
ಮಂಗಳೂರು: ಪ್ರೀತಿಸಿ ದೈಹಿಕ ಸಂಪರ್ಕ ಬೆಳೆಸಿ ಗರ್ಭಿಣಿ ಆಗಿ ಪ್ರಸವವಾದ ನಂತರ ಮದುವೆ ಯಾಗಲು ನಿರಾಕರಿಸಿದ ಹಲವು ಗೊಂದಲಕ್ಕೆ ಸಾಕ್ಷಿಯಾಗಿದ್ದ ಪುತ್ತೂರಿನ ಪ್ರಕರಣದಲ್ಲಿ ಡಿಎನ್ಎ ವರದಿ ಆರೋಪಿತನಾಗಿರುವ ಜೆ.ಕೃಷ್ಣರಾವ್ ನದೇ ಎಂದು ದೃಡಪಟ್ಟಿರುವುದರಿಂದ ಬಿಜೆಪಿ ಆರ್ ಎಸ್ ಎಸ್ ನಾಯಕರು ತಮ್ಮ ನಾಯಕನ ಪುತ್ರನಿಂದಾದ ತಪ್ಪಿಗೆ ನ್ಯಾಯ ಒದಗಿಸಲು ಮುಂದಡಿ ಇಡಬೇಕೆಂದು ಎಂದು ವಿಮೆನ್ ಇಂಡಿಯಾ ಮೂವ್ಮೆಂಟ್ ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷೆ ಶಿನೀರ ರವರು ತಿಳಿಸಿದ್ದಾರೆ.ಬಿಜೆಪಿ ಮುಖಂಡ ಹಾಗೂ ನಗರ ಪಂಚಾಯತ್ ಸದಸ್ಯ ಜಗಶ್ರೀನಿವಾಸ್ ನ ಪುತ್ರ ಎಬಿವಿಪಿ ಕಾರ್ಯಕರ್ತ ಆರೋಪಿತ ವ್ಯಕ್ತಿ ಜೆ. ಕೃಷ್ಣರಾವ್ ಮಗು ತನ್ನದಲ್ಲ ಎಂದು ವಾದಿಸುತ್ತಿದ್ದ,ಆದರೆ ಡಿ.ಎನ್.ಎ ವರದಿಯಿಂದ ಸತ್ಯ ಬಹಿರಂಗವಾಗಿದೆ.ಹಾಗಾಗಿ ಇನ್ನು ತಡಮಾಡದೆ ಕೂಡಲೇ ಸಂತ್ರಸ್ತೆಯನ್ನು ಮದುವೆ ಆಗುವುದೆ ನ್ಯಾಯವಾಗಿರುವುದರಿಂದ ಆ ನಿಟ್ಟಿನಲ್ಲಿ ಮುಂದಿನ ನಡೆ ಸಾಗಬೇಕು ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆಮಹಿಳೆಯರ ನ್ಯಾಯ ದ ಪರ ಎಂದು ವಾದಿಸುವ ಆರ್ಎಸ್ಎಸ್ ಬಿಜೆಪಿ ನಾಯಕರು ಈಗ ಯಾವ ರೀತಿ ನ್ಯಾಯ ಒದಗಿಸುತ್ತಾರೆ ಎಂದು ಕಾದು ನೋಡಬೇಕಾಗಿದೆ ಎಂದು ತಿಳಿಸಿದ್ದಾರೆ.


