ಪತ್ರಕರ್ತರ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ

Date:

ಕಚೇರಿ ಸದಾನಂದ ನಾಯಕ್ ರಚಿತ ಕೃತಿ ‘ಮಿಂಚಿ ಮರೆಯಾದ ಸಾರಸ್ವತ ರತ್ನಗಳು’ ಬಿಡುಗಡೆ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಸಂಸ್ಥೆಯಿಂದ ಪತ್ರಕರ್ತರ ಕುರಿತು ವಿಶೇಷ ಉಪನ್ಯಾಸ

ಪ್ರಸ್ತುತ ಸ್ವಾತಂತ್ರ್ಯವಾಗಿ ವರದಿ ಮಾಡುವುದು ಕಷ್ಟಕರ : ವಾಲ್ಟರ್ ನಂದಳಿಕೆ

vltvkannada.com ಮುಂಬಯಿ, ಜು.30: ಪ್ರಸ್ತುತ ಮಾಧ್ಯಮ ಕ್ಷೇತ್ರವು ಒಂದು ಬಹುದೊಡ್ಡ ಸವಾಲಾಗಿದ್ದು ವರದಿ ಮಾಡುವುದೇ ಸಂದೇಹವಾಗಿದೆ. ನಾವು ಸ್ವಾತಂತ್ರ್ಯವಾಗಿ ಹೇಗೆ ವರದಿ ಮಾಡಬಹುದು ಅನ್ನೊದೇ ಇಂದು ಪ್ರಶ್ನೆ. ಜಾಹೀರಾತು ಮತ್ತು ಪ್ರಾಯೋಜಕತ್ವ ಇಲ್ಲದೆ ನಾವು ಮಾಧ್ಯಮವನ್ನು ನಡೆಸಲು ಸಾಧ್ಯವಿಲ್ಲ. ಆದುದರಿಂದ 100% ಪಾರದರ್ಶಕವಾಗಿ ವರದಿ ಮಾಡಲು ಆಸಾಧ್ಯ. ರಾಜಕಾರಣಿಗಳು ಮತ್ತು ಕಾರ್ಪೋರೇಟ್ ಸಂಸ್ಥೆಗಳ ಮಾಲಕತ್ವದಲ್ಲಿರುವ ಕಾರಣ ಪ್ರಸ್ತುತ ಸುಮಾರು 98% ಮಿಡಿಯಾ ಹೌಸ್‌ಗಳಿಂದಾಗಿ ಇವತ್ತು ನಮ್ಮ ಟೆಲಿವಿಷನ್ ಚಾನೆಲ್‌ಗಳ ವರದಿಗಳನ್ನು ಜನ ನಂಬದಂತಾಗಿರುವುದು ದೂರದೃಷ್ಟಿಕರ. ಸದ್ಯದ ವರದಿಗಳು ಬರೀ ಒಂದು ಪಕ್ಕದ ಪಕ್ಷಪಾತ ವರದಿಗಳಾಗುತ್ತಿದ್ದು ಪತ್ರಕರ್ತರು ಧೈರ್ಯದಿಂದ ಪಾರದರ್ಶಕವಾದ ವರದಿಯನ್ನು ಮಾಡಬೇಕು ಎಂದು ದಾಝಿವರ್ಲ್ಡ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಇದರ ಸಂಸ್ಥಾಪಕ ಮತ್ತು ಆಡಳಿತ ನಿರ್ದೇಶಕ ವಾಲ್ಟರ್ ಡಿ’ಸೋಜಾ ನಂದಳಿಕೆ ತಿಳಿಸಿದರು.

ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇಂದಿಲ್ಲಿ ಆದಿತ್ಯವಾರ ಆಂಧೇರಿ ಪೂರ್ವದ ಸಾಲೀಟರಿ ಕಾರ್ಪೋರೆಟ್ ಪಾರ್ಕ್‌ ಕ್ಲಬ್ ಹೌಸ್ ಸಭಾಗೃಹದ ಸ್ವರ್ಗೀಯ ರಾಮಮೋಹನ್ ಶೆಟ್ಟಿ ಬಳ್ಳುಂಜೆ ವೇದಿಕೆಯಲ್ಲಿ ಪತ್ರಕರ್ತರ ಸಂಘದ ಅಧ್ಯಕ್ಷ ರೋನ್ಸ್ ಬಂಟ್ವಾಳ್ ಅಧ್ಯಕ್ಷತೆಯಲ್ಲಿ ಜರುಗಿದ ಪತ್ರಕರ್ತರ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಚಲನಚಿತ್ರ ನಟ ಅರವಿಂದ ಬೋಳಾರ್, ಎ.ಜೆ.ಎಸ್ ಮಾರ್ಕೆಟಿಂಗ್ (ಮಲಾಡ್) ಇದರ ನಿರ್ದೇಶಕ ಆಲ್ವಿನ್ ಸಿಕ್ಕೇರಾ ಗರ್ಡಾಡಿ, ಕಪಸಮ ಸ್ಥಾಪಕ ಉಪಾಧ್ಯಕ್ಷ ಕಚೇರಿ ಸದಾನಂದ ಡಿ.ನಾಯಕ್ ಅತಿಥಿ ಅಭ್ಯಾಗತರಾಗಿ ವೇದಿಕೆಯನ್ನಲಂಕರಿಸಿದ್ದು ಕಚೇರಿ ಪ್ರಕಾಶನ ಪ್ರಕಟಿತ ಸದಾನಂದ ನಾಯಕ್ ರಚಿತ ಐದನೇ ಕೃತಿ ‘ಮಿಂಚಿ ಮರೆಯಾದ ಸಾರಸ್ವತ ರತ್ನಗಳು’ ಹೊತ್ತಿಗೆಯನ್ನು ವಾಲ್ಟರ್ ನಂದಳಿಕೆ ಬಿಡುಗಡೆ ಗೊಳಿಸಿದರು.

ಮಹಾರಾಷ್ಟ್ರ ಸರಕಾರದ ರಾಷ್ಟ್ರೀಯ ತನಿಖಾ ಕರ್ತತ್ವ (ಎನ್‌ಐಎ) ಸಂಸ್ಥೆಯ ವಿಶೇಷ ವ್ಯಾಜ್ಯದಾರ ಮತ್ತು ಕಪಸಮ ಸಲಹಾ ಸಮಿತಿಯ ಹಿರಿಯ ಸಲಹೆಗಾರ ನ್ಯಾಯವಾದಿ ಕಡಂದಲೆ ಪರಾರಿ ಪ್ರಕಾಶ್ ಎಲ್.ಶೆಟ್ಟಿ ಉಪನ್ಯಾಸ ನೀಡಿ ಪತ್ರಿಕೋದ್ಯಮವು ಉಚಿತ (ಫ್ರೀ), ನ್ಯಾಯೋಚಿತ (ಫೇರ್) ಮತ್ತು ನಿರ್ಭಿತ (ಫಿಯರ್‌ಲೆಸ್) ಪತ್ರಿಕೆ ಸ್ವಾತಂತ್ರ್ಯ ಕಾಯ್ದು ಕೊಳ್ಳಬೇಕಾಗಿದೆ. ವೃತ್ತಪತ್ರಿಕೆಗಳು ಮೊದಲಿನಿಂದಲೂ ಇತ್ತು. ಅಂದಿನ ಕಷ್ಟಕಾಲದಲ್ಲಿ ಯಾವ ರೀತಿ ಪತ್ರಿಕಾ ವರದಿಗಳು ಜನಮನ ತಲುಪುತ್ತಿದ್ದವು ಎಂದು ನಾವು ಇಂದು ಚಿಂತಿಸಬೇಕಾಗಿದೆ. ಧಾವಂತದ ಬದುಕಿನಲ್ಲಿ ವರದಿಗಾರಿಕೆಯ ಮೌಲ್ಯಗಳು ಕಸಿದುಕೊಳ್ಳದಂತೆ ಎಚ್ಚರಿಕೆ ವಹಿಸುವ ಅಗತ್ಯ ಪತ್ರಕರ್ತರಿಗಿದೆ. ಸದ್ಯ ಸಂಶೋಧನಾತ್ಮಕ ವರದಿಗಳ ಕ್ಷೀಣತೆಯಿದ್ದು ಜ್ಞಾನಿಗಳ ಸಲಹೆಗಳ ನಿರ್ಲಕ್ಷ್ಯ ಸಲ್ಲದು. ವಿದ್ಯುನ್ಮಾನ (ಎಲೆಕ್ಟ್ರಾನಿಕ್ ಮಿಡಿಯಾ) ಮಾಧ್ಯಮಗಳು ಬಂದ ನಂತರ ಮುದ್ರಣ ಮಾಧ್ಯಮ (ಪ್ರಿಂಟ್ ಮಿಡಿಯಾ) ಅವಶ್ಯಕತೆ ಇಲ್ಲ ಅನ್ನೋ ಆಗಿಲ್ಲ. ಕಾರಣ ಮುದ್ರಣ ಮಾಧ್ಯಮ ಎಂದೆಂದಿಗೂ ವಿಶ್ವಾಸರ್ಹವಾಗಿರುತ್ತದೆ ಎಂದರು.

ಹಿರಿಯ ಪತ್ರಕರ್ತ ಶ್ರೀನಿವಾಸ ಜೋಕಟ್ಟೆ ಉಪನ್ಯಾಸ ನೀಡಿ ಮಡಿಲು ಮಿಡಿಯಾದ ಮಧ್ಯೆಯೂ ಮುಂಬಯಿಯ ಲ್ಲಿ ಕನ್ನಡ ಮತ್ತು ಕರುನಾಡನ್ನು ಬೆಳೆಸುವ ಧೋರಣೆಯ ಪತ್ರಿಕೋದ್ಯಮ ಇನ್ನೂ ಜೀವಂತವಾಗಿದೆ. ಇಂದು ಪತ್ರಕರ್ತರು ಒತ್ತಡದ ಮಾಧ್ಯದದಲ್ಲಿ ಬದುಕುತ್ತಿದ್ದು ಭಾತ್ಮಿದಾರರ ಬದುಕು ಕಷ್ಟಕರವಾಗಿದೆ ಎಂದರು.

ಕಚೇರಿ ಸದಾನಂದ್ ಮಾತನಾಡಿ ನಮಗೆ ಸಂಘ ಸಂಸ್ಥೆಗಳ ಅಗತ್ಯ ಯಾಕೆ ಬೇಕು ಎಂದರೆ ಸಂಕಷ್ಟದ ಕಾಲದಲ್ಲಿ ಇಂತಹ ಸಂಘಗಳೇ ನಮಗೆ ಆಧಾರಸ್ತಂಭವಾಗುತ್ತವೆ. 17 ವರ್ಷಗಳಿಂದ ಹೊರನಾಡ ಕರ್ಮಭೂಮಿಯ ಮಹಾರಾಷ್ಟ್ರದಲ್ಲಿ ಬಹುಕಷ್ಟದಲ್ಲಿ ಕಟ್ಟಿದ ಈ ಪತ್ರಕರ್ತರ ಸಂಘವು ಸದಸ್ಯರ ಕಷ್ಟದ ಸಮಯದಲ್ಲಿ ಆಸರೆಯಾಗಿದೆ. ಮುಂದೆಯೂ ಪತ್ರಕರ್ತಸ್ನೇಹಿ ಸಂಸ್ಥೆಯಾಗಿ ಬೆಳೆಯಲಿ ಎಂದರು.

ನಾನೋರ್ವ ಹಾಸ್ಯ ಕಲಾವಿದ ಮಾತ್ರ ಆದರೆ ನನ್ನ ಈ ಮಟ್ಟಕ್ಕೆ ಬೆಳೆಯಲು ಪತ್ರಕರ್ತರ ಸಹಯೋಗ ಅನನ್ಯವಾಗಿದೆ. ನಾನು ಯಾರಲ್ಲೂ ಮಾತನಾಡಲು ಅಂಜುವುದಿಲ್ಲ. ಆದರೂ ನನಗೆ ಈಗಲೂ ಪತ್ರಕರ್ತರೆಂದರೆ ಭಯ, ಯಾಕೆಂದರೆ ಪ್ರಪಂಚದಲ್ಲಿ ಯಾವುದಾದರೂ ನ್ಯೂನತೆ ಇದ್ದರೆ ಅದನ್ನು ಎತ್ತಿತೋರಿಸುವವರೇ ಪತ್ರಕರ್ತರು, ಪತ್ರಕರ್ತರಲ್ಲಿನ ಒಳ್ಳೆಯ ಮನಸ್ಸು ಕಲಾವಿದರನ್ನು ಬೆಳೆಸುತ್ತಿದ್ದು ಇಂತಹ ಪತ್ರಕರ್ತರ ಸೇವೆ ಸ್ತುತ್ಯರ್ಹ. ಆದರೆ ಮಾಧ್ಯಮಮಂದಿ ಸಾಮಾನ್ಯ ಜನರ ವರದಿ ಮಾಡಿ ಅವರನ್ನು ಸಮಾಜಕ್ಕೆ ಗುರುತಿಸುವ ಕೆಲಸ ಮಾಡುತ್ತಾರೆ. ನನ್ನನ್ನೂ ನಾಟಕರಂಗದಿಂದ ಚಲನಚಿತ್ರದ ವರೆಗೆ ರೂಪಿಸಿ ಪ್ರಸಿದ್ದಿಗೆ ತಂದದ್ದೇ ಪತ್ರಕರ್ತರು ಎಂದು ಅರವಿಂದ ಬೋಳಾರ್ ನುಡಿದರು.

ಪತ್ರಕರ್ತರಲ್ಲಿ ಸಾಮಾಜಿಕ ಕಳಕಳಿ ಆಗತ್ಯವಾಗಿರಬೇಕು. ಇವತ್ತಿನ ಕಾಲಘಟ್ಟದಲ್ಲಿ ವೃತ್ತಿ ಆಶ್ರಿತರಿಗೆ ಸಂಘಟನೆಯ ಆವಶ್ಯಕತೆ ಇದ್ದೇಇದೆ. ಒಂದಲ್ಲ ಒಂದು ಕಾರಣಕ್ಕೆ ಪರರನ್ನು ಹೊಂದಿಕೊಳ್ಳುವ ಅಗತ್ಯವಿದೆ ಆದ್ದರಿಂದ ಪತ್ರಕರ್ತರಾದ ನಾವೂ ಸಂಘದಲ್ಲಿ ಐಕ್ಯತೆಯನ್ನು ರೂಪಿಸಿ ಸಾಂಘಿಕರಾಗಿ ಸಾಗೋಣ. ಇಂತಹ ಮುನ್ನಡೆಗೆ ಪತ್ರಕರ್ತರಿಗೆ ವಿಶೇಷ ಉಪನ್ಯಾಸದ ಅಗತ್ಯವಿದೆ ಎಂದು ಅಧ್ಯಕ್ಷೀಯ ಭಾಷಣದಲ್ಲಿ ರೋನ್ಸ್ ಬಂಟ್ವಾಳ್ ಹೇಳಿದರು.

ಬೃಹನ್ಮುಂಬಯಿಲ್ಲಿನ ಬಿಲ್ಲವರ ಭವನ ಮತ್ತು ಗುರು ನಾರಾಯಣ ಮಂದಿರದಲ್ಲಿ ಕಳೆದ ಸುಮಾರು ಮೂರು ದಶಕಗಳಿಂದ ಗೃಹಸೇವಕರಾಗಿ ಸೇವೆ ನಿರ್ವಾಹಿಸುತ್ತಿರುವ ಕೃಷ್ಣ ಬಿ.ಬಂಗೇರ ಇವರನ್ನು ಸನ್ಮಾನಿಸಿ ಅಭಿನಂದಿಸಿದ ರು ಹಾಗೂ ಕಪಸಮ ಸಕ್ರೀಯ ಸದಸ್ಯರಾಗಿದ್ದು, ಸಾಧಕರಾದ ಚಿತ್ತಾರಿ ಹಾಸ್ಪಿಟಾಲಿಟಿ ಪ್ರೈವೇಟ್ ಲಿಮಿಟೆಡ್‌ಚಿ ನಿರ್ದೇಶಕ ಸದರಾಮ ಎನ್.ಶೆಟ್ಟಿ ಸಂಪದಮನೆ, ಡಾ| ಜಿ. ಪಿ ಕುಸುಮಾ, ಚಂದ್ರಶೇಖರ ಆರ್.ಬೆಳ್ಳಡ, ಅನಿತಾ ಪಿ.ಪೂಜಾರಿ ತಾಕೋಡೆ, ಲತಾ ಸಂತೋಷ್ ಶೆಟ್ಟಿ ಮುದ್ದುಮನೆ, ನಿತ್ಯಾನಂದ ಡಿ.ಕೋಟ್ಯಾನ್, ಸಿ.ಎ ಪೂಜಾರಿ, ಜೋನ್ ವಿಲ್ಲನ್ ಲೋಬೋ (ಸೂಕ್ತ ನ್ಯೂಸ್), ಆ ದಿನಗಳು ಖ್ಯಾತಿಯ ನಟ, ನಿರ್ಮಾಪಕ ಆರ್ಯಾನ್ ಜಗದೀಸ್ ಬೆಂಗಳೂರು ಇವರಿಗೆ ಗೌರವಿಸಿ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಕಪಸಮ ಗೌ। ಕೋಶಾಧಿಕಾರಿ ವಿಶ್ವನಾಥ್ ವಿ.ಪೂಜಾರಿ ನಿದ್ದೋಡಿ, ಜೊತೆ ಕೋಶಾಧಿಕಾರಿ ಡಾ| ದುರ್ಗಪ್ಪ ವೈ.ಕೋಟಿಯಾವರ್, ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ರಂಗ ಎಸ್.ಪೂಜಾರಿ, ಡಾ| ಜಿ.ಪಿ ಕುಸುಮಾ, ಅನಿತಾ ಪಿ.ಪೂಜಾರಿ ತಾಕೋಡೆ, ಪೀಟರ್ ಎಫ್.ಡಿಸೋಜಾ, ಶ್ಯಾಮ ಎಂ. ಹಂದೆ, ಸಲಹಾ ಸಮಿತಿ ಸದಸ್ಯರುಗಳಾದ ಸಿಎ। ಐ.ಆರ್ ಶೆಟ್ಟಿ, ಸುರೇಂದ್ರ ಎ.ಪೂಜಾರಿ, ಸಿಎ। ಜಗದೀಶ್ ಬಿ.ಶೆಟ್ಟಿ, ಲಕ್ಷ್ಮಣ್ ಸಿ.ಪೂಜಾರಿ, ಗ್ರೇಗೋರಿ ಡಿ’ಆಡಾ, ವಿಶೇಷ ಆಮಂತ್ರಿತ ಸದಸ್ಯರಾಗಿ ಡಾ| ಶಿವರಾಮ ಕೆ.ಭಂಡಾರಿ, ಹರೀಶ್ ಪೂಜಾರಿ ಕೊಕ್ಕರ್ಣೆ, ಚಂದ್ರಶೇಖರ್ ಆರ್.ಬೆಳ್ಳಡ, ಸುಧಾಕರ್ ಉಚ್ಚಿಲ್ ಸೇರಿದಂತೆ ಸದಸ್ಯರನೇಕರು ಹಾಜರಿದ್ದರು.

ಉಪಾಧ್ಯಕ್ಷ ಡಾ| ಶಿವ ಮೂಡಿಗೆರೆ ಸ್ವಾಗತಿಸಿ ಪ್ರಸ್ತಾವಿಕ ನುಡಿಗಳನ್ನಾಡಿದರು. ಜೊತೆ ಕಾರ್ಯದರ್ಶಿ ಸವಿತಾ ಸುರೇಶ್ ಶೆಟ್ಟಿ ಮತ್ತು ಗೋಪಾಲ್ ತ್ರಾಸಿ ಅತಿಥಿಗಳು ಮತ್ತು ಪ್ರಶಸ್ತಿ ಪುರಸ್ಕೃತರನ್ನು ಪರಿಚಯಿಸಿ ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಗೌ। ಪ್ರ| ಕಾರ್ಯದರ್ಶಿ ಸಾ.ದಯಾ ವಂದಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಕೊನೆಗೊಂಡಿತು.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಪಿ.ಎ.ಇಂಜಿನಿಯರಿಂಗ್ ಕಾಲೇಜು: ಬಿ.ಇ.(ಹಾನರ್ಸ್) ಪದವೀಧರರಿಗೆ ಅಭಿನಂದನಾ ಸಮಾರಂಭ

ಕೊಣಾಜೆ: ಪದವಿ, ಶಿಕ್ಷಣದೊಂದಿಗೆ ನಾವು ಪಡೆದುಕೊಳ್ಳುವ ಕೌಶಲಗಳು ನಮ್ಮ ಬದುಕಿಗೆ ಸ್ಪೂರ್ತಿಯಾಗುತ್ತವೆ....

ಮಂಗಳೂರು ವಿವಿ 46 ನೇ ಸಂಸ್ಥಾಪನಾ ದಿನಾಚರಣೆ

ಕೋಣಾಜೆ: ಪ್ರಸ್ತುತ ಕಾಲಘಟ್ಟದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವು ಸ್ವಲ್ಪ ಆತಂಕದ ಸ್ಥಿತಿಯನ್ನು ಎದುರಿಸಿದರೂ...

ಪ್ರಾಥಮಿಕ ಆರೋಗ್ಯ ಕೇಂದ್ರ ಮಂಚಿ ವತಿಯಿಂದ ಆರೋಗ್ಯ ಸುರಕ್ಷಾಧಿಕಾರಿ ಹರಿಣಾಕ್ಷಿ ಅವರಿಗೆ ಬಿಳ್ಕೊಡುಗೆ

ಬಂಟ್ವಾಳ: ಪ್ರಾಥಮಿಕ ಆರೋಗ್ಯ ಕೇಂದ್ರ ಮಂಚಿ ವತಿಯಿಂದ ಆರೋಗ್ಯ ಸುರಕ್ಷಾಧಿಕಾರಿ ಹರಿಣಾಕ್ಷಿ...

ಸೆ. 14 ರಂದು ಸುರಿಬೈಲ್ ಮದರಸ ವಿದ್ಯಾರ್ಥಿಗಳ ಮೀಲಾದ್ ಫೆಸ್ಟ್

ಕಲ್ಲಡ್ಕ: ಬದ್ರಿಯಾ ಜುಮ್ಮಾ ಮಸೀದಿ ಸುರಿಬೈಲ್ ಇದರ ಅಧೀನದಲ್ಲಿರುವ ನುಸ್ರತುಲ್ ಉಲೂಂ...