ಚಿಕ್ಕಮಗಳೂರು: ಜಿಲ್ಲೆಯ ಗೌರವಾನ್ವಿತ ಸಾಹಿತಿ ಡಾ. ರಹಮತ್ ತರೀಕೆರೆ 2025ನೇ ಸಾಲಿನ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಸಾಹಿತ್ಯ ಕ್ಷೇತ್ರದ ರಾಜ್ಯೋತ್ಸವ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಬೀರೂರಿನಲ್ಲಿ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಾಗೂ ಕಡೂರು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಅವರು ನೀಡಿದ ನಾಯಕತ್ವ, ಕನ್ನಡ ಭಾಷೆ ಮತ್ತು ಸಾಹಿತ್ಯದ ಸೇವೆಗೆ ಅವರ ಅಸಾಮಾನ್ಯ ಕೊಡುಗೆ ಎಂದಿಗೂ ಸ್ಮರಣೀಯ.
ಎಸ್ಡಿಪಿಐ ಅಭಿನಂದನೆ ಸಲ್ಲಿಕೆ
ಈ ಪ್ರಶಸ್ತಿ ನಮ್ಮ ಜಿಲ್ಲೆಯ ಸಾಂಸ್ಕೃತಿಕ ಗರಿಯನ್ನು ಮತ್ತಷ್ಟು ಎತ್ತಿದೆ ಎಂದು ಮುಸ್ತಫ ಆಲ್ದೂರು ಜಿಲ್ಲಾಧ್ಯಕ್ಷರು, SDPI ಚಿಕ್ಕಮಗಳೂರು ಇವರು ಅಭಿನಂದನೆ ಸಲ್ಲಿಸಿದ್ದಾರೆ.


