
ಕಡಬ : ಸುಳ್ಯ ವಿಧಾನಸಭಾ ಕ್ಷೇತ್ರದ ನೆಲ್ಯಾಡಿಯಲ್ಲಿ SDPI ಪಕ್ಷದ ಹೊಸ ಬ್ಲಾಕ್ ಸಮಿತಿಯನ್ನು ರಚಿಸಲಾಯಿತು ,ಈಗಾಗಲೇ ಸುಳ್ಯ ಕ್ಷೇತ್ರದಲ್ಲಿ ಮೂರು ಬ್ಲಾಕ್ ಸಮಿತಿಗಳಿದ್ದು ನಾಲ್ಕನೇ ಬ್ಲಾಕ್ ಸಮಿತಿಯಾಗಿ ನೆಲ್ಯಾಡಿ ಬ್ಲಾಕ್ ನ್ನು ಅಸ್ತಿತ್ವಕ್ಕೆ ತರಲಾಯಿತು,

SDPI ನೆಲ್ಯಾಡಿ ಬ್ಲಾಕ್ ಅಧ್ಯಕ್ಷರಾಗಿ ಸಿದ್ದೀಕ್ ಎನ್ ಕಾರ್ಯದರ್ಶಿಯಾಗಿ ಮುಸ್ತಫಾ ಎಸ್ ಎಮ್ ಉಪಾಧ್ಯಕ್ಷರಾಗಿ ಸಿದ್ದೀಕ್ ಮಣ್ಣಗುಂಡಿ ಜತೆ ಕಾರ್ಯದರ್ಶಿಯಾಗಿ ಅನ್ಸಾರ್ ಕೆ ಕೋಶಾಧಿಕಾರಿಯಾಗಿ ಅಬ್ದುಲ್ ಹಾರಿಫ್ ಸಮಿತಿ ಸದಸ್ಯರಾಗಿ ಸಮದ್ H, ಅನ್ವರ್ ಕೋಲ್ಪೆ ಆಯ್ಕೆ ಆಗಿದ್ದಾರೆ , ಇತ್ತೀಚೆಗೆ ನೆಲ್ಯಾಡಿಯ ಪಕ್ಷದ ಕಚೇರಿಯಲ್ಲಿ ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ಅನ್ವರ್ ಸಾದತ್ ರವರ ಉಪಸ್ಥಿತಿಯಲ್ಲಿ ನಡೆದ ಬ್ಲಾಕ್ ಮಟ್ಟದ ಆಂತರಿಕ ಚುನಾವಣೆಯಲ್ಲಿ ನೂತನ ಬ್ಲಾಕ್ ಸಮಿತಿಯನ್ನು ರಚಿಸಲಾಯಿತು ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಗಳಾದ ಅಶ್ರಫ್ ತಲಪಾಡಿ ಹಾಗೂ , ಶಾಕಿರ್ ಅಳಕೆ ಮಜಲು ಸುಳ್ಯ ವಿಧಾನಸಭಾ ಕ್ಷೇತ್ರಾಧ್ಯಕ್ಷರಾದ ಮೀರಾಝ್ ಸುಳ್ಯ ಕಾರ್ಯದರ್ಶಿ ರಫೀಕ್ ಎಸ್ ಎಮ್ ರವರು ಉಪಸ್ಥಿತರಿದ್ದರು


