ಕಲ್ಲಡ್ಕ: ಸುರಿಬೈಲ್ ಜುಮಾ ಮಸೀದಿಯ ಜಮಾಅತ್ ಗೆ ಒಳಪಟ್ಟ ಸುರಿಬೈಲ್ ಕೋಡಿಬೈಲ್ ನಿವಾಸಿ ಸುರಿಬೈಲ್ ಜುಮಾ ಮಸೀದಿಯ ಆಡಳಿತ ಸಮಿತಿ ಮಾಜಿ ಅಧ್ಯಕ್ಷರಾದ ಕೋಡಿಬೈಲ್ ಅಬ್ದುಲ್ ರಹಿಮಾನ್ ಹಾಜಿಯವರು ಅನಾರೋಗ್ಯದಿಂದ ಇದ್ದು ಇಂದು ಬೆಳಿಗ್ಗೆ ಅವರ ಕೋಡಿಬೈಲ್ ಮನೆಯಲ್ಲಿ ನಿಧನರಾದರು.

ಇವರು ಮಂಗಳೂರುಸಪ್ನಾ ಸಾರೀಸ್ ಮಾಲಕರಾದ ಪರ್ವೇಝ್ ಮತ್ತು ಸಫ್ವಾನ್ ರವರ ತಂದೆ ಹಾಗೂ ಸುರಿಬೈಲ್ ದೊಡ್ಡಮನೆ ಹನೀಫ್ ಮತ್ತು ಸುರಿಬೈಲ್ ಜುಮಾ ಮಸೀದಿಯ ಆಡಳಿತ ಸಮಿತಿ ಅಧ್ಯಕ್ಷರಾದ ದೊಡ್ಡಮನೆ ಅಬ್ದುಲ್ ಅಝೀಝ್ ರವರ ಬಾವ (ಸಹೋದರಿಯ ಗಂಡ)


