ಶಾಲಾಡಳಿತವು ಶಿಕ್ಷಣದೊಂದಿಗೆ ಕೈ ಜೋಡಿಸಿದಾಗ ಯಶಸ್ಸು ಸಾಧ್ಯ: ಶಶಿಧರ್ ಡಿ. ಡಿ. ಪಿ. ಐ.

Date:

ಉಳ್ಳಾಲ: ಸರಕಾರವು ಇಂದು ಸರಕಾರಿ ಶಾಲೆಗಳ ಎಲ್ಲಾ ವ್ಯವಸ್ಥೆಗಳೊಂದಿಗೆ ಉತ್ತಮವಾದ ಬೆಳವಣಿಗೆಗೆ ಪೂರಕವಾದ ವ್ಯವಸ್ಥೆಗಳನ್ನು ಕೈಗೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಸಯ್ಯದ್ ಮದನಿ ಚಾರಿಟೇಬಲ್ ಟ್ರಸ್ಟ್ ತನ್ನ ಕನ್ನಡ ಮಾಧ್ಯಮ ಶಾಲೆಗಳಿಗೆ ಬಹಳಷ್ಟು ವ್ಯವಸ್ಥೆಯನ್ನು ಮಾಡುವುದು ಶ್ಲಾಘನೀಯ ಎಂದು ದಕ್ಷಿಣ ಕನ್ನಡ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಶ್ರೀ ಶಶಿಧರ್ ರವರು ಹೇಳಿದರು.

ಅವರು ಸಯ್ಯದ್ ಮದನಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಹಳೇಕೋಟೆಯಲ್ಲಿ ನಡೆಸಲ್ಪಡುವ ಡುತಿರುವ ಸಯ್ಯದ್ ಮದನಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಮತ್ತು ಸಯ್ಯದ್ ಮದನಿ ಪ್ರೌಢ ಶಾಲೆಗಳ ವಾರ್ಷಿಕೋತ್ಸವದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಾ ಈ ಅನುದಾನಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗೆ ಉಚಿತ ಬಸ್ಸಿನ ವ್ಯವಸ್ಥೆ, ಉಚಿತ ಸಮವಸ್ತ್ರ ಹಾಗು ಇತರ ಶೈಕ್ಷಣಿಕ ಸಲಕರಣೆಯನ್ನು ಒದಗಿಸುವುದು ಶ್ಲಾಘನೀಯ ಎಂದರು.

ಸಯ್ಯದ್ ಮದನಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಜನಾಬ್ ಬಿ. ಜಿ. ಹನೀಫ್ ಹಾಜಿಯವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂದಲ್ಲಿ ಯುವ ಉದ್ಯಮಿ ಅಲೈನ್ಸ್ ಪ್ರಾಪರ್ಟಿಸ್ ಮಾಲಕರಾದ ಹನೀಫ್ ಮೈಸೂರ್, ದಕ್ಷಿಣ ಕನ್ನಡ ಜಿಲ್ಲಾ ಕುಲಾಲ ಯುವ ವೇದಿಕೆ ಅಧ್ಯಕ್ಷ ಅನಿಲ್ ದಾಸ್, ಉಪನಿರ್ದೇಶಕರಾದ ಶ್ರೀ ಶಶಿಧರ್ ರವರನ್ನು ಸನ್ಮಾನಿಸಲಾಯಿತು.

ಕ್ಷೇತ್ರ ಶಿಕ್ಷಣಧಿಕಾರಿ ಈಶ್ವರ್ ಹೆಚ್. ಆರ್., ಸಮನ್ವಯಧಿಕಾರಿ ತಹಶೀನ, ಮಸ್ಜಿದ್ ಆಲ್ ಕರೀಮ್ ನ ಅಧ್ಯಕ್ಷರಾದ ಜನಾಬ್ ಹಾಜಿ ಮೊಹಮ್ಮದ್ ತ್ವಾಹಾ, ಶಾಲಾ ಸಂಚಾಲಕರಾದ ಇಸ್ಮಾಯಿಲ್ ಹಾಜಬ್ಬಾ, ಟ್ರಸ್ಟ್ ಕೋಶಾಧಿಕಾರಿ ಅಬೂಬಕ್ಕರ್, ಶಾಲಾಭಿವೃದ್ಧಿ ಸದಸ್ಯ ಅಲ್ತಾಫ್ ಯು. ಹೆಚ್., ಕರೀo ಯು. ಹೆಚ್., ಸಿ. ಆರ್.ಪಿ. ಮೋಹನ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

ಔಶಾಲಾ ಮುಖ್ಯ ಶಿಕ್ಷಕ ಶ್ರೀ. ಕೆ.ಎo.ಕೆ. ಮಂಜನಾಡಿ ಸ್ವಾಗತಿಸಿದರು. ಶಿಕ್ಷಕಿ ಶಶಿಕಲಾ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಸಪ್ನಾರವರು ವಂದಿಸಿದರು. ಶಿಕ್ಷಕಿಯಾರಾದ ಶಕೀಲ, ಅಸ್ಮಾ ಮತ್ತು ವಿದ್ಯಾಶ್ರೀ ರಾವ್ ರವರು ವಿಜೇತರ ಪಟ್ಟಿಯನ್ನು ವಾಚಿಸಿದರು.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಬ್ರೇಕಿಂಗ್ ನ್ಯೂಸ್: ಬೆಳ್ತಂಗಡಿ ಪತಿ ಹತ್ಯೆ ಪ್ರಕರಣ – ಕೊಲೆ ಸಾಬೀತಾದರೂ ಪತ್ನಿಗೆ ಶಿಕ್ಷೆ ಇಲ್ಲ: ಕೋರ್ಟ್ ತೀರ್ಪು

ಕೋರ್ಟ್ ತೀರ್ಪಿನ ಪೂರ್ಣ ವಿವರ ಇಲ್ಲಿದೆ ಮಂಗಳೂರು: ಬೆಳ್ತಂಗಡಿ ತಾಲೂಕಿನ ನಾವೂರು...

ಬಾಂಗ್ಲಾ ಪ್ರಜೆಗೆ ಪಾಸ್‌ಪೋರ್ಟ್ ಮಾಡಲು ಸಹಾಯ: ವಿಟ್ಲ ಪೊಲೀಸ್ ಕಾನ್ಸ್ಟೇಬಲ್ ಬಂಧನ

ಪಾಸ್‌ಪೋರ್ಟ್‌ ವೆರಿಫಿಕೇಶನ್‌ ವೇಳೆ ಸುಳ್ಳು ದಾಖಲೆ ಸೃಷ್ಟಿಸಿದ ಪೊಲೀಸ್ ಸಿಬ್ಬಂದಿಯನ್ನೇ ಬಂಧಿಸಿದ...

ಸಂಪಿಗೆ ಚಚ್೯ನಲ್ಲಿ ಕ್ರಿಸ್ಮಸ್-2025

ಕ್ರಿಸ್ಮಸ್ ನ ಆದಶ೯ ಮತ್ತು ತತ್ವಗಳನ್ನು ಮೈಗೂಡಿಸಿಕೊಳ್ಳಿ ಮೂಡುಬಿದಿರೆ: ಮಂಗಳೂರು ಧಮ೯ಪ್ರಾಂತ್ಯ ಮೂಡುಬಿದಿರೆ...

ಆದರ್ಶ ಗ್ರಾಮಾಭಿವೃದ್ಧಿ, ಸೇವಾ ಸಂಸ್ಥೆಯ ರಜತ ಮಹೋತ್ಸವ

ಮೂಡುಬಿದಿರೆ: ಆದರ್ಶ ಗ್ರಾಮಾಭಿವೃದ್ಧಿ ಹಾಗೂ ಸೇವಾ ಸಂಸ್ಥೆಯ ರಜತ ಮಹೋತ್ಸವ ಕಾಯ೯ಕ್ರಮವು...