ಬಂಟ್ವಾಳ: ಕಲ್ಲಡ್ಕ ಸಮೀಪದ ಸುರಿಬೈಲ್ ಬದ್ರಿಯಾ ಜುಮಾ ಮಸೀದಿ ಅಧೀನದ ಹಿದಾಯತ್ತುಲ್ ಇಸ್ಲಾಂ ರಿಫಾಈ ದಫ್ ರಾತೀಬ್ ಕಮಿಟಿಯ 67ನೇ ವಾರ್ಷಿಕ ಸಮಾರಂಭ ಹಾಗೂ 4 ದಿವಸಗಳ ಧಾರ್ಮಿಕ ಪ್ರವಚನ ಕಾರ್ಯಕ್ರಮ ಜನವರಿ 22ರಿಂದ 25 ರವರೆಗೆ ಸುರಿಬೈಲ್ ನಲ್ಲಿ ನಡೆಯಲಿದೆ.
ಜನವರಿ 22ರಂದು ಅಸ್ಸೈಯದ್ ಝೈನುಲ್ ಆಬಿದೀನ್ ತಂಙಳ್ ದುಗ್ಗಲಡ್ಕ ದುವಾಗೈಯಲಿದ್ದು, ಅಬೂಬಕ್ಕರ್ ಸಿದ್ದೀಕ್ ಜಲಾಲಿ ಕಕ್ಕಿಂಜೆ ಪ್ರಭಾಷಣ ಮಾಡಲಿದ್ದಾರೆ. ಜನವರಿ 23ರಂದು ಮುಹಮ್ಮದ್ ರಾಫಿ ಹಿಮಮಿ ಕಾಮಿಲ್ ಸಖಾಫಿ ಬೆಳ್ಮ ಪ್ರಭಾಷಣ ಮಾಡಲಿದ್ದು, ಜನವರಿ 24ರಂದು ಕೆ.ಪಿ ಸಿರಾಜುದ್ಧೀನ್ ಸಖಾಫಿ ಕನ್ಯಾನ ಪ್ರಭಾಷಣ ಮಾಡಲಿದ್ದಾರೆ.

ಜನವರಿ 25ರಂದು ಸಮಾರೋಪ ಸಮಾರಂಭದ ಅಧ್ಯಕ್ಷತೆ ಮತ್ತು ದುವಾ ನೇತೃತ್ವವನ್ನು ಅಲ್ ಹಾಜ್ ಅಸ್ಸೈಯದ್ ಜಮಾಲುದ್ಧೀನ್ ಅಲ್ ಬುಖಾರಿ ತಂಙಳ್ ಮಳ್ ಹರ್ ವಹಿಸಲಿದ್ದು, ಸುರಿಬೈಲ್ ಮುದರ್ರಿಸ್ ಮುಹಮ್ಮದ್ ಸಖಾಫಿ ರಾತೀಬ್ ನೇತೃತ್ವ ವಹಿಸಲಿದ್ದು ಮುಖ್ಯ ಪ್ರಭಾಷಣ ಮಾಡಲಿದ್ದು, ಶೈಖುನಾ ಮಂಚಿ ಉಸ್ತಾದ್, ಜಮಾತ್ ಸಮಿತಿಯ ಅಧ್ಯಕ್ಷರಾದ ಅಬ್ದುಲ್ ಅಝೀಝ್ ದೊಡ್ಡಮನೆ ಸೇರಿದಂತೆ ಹಲವಾರು ಉಲಮಾ ಉಮರಾ ಪ್ರಮುಖರು ಭಾಗವಹಿಸಲಿದ್ದಾರೆ.



