
ಮುಂಬಯಿ, ಅ.02:ಮಹಾರಾಷ್ಟ್ರ ಸರ್ಕಾರರಂಗಭೂಮಿ ಪ್ರದರ್ಶನ ಪರಿಶೀಲನಾ ಮಂಡಳಿ ಮುಂಬಯಿ ಇದರ ಸೆನ್ಸಾರ್ ಮಂಡಳಿಗೆ ಪತ್ರಕರ್ತ ರೋನ್ಸ್ ಬಂಟ್ವಾಳ್ ಪುನರ್ ನೇಮಕಗೊಳಿಸಿಸರ್ಕಾರದ ಪರ್ಯಟನ ಮತ್ತು ಸಾಂಸ್ಕೃತಿಕ ವ್ಯವಹಾರ ಇಲಾಖೆ01.10.2025 ರಂದು ಕಚೇರಿ ಆದೇಶ ಹೊರಡಿಸಿದೆ.ಸರ್ಕಾರದ ನಿರ್ಣಯ ಕ್ರಮಾಂಕದಂತೆ ಮರಾಠಿ ಹಾಗೂ ಹಿಂದಿ ಭಾಷೆಗಳ ಸಹಿತ ರಾಜ್ಯದ ಹೊರಗಿನ ರಾಷ್ಟ್ರದ ಇತರೆ ಭಾಷೆಗಳ ಮನರಂಜನಾ ಪ್ರದರ್ಶನಗಳಿಗಾಗಿ ಸಲ್ಲಿಸಲಾದ ಪಠ್ಯಗಳ ಪರಿಶೀಲನೆಗಾಗಿ ಮತ್ತೆ ತುಳು/ಕನ್ನಡ ಭಾಷಾ ಕ್ಷೇತ್ರಕ್ಕೆ ರಂಗ ಎಸ್.ಪೂಜಾರಿ ಹಾಗೂ ಕನ್ನಡ / ತುಳು / ಕೊಂಕಣಿ ಭಾಷೆಗೆ ಶ್ರೀ ರೋನ್ಸ್ ಬಂಟ್ವಾಳ್ ಇವರನ್ನುನೇಮಿಸಿ ಆದೇಶ ಹೊರಡಿಸಿದೆ.ಅಲ್ಲದೆ, ಇತರ ಭಾಷೆಗಳಾದಬಂಗಾಳಿ, ಇಂಗ್ಲಿಷ್, ಪಂಜಾಬಿ, ಹಿಂದಿ, ಗುಜರಾತಿ, ಸಂಸ್ಕೃತ, ತೆಲುಗು, ತಮಿಳು, ಮಾಲ್ವಾಣಿ, ರಾಜಸ್ಥಾನಿ, ಮಲಯಾಳಂ, ಉರ್ದು, ಸಿಂಧಿ ಈ ಉಲ್ಲೇಖಿಸಿರುವ ಭಾಷೆಗಳಿಗೆ ದಿನಾಂಕ 2026ರ ಸೆಪ್ಟೆಂಬರ್ 30ರ ವರೆಗೆ ವಿವಿಧ ಗಣ್ಯರನ್ನು ನೇಮಿಸಿದೆ.ಗೌರವಾನ್ವಿತ ಸದಸ್ಯರಿಗೆ ಹೀಗಿನಂತೆ ತಿದ್ದುಪಡಿ ಮಾಡಿದ ಮಾನದಂಡಗಳ ಪ್ರಕಾರ ಗೌರವಧನವನ್ನು ಪಾವತಿಸಲಾಗುವುದುಸರ್ಕಾರ ನಿಯಮಾಂಕ ಎಸ್ ಪಿಬಿ-2004/ಪಿಕೆ151/ಎಸ್ ಜೆ1 ದಿನಾಂಕ 16/08/2004 ಪ್ರಕಾರ ಈ ಮಾನದಂಡಗಳು ಜಾರಿಗೆ ಬರುತ್ತವೆ ಎಂದುರಂಗಭೂಮಿ ಪ್ರದರ್ಶನ ಪರಿಶೀಲನಾ ಮಂಡಳಿಯಕಾರ್ಯದರ್ಶಿ ಎಸ್.ಪಿ ಖಾಮ್ಕರ್ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.ಈ ಸಂಬಂಧಿ ಅಧಿಕೃತ ಪ್ರತಿಗಳಷ್ಟು ಸಂಬಂಧಿತ ಎಲ್ಲಾ ಗೌರವಾನ್ವಿತ ನೇಮಕಾತಿಧಾರರಿಗೆ, ಸರ್ಕಾರದ ಹಿರಿಯ ಲಿಪಿಕ (ಲೆಕ್ಕ ಶಾಖೆ), ರಂಗಭೂಮಿ ಪ್ರದರ್ಶನ ಪರಿಶೀಲನಾ ಮಂಡಳಿ ಮುಂಬಯಿ ಅಧಿಕಾರಿಗಳಿಗೆ ರವಾನಿಸಲಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.


