ಉಮ್ಮೀದ್ ಪೋರ್ಟಲ್ ಸಮಸ್ಯೆ ಬಗೆಹರಿಸಲು ಕೇಂದ್ರ ಸಚಿವರಿಗೆ ಮನವಿ

Date:

ದೆಹಲಿ: ಅಖಿಲ ಭಾರತ ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್‌ನ (AIMPLB) ಉನ್ನತ ಮಟ್ಟದ ನಿಯೋಗವು ಕೇಂದ್ರ ಅಲ್ಪಸಂಖ್ಯಾತ ಸಚಿವ ಕಿರಣ್ ರಿಜಿಜು ಅವರನ್ನು ಭೇಟಿಯಾಗಿ, ವಕ್ಫ್ ಆಸ್ತಿಗಳನ್ನು ಉಮೀದ್ ಪೋರ್ಟಲ್‌ಗೆ ಅಪ್‌ಲೋಡ್ ಮಾಡುವಲ್ಲಿ ಎದುರಾಗುತ್ತಿರುವ ಸಮಸ್ಯೆಗಳ ಕುರಿತು ಚರ್ಚಿಸಿದರು.

ತಾಂತ್ರಿಕ ದೋಷಗಳು ಹಾಗೂ ಅತ್ಯಂತ ಕಡಿಮೆ ಸಮಯದ ಗಡುವನ್ನುವನ್ನು ಕೊಟ್ಟಿರುವುದರಿಂದ ಬಹಳಷ್ಟು ಆಸ್ತಿಗಳು ಅಪ್ಲೋಡ್ ಮಾಡಲು ಬಾಕಿ ಇದ್ದು ಮುಂದಿನ ಒಂದು ವರ್ಷದವರೆಗೆ ದಿನಾಂಕವನ್ನು ವಿಸ್ತರಿಸಲು ಆಗ್ರಹಿಸಲಾಯಿತು. ಈ ವಿಷಯವಾಗಿ ಕೇಂದ್ರ ಸಚಿವರು ಸಕಾರಾತ್ಮಕವಾಗಿ ಮತ್ತು ಶೀಘ್ರವಾಗಿ ಪರಿಹರಿಸುವ ಭರವಸೆಯನ್ನು ನೀಡಿದರು.

ಈ ನಿಯೋಗದಲ್ಲಿ AIMPLB ಉಪಾಧ್ಯಕ್ಷ ಸೈಯದ್ ಸಾದತುಲ್ಲಾ ಹುಸೈನಿ, ಪ್ರಧಾನ ಕಾರ್ಯದರ್ಶಿ ಮೌಲಾನಾ ಮಹಮ್ಮದ್ ಫಝಲುರ್ ರಹೀಂ ಮುಜದ್ದಿದಿ, ಸಂಸದ ಬ್ಯಾರಿಸ್ಟರ್ ಅಸದುದ್ದೀನ್ ಒವೈಸಿ, ಸಂಸದ ರುಹುಲ್ಲಾ ಮೆಹದಿ, ರಾಜ್ಯಸಭಾ ಸದಸ್ಯ ಮಹಮ್ಮದ್ ಜಾವೇದ್, ಮೊಹಮ್ಮದ್ ಅದೀಬ್, ಮೌಲಾನಾ ಮಹಮ್ಮದ್ ಹಕೀಮುದ್ದೀನ್ ಕಾಸ್ಮಿ, ಮುಫ್ತಿ ಅಬ್ದುಲ್ ರಜಾಕ್, ವಕೀಲರಾದ ಫಝೀಲ್ ಅಹ್ಮದ್ ಅಯೂಬಿ, ವಕೀಲರಾದ ಹಕೀಮ್ ಮೊಹಮ್ಮದ್ ತಾಹಿರ್ ಹಾಗೂ ಅಡ್ವೊಕೇಟ್ ನಬೀಲಾ ಜಮೀಲ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಲೂಡೊ ಬೋರ್ಡ್ ಶಂಕು ಆಕಾರದ ಪ್ಲಾಸ್ಟಿಕ್ ಕಾಯ್ನ್ ನುಂಗಿದ ಎಂಟರ ಬಾಲಕಿ ಉಸಿರುಗಟ್ಟಿ ಸಾವು.

ತೊಕ್ಕೊಟ್ಟು ಸಮೀಪದ ಕೊಲ್ಯದಲ್ಲಿ ದಾರುಣ ಘಟನೆ. ಉಳ್ಳಾಲ:ಫೆ-21:ಸಹೋದರ ಸಹೋದರಿಯೊಂದಿಗೆ ಮನೆಯಲ್ಲಿ ಲೂಡ ಆಟದಲ್ಲಿ...

ಹಿರಿಯ ಪತ್ರಕರ್ತ ಸುಂದರ ಕಬಕ ನಿಧನ

ಮಂಗಳೂರು; ಕಬಕ ನಿವಾಸಿ ಹಲವು ರಾಜ್ಯ ಮಟ್ಟದ ಟೀವಿ ಚಾನಲುಗಳಲ್ಲಿ ಕಾರ್ಯ...

ಬಸ್ ದುರಂತದಲ್ಲಿ ಮೃತಪಟ್ಟ ಅಟೋ ಚಾಲಕನ ಕುಟುಂಬಕ್ಕೆ ನೆರವು

ಉಳ್ಳಾಲ: ಇತ್ತೀಚೆಗೆ ತಲಪಾಡಿ ಯಲ್ಲಿ ನಡೆದ ಬಸ್ ದುರಂತದಲ್ಲಿ ಮೃತಪಟ್ಟ ದ.ಕ....

ವಿದ್ಯಾರ್ಥಿಗಳಿಂದ ಬಸ್ ನಿರ್ವಾಹಕನ ಮೇಲೆ ಹಲ್ಲೆಗೆ ಖಂಡನೆ

ಉಳ್ಳಾಲ: ಫೆ.19ರಂದು ಗುರುವಾರ ಬೆಳಿಗ್ಗೆ ಬಿಸಿ ರೋಡ್‌ನಿಂದ ವಯಾ ಮಂಚಿ–ಮುಡಿಪು ಕಡೆ...