ಬಂಟ್ವಾಳ: ಸಜಿಪಮೂಡ ಗ್ರಾಮ ಪಂಚಾಯತ್ನಲ್ಲಿ 2023–24 ಹಾಗೂ 2024–25ನೇ ಸಾಲಿನ ನೀರಿನ ಬಿಲ್ ವಸೂಲಾತಿ ಕಾರ್ಯದಲ್ಲಿ ಗಂಭೀರ ಅಕ್ರಮ ನಡೆದಿರುವುದಾಗಿ ಸ್ಥಳೀಯ ಮೂಲಗಳಿಂದ ಮಾಹಿತಿ ಲಭಿಸಿದೆ.
ಗ್ರಾಮ ಪಂಚಾಯತ್ನ ಸಿಬ್ಬಂದಿ ಲಾವನ್ಯಾ ಅವರು ಸಾರ್ವಜನಿಕರಿಂದ ನೀರಿನ ಬಿಲ್ ಹಣವನ್ನು ಸಂಗ್ರಹಿಸಿ, ರಶೀದಿ ನೀಡದೆ ಅದರ ಸಂಪೂರ್ಣ ಮೊತ್ತವನ್ನು ಪಂಚಾಯತ್ ಖಾತೆಗೆ ಜಮಾ ಮಾಡದೇ, ಸುಮಾರು 9 ಲಕ್ಷ ರೂಪಾಯಿಗಿಂತ ಹೆಚ್ಚಿನ ಮೊತ್ತವನ್ನು ಅನಿಯಮಿತವಾಗಿ ಬಳಸಿರುವುದಾಗಿ ಆರೋಪಗಳು ಕೇಳಿ ಬರುತ್ತಿವೆ.ಈ ವಿಷಯದಲ್ಲಿ ಕೆಲವು ಪಂಚಾಯತ್ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಸಹಭಾಗಿತ್ವವೂ ಇದ್ದಿರಬಹುದೆಂಬ ಅನುಮಾನ ವ್ಯಕ್ತವಾಗಿದೆ.ಸಾರ್ವಜನಿಕರ ಹಣದ ದುರುಪಯೋಗದ ಈ ಆರೋಪದ ಹಿನ್ನೆಲೆಯಲ್ಲಿ, ಸಂಪೂರ್ಣ ಸ್ವತಂತ್ರ ಹಾಗೂ ಪಾರದರ್ಶಕ ತನಿಖೆ ನಡೆಸಿ, ಸತ್ಯಾವಸ್ಥೆ ಬಹಿರಂಗಪಡಿಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂಬುದು ಸ್ಥಳೀಯ ನಾಗರಿಕರ ಆಗ್ರಹವಾಗಿದೆ.



