ಭಗವಂತನ ಪ್ರೀತಿಪಾತ್ರರಿಗೆ ಮಾತ್ರ ಭೂಮಿಯಲ್ಲಿ ಬಡವರ ಸೇವೆಯ ಭಾಗ್ಯ ಸಿಗುತ್ತದೆ: ವಾಲೆಮಂಡೋವು ಉಸ್ತಾದ್

Date:

ವಿಟ್ಲ.ಭೂಮಿಯಲ್ಲಿ ವಾಸವಾಗಿರುವ ಜನರಿಗೆ ನಿಷ್ಕಳಂಕ ಕಾರುಣ್ಯ ಸೇವೆಗಳು ಮಾಡುವವರು ಭಾಗ್ಯವಂತರು‌ ಅವರು ಸರ್ವಶಕ್ತನಾದ
ಭಗವಂತನ ಪ್ರೀತಿಗೆ ಪಾತ್ರರು,ಅವರಿಂದ ಮಾತ್ರ ಇಂತಹ ಸೇವೆಗಳನ್ನು ನಿರೀಕ್ಷಿಸಲು ಸಾಧ್ಯ ಎಂದು ಖ್ಯಾತ ಆಧ್ಯಾತ್ಮಿಕ ಗುರು ಮಹಮೂದುಲ್ ಫೈಝಿ
ವಾಲೆ ಮುಂಡೇವು ಉಸ್ತಾದ್ ನುಡಿದರು
ಅವರು ವಿಟ್ಲ ಸ್ಪೈಸಿ ಹೋಟೆಲ್ ನಲ್ಲಿ ನಡೆದ ಅಸಹಾಯಕರ ಆಸರೆ
ಖಿದ್ಮತ್ ಫೌಂಡೇಶನ್ ವಿಟ್ಲ ಇದರ ಐದನೇ ವಾರ್ಷಿಕ ಸಂಗಮದಲ್ಲಿ ದುವಾ ಆಶೀರ್ವಚನ ನೀಡಿ ಮಾತನಾಡಿದರು.
ಕಾರುಣ್ಯ ಸೇವೆಯ ಸಂದರ್ಭದಲ್ಲಿ ಸಂತ್ರಸ್ತರು ಅಸಹಾಯಕರಾಗಿದ್ದರೂ ಅವರಲ್ಲಿ ಸ್ವಾಭಿಮಾನ ಎಂಬುದು ಇರುತ್ತದೆ , ಅದಕ್ಕೆ ಚ್ಯುತಿ ಬರದ ರೀತಿಯಲ್ಲಿ ನೀಡುವ ಸೇವೆ ಶ್ರೇಷ್ಠವಾದದ್ದು , ಈ ನಿಟ್ಟಿನಲ್ಲಿ ಅವರ ಗೌರವ ಹಾಗೂ ಗೌಪ್ಯತೆ ಕಾಪಾಡಿಕೊಂಡು ಬಂದ ವಿಟ್ಲ ಖಿದ್ಮತ್ ಫೌಂಡೇಶನ್ ಸೇವೆ ಎಲ್ಲರಿಗೂ ಮಾದರಿ ಎಂದು ಮುಖ್ಯ ಅತಿಥಿಯಾಗಿ ಆಗಮಿಸಿದ ದ.ಕ ಜಿಲ್ಲಾಪಂಚಾಯತ್ ಮಾಜಿ ಉಪಾಧ್ಯಕ್ಷ ಎಂ ಎಸ್ ಮಹಮ್ಮದ್ ನುಡಿದರು.
ಚಾರಿಟಿ ವತಿಯಿಂದ
ಮಾರಕ ರೋಗಕ್ಕೆ ತುತ್ತಾದ
ಬಡ ಕುಟುಂಬಗಳ ಚಿಕಿತ್ಸೆಗೆ ಸಹಾಯ ,
ಮಾಸಿಕ ಸಹಾಯ ಧನ, ವಿಧವಾ ಸಹಾಯಧನ , ಮಾಸಿಕ ರೇಶನ್ ಕಿಟ್ ವಿತರಣೆ ,ಮನೆ ದುರಸ್ತಿ, ರೋಗಿಗಳಿಗೆ ವೀಲ್ ಚಯರ್, ವಾಟರ್ ಬೆಡ್ ,ಆಕ್ಸಿಜನ್ ಕಿಟ್ ವಿತರಣೆ , ರಂಜಾನ್ ಕಿಟ್, ತುರ್ತು ಆಪರೇಷನ್ ಗೆ ಸಹಾಯ ಮೊದಲಾದ ಸೇವೆಗಳು ನಿರಂತರವಾಗಿ ಐದು ವರ್ಷಗಳಿಂದ ನಡೆಯುತ್ತಿದೆ,
ಎಂದು ಚಾರಿಟಿಯ ಅಧ್ಯಕ್ಷ ಹಾಜಿ ಅಬ್ದುಲ್ ಹಮೀದ್ ಕೊಡಂಗಾಯಿ ಸಭೆಯ ಅಧ್ಯಕ್ಷತೆ ವಹಿಸಿ ವಿವರ ನೀಡಿದರು. ವಾರ್ಷಿಕ ವರದಿ ಲೆಕ್ಕಪತ್ರ ಕಾರ್ಯದರ್ಶಿ ಸಭೆಗೆ ಮಂಡಿಸಿ ಸಭೆ ಅನುಮೋದಿಸಿತು.
ಪೆರುವಾಯಿ ಜುಮಾ ಮಸೀದಿಯ ಖತೀಬ್ ಮುಹಮ್ಮದ್ ಷರೀಫ್ ಮದನಿ ಕಾರ್ಯಕ್ರಮ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಅವರ
30 ವರ್ಷಗಳ ಧಾರ್ಮಿಕ ರಂಗದ ಸೇವೆಯನ್ನು ಗುರುತಿಸಿ ವಿದ್ಯಾಭ್ಯಾಸ ಬೋರ್ಡ್ ನೀಡುವ ಮುಅಲ್ಲಿಂ ಅವಾರ್ಡ್ ಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ಅವರನ್ನು ಸಮಿತಿ ವತಿಯಿಂದ ಗೌರವಿಸಲಾಯಿತು.
ಚಾರಿಟಿ ಉಪಾಧ್ಯಕ್ಷ ಕಾಸಿಂ ಸಖಾಫಿ ಅಳಕೆ ಮಜಲು ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಅಬ್ದುಲ್ ರಶೀದ್ ಮೈ ರ ಹಮೀದ್ ಹಾಜಿ ಸೇರಾಜೆ, ಮಜೀದ್ ಕನ್ಯಾನ ಎನ್ ಕೆ ಮೂಸ ಒಕ್ಕೆತ್ತೋರು ರಝಾಕ್ ಫುರ್ಕಾನಿ , ಅಬ್ಬಾಸ್ ಮದನಿ ಹಸೈನಾರ್ ನೆಲ್ಲಿಗುಡ್ಡೆ ,ಪತ್ರಕರ್ತ ಮಹಮ್ಮದ್ ಅಲಿ ವಿಟ್ಲ
ಮಜೀದ್ ಕನ್ಯಾನ ಯು ಟಿ ಅಲಿ ಪರಿಯಲ್ತಡ್ಕ ಸಿದ್ದಿಕ್ ಪೆರುವಾಯಿ ಅಬ್ಬಾಸ್ ದಾಸರಬೆಟ್ಟು ಶರೀಫ್ ಫಿಶ್ ಹಾಜಿ ಇಸ್ಮಾಯಿಲ್ ಶಾಫಿ ವಿಟ್ಲ ಡಿ ಕೆ ಅಬ್ದುಲ್ ಖಾದರ್ ಶಾಕಿರ್ ಅಳಕೆ ಮಜಲು ಹಮೀದ್ ಹಾಜಿ ಕಾನತಡ್ಕ ರಹೀಂ ಹಾಜಿ ಬೈರಿಕಟ್ಟೆ ಹಮೀದ್ ಚಂದಳಿಕೆ ಮೊದಲಾದವರು ಅತಿಥಿಯಾಗಿ ಭಾಗವಹಿಸಿದರು.
ಪ್ರಧಾನ ಕಾರ್ಯದರ್ಶಿ ಸಲೀಂ ಹಾಜಿ ಸ್ವಾಗತಿಸಿ ಇಬ್ರಾಹಿಂ ಪುರ್ಕಾನಿ ವಂದಿಸಿದರು.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಲೂಡೊ ಬೋರ್ಡ್ ಶಂಕು ಆಕಾರದ ಪ್ಲಾಸ್ಟಿಕ್ ಕಾಯ್ನ್ ನುಂಗಿದ ಎಂಟರ ಬಾಲಕಿ ಉಸಿರುಗಟ್ಟಿ ಸಾವು.

ತೊಕ್ಕೊಟ್ಟು ಸಮೀಪದ ಕೊಲ್ಯದಲ್ಲಿ ದಾರುಣ ಘಟನೆ. ಉಳ್ಳಾಲ:ಫೆ-21:ಸಹೋದರ ಸಹೋದರಿಯೊಂದಿಗೆ ಮನೆಯಲ್ಲಿ ಲೂಡ ಆಟದಲ್ಲಿ...

ಹಿರಿಯ ಪತ್ರಕರ್ತ ಸುಂದರ ಕಬಕ ನಿಧನ

ಮಂಗಳೂರು; ಕಬಕ ನಿವಾಸಿ ಹಲವು ರಾಜ್ಯ ಮಟ್ಟದ ಟೀವಿ ಚಾನಲುಗಳಲ್ಲಿ ಕಾರ್ಯ...

ಬಸ್ ದುರಂತದಲ್ಲಿ ಮೃತಪಟ್ಟ ಅಟೋ ಚಾಲಕನ ಕುಟುಂಬಕ್ಕೆ ನೆರವು

ಉಳ್ಳಾಲ: ಇತ್ತೀಚೆಗೆ ತಲಪಾಡಿ ಯಲ್ಲಿ ನಡೆದ ಬಸ್ ದುರಂತದಲ್ಲಿ ಮೃತಪಟ್ಟ ದ.ಕ....

ವಿದ್ಯಾರ್ಥಿಗಳಿಂದ ಬಸ್ ನಿರ್ವಾಹಕನ ಮೇಲೆ ಹಲ್ಲೆಗೆ ಖಂಡನೆ

ಉಳ್ಳಾಲ: ಫೆ.19ರಂದು ಗುರುವಾರ ಬೆಳಿಗ್ಗೆ ಬಿಸಿ ರೋಡ್‌ನಿಂದ ವಯಾ ಮಂಚಿ–ಮುಡಿಪು ಕಡೆ...