
ಕೊಣಾಜೆ: ಮಂಗಳೂರು ವಿಶ್ವವಿದ್ಯಾನಿಲಯದ ದತ್ತು ಶಾಲೆಯಾಗಿರುವ ಮಂಜನಾಡಿ ಉರುಮನೆಯ ದ.ಕ. ಜಿಲ್ಲಾ ಪಂಚಾಯತ್ ಸರಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ವಿತರಣಾ ಕಾರ್ಯಕ್ರಮ ಬುಧವಾರ ನಡೆಯಿತು.
ಮಂಗಳೂರು ವಿಶ್ವವಿದ್ಯಾನಿಲಯದ ನೆಹರು ಚಿಂತನ ಕೇಂದ್ರದ ವತಿಯಿಂದ ಆಯೋಜಿಸಿದ ಕಾರ್ಯಕ್ರಮದಲ್ಲಿ ಮಂಗಳೂರು ವಿವಿ ಪ್ರಾಧ್ಯಾಪಕರಾದ ಪ್ರೊ. ದಯಾನಂದ ನಾಯ್ಕ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ವಿದ್ಯಾರ್ಥಿಗಳ ಬೆಳವಣಿಗೆಯಲ್ಲಿ ಶಿಕ್ಷಕರು ಹಾಗೂ ಪೋಷಕರ ಪಾತ್ರ ಅಗತ್ಯವಾಗಿದೆ. ಮಕ್ಕಳು ಇಂದಿನ ಆಧುನಿಕ ಯುಗದಲ್ಲಿ ಹಾದಿ ತಪ್ಪದ ಹಾಗೆ ಪೋಷಕರು ಸದಾ ನಿಗಾವಹಿಸುವುದು ಬಹಳ ಮುಖ್ಯವಾಗಿದೆ ಎಂದರು.
ಪ್ರೊ ದಯಾನಂದ ನಾಯ್ಕ್ ಮತ್ತು ಶ್ರೀ ಸಾಯಿ ಆಶ್ರಯ, ಮಂಗಳೂರು ಜೊತೆಯಾಗಿ ಸುಮಾರು 45 ವಿದ್ಯಾರ್ಥಿಗಳಿಗೆ ಹದಿನೆಂಟು ಸಾವಿರ ರೂಪಾಯಿ ಮೌಲ್ಯದ ಸಮವಸ್ತ್ರಗಳನ್ನು ವಿವರಿಸಿದರು.
ಮಂಗಳೂರು ವಿವಿ ವಸ್ತು ವಿಜ್ಞಾನ ವಿಭಾಗದ ಸಹ ಪ್ರಾಧ್ಯಾಪಕ ಡಾ ವಿಶ್ವನಾಥ್ ಟಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಮಂಜನಾಡಿ ಪಂಚಾಯತ್ ಸದಸ್ಯರಾದ ಅಬ್ಬಾಸ್, ಉಪಾಧ್ಯಕ್ಷರಾದ ವಿನ್ಸೆಂಟ್ ವೇಗಸ್ ಮೊದಲಾದವರು ಉಪಸ್ಥಿತರಿದ್ದರು.
ಶಾಲೆಯ ಮುಖ್ಯೋಪಾಧ್ಯಾಯರಾದ ಗೀತಾ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.