ರಾಜ್ಯ ಜೂನಿಯರ್ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಆಳ್ವಾಸ್ ತಂಡಗಳು ವಿನ್ನರ್ಸ್ ಹಾಗೂ ರನ್ನರ್ಸ್

Date:

ಮೂಡಬಿದಿರೆ: ಕರ್ನಾಟಕ ರಾಜ್ಯ ಜೂನಿಯರ್ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಚಾಮರಾಜನಗರ ಜಿಲ್ಲೆಯ ಡಾ ಬಿ. ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಜನವರಿ 19 ಮತ್ತು 20 ರಂದು ನಡೆಯಿತು. ಬಾಲಕರ ವಿಭಾಗದಲ್ಲಿ 24 ಮತ್ತು ಬಾಲಕಿಯರ ವಿಭಾಗದಲ್ಲಿ 16 ತಂಡಗಳು ಭಾಗವಹಿಸಿದ್ದವು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಿಂದ ಎರಡು ಬಾಲಕರ ಹಾಗೂ ಎರಡು ಬಾಲಕಿಯರ ತಂಡಗಳು ಸೇರಿದಂತೆ ಒಟ್ಟು 4 ತಂಡಗಳು ಪಾಲ್ಗೊಂಡಿದ್ದವು. ಲೀಗ್ ಹಾಗು ನಾಕೌಟ್ ಮಾದರಿ ಪಂದ್ಯಾಟದಲ್ಲಿ ಆಳ್ವಾಸ್ ಬಾಲಕ ಹಾಗೂ ಬಾಲಕಿಯರ ‘ಎ’ ತಂಡವು ಚಾಂಪಿಯನ್ಸ್ ಪಟ್ಟ ಅಲಂಕರಿಸಿದರೆ, ಆಳ್ವಾಸ್‌ನ ಬಾಲಕ ಹಾಗೂ ಬಾಲಕಿಯರ ‘ಬಿ’ ತಂಡಗಳು ರನ್ನರ್ ಆಪ್ ಪ್ರಶಸ್ತಿಯನ್ನು ಪಡೆದು ಪ್ರಾಬಲ್ಯ ಮೆರೆದವು.

ಸೆಮಿಫೈನಲಲ್ಲಿ ಆಳ್ವಾಸ್ ಬಾಲಕರ ‘ಎ’ ತಂಡವು ಚಾಮರಾಜನಗರದ ಜಿಲ್ಲಾ ತಂಡವನ್ನು ಹಾಗೂ ಆಳ್ವಾಸ್ ‘ಬಿ’ ತಂಡವು ರಾಜರಾಜೇಶ್ವರಿ ನಗರ ತಂಡವನ್ನು ಸೋಲಿಸಿತ್ತು. ಬಾಲಕಿಯರ ವಿಭಾಗದಲ್ಲಿ ಆಳ್ವಾಸ್ ‘ಎ’ ತಂಡವು ಮೂಡಿಗೆರೆ ತಂಡವನ್ನು ಹಾಗೂ ಆಳ್ವಾಸ್ ‘ಬಿ’ ತಂಡವು ರಾಜರಾಜೇಶ್ವರಿ ನಗರ ತಂಡವನ್ನು ನೇರ ಸೆಟ್ ನಿಂದ ಸೋಲಿಸಿ ಫೈನಲ್ ಹಂತಕ್ಕೆ ತಲುಪಿದ್ದವು. ಫೈನಲ್‌ನ ಎರಡು ವಿಭಾಗದಲ್ಲಿ ಆಳ್ವಾಸ್‌ನ 4 ತಂಡಗಳು ಹೋರಾಡಿ ಪ್ರಶಸ್ತಿಯನ್ನು ಪಡೆದುಕೊಂಡವು. ವಿಜೇತ ತಂಡವನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹಳ ಆಳ್ವ ಅಭಿನಂದಿಸಿದ್ದಾರೆ.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಲೂಡೊ ಬೋರ್ಡ್ ಶಂಕು ಆಕಾರದ ಪ್ಲಾಸ್ಟಿಕ್ ಕಾಯ್ನ್ ನುಂಗಿದ ಎಂಟರ ಬಾಲಕಿ ಉಸಿರುಗಟ್ಟಿ ಸಾವು.

ತೊಕ್ಕೊಟ್ಟು ಸಮೀಪದ ಕೊಲ್ಯದಲ್ಲಿ ದಾರುಣ ಘಟನೆ. ಉಳ್ಳಾಲ:ಫೆ-21:ಸಹೋದರ ಸಹೋದರಿಯೊಂದಿಗೆ ಮನೆಯಲ್ಲಿ ಲೂಡ ಆಟದಲ್ಲಿ...

ಹಿರಿಯ ಪತ್ರಕರ್ತ ಸುಂದರ ಕಬಕ ನಿಧನ

ಮಂಗಳೂರು; ಕಬಕ ನಿವಾಸಿ ಹಲವು ರಾಜ್ಯ ಮಟ್ಟದ ಟೀವಿ ಚಾನಲುಗಳಲ್ಲಿ ಕಾರ್ಯ...

ಬಸ್ ದುರಂತದಲ್ಲಿ ಮೃತಪಟ್ಟ ಅಟೋ ಚಾಲಕನ ಕುಟುಂಬಕ್ಕೆ ನೆರವು

ಉಳ್ಳಾಲ: ಇತ್ತೀಚೆಗೆ ತಲಪಾಡಿ ಯಲ್ಲಿ ನಡೆದ ಬಸ್ ದುರಂತದಲ್ಲಿ ಮೃತಪಟ್ಟ ದ.ಕ....

ವಿದ್ಯಾರ್ಥಿಗಳಿಂದ ಬಸ್ ನಿರ್ವಾಹಕನ ಮೇಲೆ ಹಲ್ಲೆಗೆ ಖಂಡನೆ

ಉಳ್ಳಾಲ: ಫೆ.19ರಂದು ಗುರುವಾರ ಬೆಳಿಗ್ಗೆ ಬಿಸಿ ರೋಡ್‌ನಿಂದ ವಯಾ ಮಂಚಿ–ಮುಡಿಪು ಕಡೆ...