡಿಸೋಜ, ಚಚ್೯ ಪಾಲನಾ ಸಮಿತಿ ಸಂಯೋಜಕ ರೋನಾಲ್ಡ್ ಡಿಸೋಜಾ, ಕೃಷಿ ಸಮಿತಿ ಸಂಚಾಲಕ ಉರ್ಬನ್ ಫೆರಾವೊ
, ಪರಿಸರ ಸಮಿತಿ ಅಧ್ಯಕ್ಷ ನೋರ್ಬಟ್ ಡಿಸೋಜ ಉಪಸ್ಥಿತರಿದ್ದರು.