ಕಾರ್ಮಿಕರಿಗೆ ನ್ಯಾಯಯುತ ಹಕ್ಕುಗಳನ್ನು ಅನುಭವಿಸಲು ಹಾಗೂ ಸಾಮಾಜಿಕ ಭದ್ರತೆಗೆ ಹೆಚ್ಚು ಆದ್ಯತೆ ನೀಡಲು ರಾಜ್ಯಸರಕಾರಕ್ಕೆ ಒತ್ತಾಯಿಸಿದ ಜಿಲ್ಲಾಧ್ಯಕ್ಷ -ರಹಿಮಾನ್ ಬೋಳಿಯಾರ್
ನೂತನ ಅಧ್ಯಕ್ಷರಾಗಿ ಸಾಮಾಜಿಕ ಹೋರಾಟಗಾರ ವಿಶುಕುಮಾರ್ ಆಯ್ಕೆ
ಮುಲ್ಕಿ: ಪೆ4: ಸೋಶಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್ ಎಸ್.ಡಿ.ಟಿ.ಯು ಮಂಗಳೂರು ನಗರ ಜಿಲ್ಲೆಗೆ ಒಳಪಡುವ ಕೊಲ್ನಾಡು ಮುಲ್ಕಿ ವಲಯ ಸಮಿತಿಗೆ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಕೆ.ಎಸ್ ರಾವ್ ನಗರ ಕೊಲ್ನಾಡು ಸಭಾಂಗಣದಲ್ಲಿ ರಹೀಂ ಮುಲ್ಕಿರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಮುಖ್ಯ ಅತಿಥಿಯಾಗಿ ಆಗಮಿಸಿದ ಎಸ್.ಡಿ.ಟಿ.ಯು ಮಂಗಳೂರು ನಗರ ಜಿಲ್ಲಾಧ್ಯಕ್ಷರಾದ ರಹಿಮಾನ್ ಬೋಳಿಯಾರ್ ಕಾರ್ಮಿಕರನ್ನು ಉದ್ದೇಶಿಸಿ ಮಾತಾನಾಡುತ್ತಾ ಎಸ್.ಡಿ.ಟಿ.ಯು ಎಂಬುವುದು ಕೇವಲ ನಾಲ್ಕು ಅಕ್ಷರಕ್ಕೆ ಮಾತ್ರ ಸೀಮಿತವಾದದಲ್ಲ ಬದಲಾಗಿ ಅದು ಈ ದೇಶದ ಕಾರ್ಮಿಕರ ಹಕ್ಕುಗಳಿಗಾಗಿ ಅವರ ಶ್ರೇಯೋಭಿವೃದ್ದಿಗಾಗಿ, ಸ್ವಾತಂತ್ರ್ಯಕ್ಕಾಗಿ, ಸ್ವಾಭಿಮಾನದ ಬದುಕಿಗಾಗಿ ನಿರಂತರವಾಗಿ ಹೋರಾಟ ಮಾಡುವ ಸಂಘಟನೆಯಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಅವರು ರಾಜ್ಯ ಸರಕಾರವು ಕಾರ್ಮಿಕರಿಗೆ ನ್ಯಾಯಯುತವಾದ ಹಕ್ಕುಗಳನ್ನು ಅನುಭವಿಸಲು ಹಾಗೂ ಸಾಮಾಜಿಕ ಭದ್ರತೆಗೆ ಹೆಚ್ಚು ಆದ್ಯತೆ ನೀಡಬೇಕೆಂದು ಒತ್ತಾಯಿಸಿದರು. ಕೊಲ್ನಾಡು ಮುಲ್ಕಿ ಘಟಕಕ್ಕೆ ನೂತನ ಅಧ್ಯರಾಗಿ ವಿಶುಕುಮಾರ್ ಕಾರ್ಯದರ್ಶಿಯಾಗಿ ಸಹಲಂ, ಉಪಾಧ್ಯಕ್ಷರಾಗಿ ರಾಜ್ ಮುಹಮ್ಮದ್, ಜೊತೆ ಕಾರ್ಯದರ್ಶಿಯಾಗಿ ಮಂಜುನಾಥ್, ಕೋಶಾಧಿಕಾರಿಯಾಗಿ ಮನ್ಸೂರು ಸಮಿತಿ ಸದಸ್ಯರುಗಳಾಗಿ ರಹೀಂ, ಹಾರಿಸ್, ಮಂಜುನಾಥ್ ಎಚ್ ಶರಣಪ್ಪ, ಅಶ್ರಫ್, ಸಿರಾಜ್ ಹಾಗೂ ಅಶ್ರಫ್ ಏಟು ಆಯ್ಕೆಯಾದರು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಎಸ್.ಡಿ.ಟಿ.ಯು ಜಿಲ್ಲಾ ಉಪಾಧ್ಯಕ್ಷರಾದ ಇರ್ಫಾನ್ ಕಾನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಬೆಂಗ್ರೆ ಯುವಕ ವೃಂದ ಕೊಲ್ನಾಡು ಅಧ್ಯಕ್ಷರಾದ ಮೊಹಮ್ಮದ್ ಅಲಿ ಉಪಸ್ಥಿತರಿದ್ದರು. ರಹೀಂ ಮುಲ್ಕಿ ಸ್ವಾಗತಿಸಿದರು, ಹಾರಿಸ್ ಧನ್ಯವಾದಗೈದರು.


