ಎಸ್ಡಿಪಿಐ ರಾಷ್ಟ್ರೀಯ ಅಧ್ಯಕ್ಷರಾದ ಎಂ.ಕೆ ಫೈಝಿಗೆ ಜಾಮೀನು ಮಂಜೂರು: ಬೋಳಿಯಾರಲ್ಲಿ ಸಂಭ್ರಮಾಚರಣೆ

Date:

ಬೋಳಿಯಾರ್:ಪೆ16: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ರಾಷ್ಟ್ರೀಯ ಅಧ್ಯಕ್ಷರಾದ ಎಂ.ಕೆ ಫೈಝಿರವರನ್ನು ಕಳೆದ 2025 ಮಾರ್ಚ್ ತಿಂಗಳಲ್ಲಿ ಇ.ಡಿ ನಿರ್ದೇಶನಾಲಯ ಅಕ್ರಮ ಹಣ ವರ್ಗಾವಣೆ ವಿಷಯಕ್ಕೆ ಸಂಬಂಧಿಸಿದಂತೆ ಸುಳ್ಳು ಮೊಕದ್ದಮೆಯಲ್ಲಿ ಬಂಧಿಸಲಾಗಿತ್ತು. ನಂತರ ದಿನಗಳಲ್ಲಿ ಪಕ್ಷದ ವತಿಯಿಂದ ಕಾನೂನು ರೀತಿಯ ಹೋರಾಟದ ಫಲವಾಗಿ ಇಂದು ದೆಹಲಿಯ ಉಚ್ಚನ್ಯಾಯಾಲಯ ಜಾಮೀನು ನೀಡಿದೆ ಇದರ ಹಿನ್ನೆಲೆಯಲ್ಲಿ ಎಸ್.ಡಿ.ಪಿ.ಐ ಪಕ್ಷದ ವತಿಯಿಂದ ದೇಶದಾದ್ಯಂತ ಸಂಭ್ರಮಾಚರಣೆ ನಡೆಯಿತು, ಎಸ್.ಡಿ.ಪಿ.ಐ ಬೋಳಿಯಾರ್ ಗ್ರಾಮ ಸಮಿತಿ ವತಿಯಿಂದ ಗ್ರಾಮ ಸಮಿತಿ ಅಧ್ಯಕ್ಷರಾದ ಶರ್ವನ್ ಬೋಳಿಯಾರ್ ರವರ ನೇತೃತ್ವದಲ್ಲಿ ಬೋಳಿಯಾರ್ ಜಂಕ್ಷನ್ ನಲ್ಲಿ ಸಂಭ್ರಮಾಚರಣೆ ನಡೆಯಿತು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಕ್ಷೇತ್ರ ಕಾರ್ಯದರ್ಶಿ ಉಬೈದ್ ಅಮ್ಮೆಂಬಳ ರವರು ಮಾತನಾಡಿ ಕೇಂದ್ರ ಸರಕಾರದ ಕೈಗೊಂಬೆಯಾಗಿ ಕಾರ್ಯ ನಿರ್ವಹಿಸುತ್ತಿರುವ ತನಿಖಾ ಸಂಸ್ಥೆಗಳು ಅನ್ಯಾಯವಾಗಿ ರಾಷ್ಟ್ರೀಯ ಅಧ್ಯಕ್ಷರನ್ನು ಬಂಧಿಸಿದ್ದು ಆದರೆ ಈ ಬಂಧನದಿಂದ ಆತ್ಮ ಸ್ಥೈರ್ಯ ಕಳೆದು ಕೊಳ್ಳದ ಪಕ್ಷದ ನಾಯಕರು ನಿರಂತರವಾಗಿ ಕಾನೂನು ರೀತಿಯ ಹೋರಾಟಗಳನ್ನು ನಡೆಸಿದರು ಇದರ ಫಲವಾಗಿ ಸತ್ಯಕ್ಕೆ ಜಯ ಸಿಕ್ಕಿದ್ದು ಇದು ಖಂಡಿತವಾಗಿಯೂ ಸುಳ್ಳು ಎಷ್ಟೇ ಮೇಳೈಸಿದರು ಒಂದಲ್ಲಾ ಒಂದು ದಿನ ಸತ್ಯದ ಹೋರಾಟಕ್ಕೆ ತಲೆಬಾಗಲೇ ಬೇಕೆಂಬ ದೊಡ್ಡ ಸಂದೇಶವನ್ನು ಜನತೆಗೆ ನೀಡಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕ್ಷೇತ್ರ ಸಮಿತಿ ಸದಸ್ಯರಾದ ಹನೀಫ್ ಬೋಳಿಯಾರ್ ಬ್ಲಾಕ್ ಸಮಿತಿ ಸದಸ್ಯರಾದ ರಹಿಮಾನ್ ಬೋಳಿಯಾರ್ ಮುಖಂಡರಾದ ಅಶ್ರಫ್ ಮೋನು ಬೋಳಿಯಾರ್ ಗ್ರಾಮ ಸಮಿತಿಯ ಹಾಗೂ ಬ್ರಾಂಚ್ ಮಟ್ಟದ ನಾಯಕರುಗಳು ಉಪಸ್ಥಿತರಿದ್ದು ಸಂಭ್ರಮಾಚರಣೆಯಲ್ಲಿ ವಿಜಯದ ಧ್ವನಿಗಳನ್ನು ಮೊಳಗಿಸಿದರು.

ಕಾರ್ಯಕ್ರಮದಲ್ಲಿ ಯೂನುಸ್ ರಂತಡ್ಕ ಸ್ವಾಗತಿಸಿದರು ಖಲೀಲ್ NG ಧನ್ಯವಾದಗೈದರು.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಬಸ್ ದುರಂತದಲ್ಲಿ ಮೃತಪಟ್ಟ ಅಟೋ ಚಾಲಕನ ಕುಟುಂಬಕ್ಕೆ ನೆರವು

ಉಳ್ಳಾಲ: ಇತ್ತೀಚೆಗೆ ತಲಪಾಡಿ ಯಲ್ಲಿ ನಡೆದ ಬಸ್ ದುರಂತದಲ್ಲಿ ಮೃತಪಟ್ಟ ದ.ಕ....

ವಿದ್ಯಾರ್ಥಿಗಳಿಂದ ಬಸ್ ನಿರ್ವಾಹಕನ ಮೇಲೆ ಹಲ್ಲೆಗೆ ಖಂಡನೆ

ಉಳ್ಳಾಲ: ಫೆ.19ರಂದು ಗುರುವಾರ ಬೆಳಿಗ್ಗೆ ಬಿಸಿ ರೋಡ್‌ನಿಂದ ವಯಾ ಮಂಚಿ–ಮುಡಿಪು ಕಡೆ...

ಉಚಿತ ಟ್ಯೂಷನ್: ಸಮಾರೋಪ

ಉಚಿತ ಟ್ಯೂಷನ್: ಸಮಾರೋಪ ಮೂಡುಬಿದಿರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ....

ಕೋಟೆಕಾರ್ ಪಟ್ಟಣ ಪಂಚಾಯತ್ ಸದಸ್ಯ ಸುಜೀತ್ ಮಾಡೂರು 6ವರ್ಷ ಬಿಜೆಪಿ ಪಕ್ಷದಿಂದ ಉಚ್ಛಾಟನೆ

ಉಳ್ಳಾಲ: ಬಿಜೆಪಿ ಪಕ್ಷದ ಚಿಹ್ನೆಯಿಂದ ಸ್ಪರ್ಧಿಸಿ ಕೋಟೆಕಾರ್ ಪಟ್ಟಣ ಪಂಚಾಯತ್ ಸದಸ್ಯರಾಗಿರುವ...