ತಮಿಳುನಾಡಿನಲ್ಲಿ ಮುಷ್ಕರ, ಕರ್ನಾಟಕದಲ್ಲಿ ಗಗನಕ್ಕೇರಿದ ಕೋಳಿ ಮಾಂಸದ ಬೆಲೆ!

Date:

ಬೆಂಗಳೂರು: ತಮಿಳುನಾಡಿನ ಕೋಳಿ ಸಾಕಾಣಿಕೆ ರೈತರು ಮತ್ತು ಬ್ರಾಯ್ಲರ್ ಕಂಪನಿಗಳ ನಡುವಿನ ವಾದ ತೀವ್ರ ಸ್ವರೂಪ ಪಡೆದುಕೊಂಡಿದ್ದು, ದಕ್ಷಿಣ ಭಾರತದಾದ್ಯಂತ ಚಿಕನ್ ಪ್ರಿಯರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಸಾಕಾಣಿಕೆ ದರ ಪರಿಷ್ಕರಣೆಗೆ ಒತ್ತಾಯಿಸಿ ತಮಿಳುನಾಡಿನ ಕೋಳಿ ಸಾಕಾಣಿಕೆದಾರರು ಜನವರಿ 1ರಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದು, ಕೋಳಿ ಉತ್ಪಾದನೆಯನ್ನು ಸ್ಥಗಿತಗೊಳಿಸಿದ್ದಾರೆ.

ತಮಿಳುನಾಡಿನ ಪಲ್ಲಡಂ, ತಿರುಪ್ಪೂರ್, ಈರೋಡ್ ಮತ್ತು ಕೊಯಮತ್ತೂರು ಭಾಗದ ಸಾವಿರಾರು ರೈತರು ಖಾಸಗಿ ಬ್ರಾಯ್ಲರ್ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡು ಕೋಳಿ ಸಾಕಾಣಿಕೆ ಮಾಡುತ್ತಿದ್ದಾರೆ. ರೈತರ ಪ್ರಕಾರ, ಕಳೆದ 5-6 ವರ್ಷಗಳಿಂದ ಕಂಪನಿಗಳು ರೈತರಿಗೆ ನೀಡುವ ಪ್ರತಿ ಕೆಜಿ ಕೋಳಿಯ ಸಾಕಾಣಿಕೆ ದರ ಕೇವಲ 6.5 ರೂ.ನಷ್ಟಿದೆ. ಆದರೆ, ಈ ಅವಧಿಯಲ್ಲಿ ವಿದ್ಯುತ್ ದರ, ಕಾರ್ಮಿಕರ ವೆಚ್ಚ ಮತ್ತು ನಿರ್ವಹಣಾ ವೆಚ್ಚಗಳು ದುಪ್ಪಟ್ಟಾಗಿವೆ.

ಉದಾಹರಣೆಗೆ, ಫಾರಂಗಳಲ್ಲಿ ಬಳಸುವ ತೆಂಗಿನ ನಾರಿನ ಬೆಲೆ ಪ್ರತಿ ಟ್ರ್ಯಾಕ್ಟರ್ ಲೋಡ್‌ಗೆ ಹಿಂದೆ 3,000 ರೂ. ಇದ್ದದ್ದು ಈಗ 22,000 ರೂ.ಗೆ ಏರಿಕೆಯಾಗಿದೆ. ಹೀಗಾಗಿ, ಸಾಕಣೆದಾರರು ಬ್ರಾಯ್ಲರ್ ಕೋಳಿಗೆ ಪ್ರತಿ ಕೆಜಿಗೆ 20 ರೂ., ನಾಟಿ ಕೋಳಿಗೆ 25 ರೂ. ಮತ್ತು ಕೌಜಗ ಹಕ್ಕಿಗೆ 7 ರೂ. ದರ ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ.

ಅಲ್ಲದೆ, ಫೀಡ್ ಕನ್ವರ್ಶನ್ ರೇಶಿಯೋ (ಎಫ್‌ಸಿಆರ್‌) ಪದ್ಧತಿಯನ್ನು ರದ್ದುಗೊಳಿಸಬೇಕು ಮತ್ತು ಕೋಳಿ ಸಾಕಣೆದಾರರಿಗೆ ಕಲ್ಯಾಣ ಮಂಡಳಿ ರಚಿಸಬೇಕು ಎಂಬುದು ಇವರ ಹಕ್ಕೊತ್ತಾಯವಾಗಿದೆ.

ತಮಿಳುನಾಡಿನ ಪಲ್ಲಡಂ ಮತ್ತು ನಾಮಕ್ಕಲ್ ಭಾಗಗಳಿಂದ ಬೆಂಗಳೂರು ಹಾಗೂ ಕರ್ನಾಟಕದ ಇತರ ಭಾಗಗಳಿಗೆ ದಿನನಿತ್ಯ ಭಾರೀ ಪ್ರಮಾಣದ ಕೋಳಿ ಮಾಂಸ ಪೂರೈಕೆಯಾಗುತ್ತದೆ. ಮುಷ್ಕರದ ಹಿನ್ನೆಲೆಯಲ್ಲಿ ಈ ಪೂರೈಕೆ ಸರಪಳಿ ಈಗ ತುಂಡಾಗಿದೆ. ಇದರ ಪರಿಣಾಮ ಡಿಸೆಂಬರ್‌ನಲ್ಲಿ ಕೆಜಿಗೆ 200-240 ರೂ. ಇದ್ದ ಕೋಳಿ ಮಾಂಸದ ಬೆಲೆ ಇದೀಗ 300 ರಿಂದ 320 ರೂ.ವರೆಗೆ ತಲುಪಿದೆ. ಒಂದೊಮ್ಮೆ ಮುಷ್ಕರ ನಿಲ್ಲದೇ ಹೋದಲ್ಲಿ ಈ ದರ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಲೂಡೊ ಬೋರ್ಡ್ ಶಂಕು ಆಕಾರದ ಪ್ಲಾಸ್ಟಿಕ್ ಕಾಯ್ನ್ ನುಂಗಿದ ಎಂಟರ ಬಾಲಕಿ ಉಸಿರುಗಟ್ಟಿ ಸಾವು.

ತೊಕ್ಕೊಟ್ಟು ಸಮೀಪದ ಕೊಲ್ಯದಲ್ಲಿ ದಾರುಣ ಘಟನೆ. ಉಳ್ಳಾಲ:ಫೆ-21:ಸಹೋದರ ಸಹೋದರಿಯೊಂದಿಗೆ ಮನೆಯಲ್ಲಿ ಲೂಡ ಆಟದಲ್ಲಿ...

ಹಿರಿಯ ಪತ್ರಕರ್ತ ಸುಂದರ ಕಬಕ ನಿಧನ

ಮಂಗಳೂರು; ಕಬಕ ನಿವಾಸಿ ಹಲವು ರಾಜ್ಯ ಮಟ್ಟದ ಟೀವಿ ಚಾನಲುಗಳಲ್ಲಿ ಕಾರ್ಯ...

ಬಸ್ ದುರಂತದಲ್ಲಿ ಮೃತಪಟ್ಟ ಅಟೋ ಚಾಲಕನ ಕುಟುಂಬಕ್ಕೆ ನೆರವು

ಉಳ್ಳಾಲ: ಇತ್ತೀಚೆಗೆ ತಲಪಾಡಿ ಯಲ್ಲಿ ನಡೆದ ಬಸ್ ದುರಂತದಲ್ಲಿ ಮೃತಪಟ್ಟ ದ.ಕ....

ವಿದ್ಯಾರ್ಥಿಗಳಿಂದ ಬಸ್ ನಿರ್ವಾಹಕನ ಮೇಲೆ ಹಲ್ಲೆಗೆ ಖಂಡನೆ

ಉಳ್ಳಾಲ: ಫೆ.19ರಂದು ಗುರುವಾರ ಬೆಳಿಗ್ಗೆ ಬಿಸಿ ರೋಡ್‌ನಿಂದ ವಯಾ ಮಂಚಿ–ಮುಡಿಪು ಕಡೆ...