ಉಳ್ಳಾಲ:(ಡಿ-18) ಕೊಲ್ಯ ಮತ್ತು ಕೋಟೆಕಾರಿನ ಬೀರಿ ಜಂಕ್ಷನ್ ನಲ್ಲಿ ಖಾಯಂ ಸಂಚಾರಿ ಪೊಲೀಸರನ್ನ ಗಸ್ತು ನೇಮಿಸುವಂತೆ ಕೋಟೆಕಾರು ಪಟ್ಟಣ ಪಂಚಾಯತ್,ಸೋಮೇಶ್ವರ ಪುರಸಭೆಯ ಚುನಾಯಿತ ಜನಪ್ರತಿನಿಧಿಗಳು ಮತ್ತು ಸಂಘ ಸಂಸ್ಥೆಗಳ ಮುಖ್ಯಸ್ಥರ ನಿಯೋಗವೊಂದು ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಸುಧೀರ್ ಕುಮಾರ್ ರೆಡ್ಡಿಯವರನ್ನ ಭೇಟಿ ಮಾಡಿ ಮನವಿ ಸಲ್ಲಿಸಿತು.

ಇತ್ತೀಚಿನ ದಿನಗಳಲ್ಲಿ ಬೀರಿ ಮತ್ತು ಕೊಲ್ಯ ಜಂಕ್ಷನ್ ನಲ್ಲಿ ವಾಹನದಟ್ಟಣೆ ಹೆಚ್ಚಾಗಿದ್ದು, ಅಪಘಾತ ಪ್ರಕರಣಗಳು ಹೆಚ್ಚುತ್ತಿದೆ.ಬೀರಿ ಪ್ರದೇಶದಲ್ಲಿ ಶಾಲಾ ಕಾಲೇಜುಗಳು,ವಾಣಿಜ್ಯ ಸಂಕೀರ್ಣ, ವ್ಯಾಪಾರ ಮಳಿಗೆಗಳು, ಬ್ಯಾಂಕ್ ಗಳು ಸೇರಿದಂತೆ ಧಾರ್ಮಿಕ ಕೇಂದ್ರಗಳು ಇದ್ದು, ಜನ ಸಾಮಾನ್ಯರಿಗೆ ಇಲ್ಲಿ ಹೆದ್ದಾರಿ ದಾಟುವುದೇ ಕಷ್ಟಕರವಾಗಿದೆ.ಹಾಗಾಗಿ ಕೊಲ್ಯ ಮತ್ತು ಬೀರಿ ಜಂಕ್ಷನ್ ಗಳಲ್ಲಿ ಖಾಯಂ ಆಗಿ ಸಂಚಾರಿ ಪೊಲೀಸರನ್ನ ಗಸ್ತು ನೇಮಿಸಿದಲ್ಲಿ ಸಾರ್ವಜನಿಕರಿಗೆ ಸಹಕಾರಿಯಾಗಬಹುದೆಂದು ಸೋಮೇಶ್ವರ ಪುರಸಭೆ ಮತ್ತು ಕೋಟೆಕಾರ್ ಪಟ್ಟಣ ಪಂಚಾಯತ್ ವ್ಯಾಪ್ತಿಯ 13ಕ್ಕೂ ಅಧಿಕ ಸಂಘ ಸಂಸ್ಥೆಗಳ 350 ಕ್ಕೂ ಹೆಚ್ಚು ಸದಸ್ಯರ ಸಹಿಗಳುಲ್ಲ ಮನವಿಯನ್ನು ನಗರ ಪೊಲೀಸ್ ಆಯುಕ್ತರಿಗೆ ಸಲ್ಲಿಸಲಾಯಿತು.
ಈ ಸಂಧರ್ಭ ಸೋಮೇಶ್ವರ ಪುರಸಭೆಯ ಉಪಾಧ್ಯಕ್ಷರಾದ ರವಿಶಂಕರ್ ಸೋಮೇಶ್ವರ,ಕೋಟೆಕಾರ್ ಪಟ್ಟಣ ಪಂಚಾಯತ್ ಉಪಾಧ್ಯಕ್ಷರಾದ ಪ್ರವೀಣ್ ಐ.ಬಗಂಬಿಲ,ಬೀರಿ ಶ್ರೀ ಗಣೇಶ ಭಜನಾ ಮಂದಿರದ ಗೌರವಾಧ್ಯಕ್ಷರಾದ ನಾರಾಯಣ ಕುಂಪಲ,ಕಾರ್ಯದರ್ಶಿ ಆಶಿಕ್ ಗೋಪಾಲಕೃಷ್ಣ,ಸದಸ್ಯರಾದ ಅಶೋಕ್ ಉಚ್ಚಿಲ್,ಲತೀಶ್ ಉಚ್ಚಿಲ್,ಮಿತೇಶ್ ಮಾಡೂರು,ಹರ್ಷಿತ್ ಸೋಮೇಶ್ವರ,ಮಾಜಿ ಯೋಧರಾದ ಸುಧಾಕರ ಕುಂಪಲ ಮತ್ತು ಜಿ.ಎಸ್.ಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು.


